ಹೋಮಿಯೋಪಥಿ ತುಂಬಾ ಸುರಕ್ಷಿತಾ ಪರಿಣಾಮಕಾರಿ – ಡಾ.ಸುಜಾತ
ಪುತ್ತೂರು: ಹೋಮಿಯೋಪಥಿ ಯಾವುದೇ ರೀತಿಯ ಅಡ್ಡಪರಿಣಾಮವಿಲ್ಲ ತುಂಬಾ ಸುರಕ್ಷಿತ ಪರಿಣಾಮಕಾರಿ ಎಂದು ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯ ಪ್ರಧಾನ ವೈದ್ಯಾಧಿಕಾರಿ ಡಾ.ಸುಜಾತ ಹೇಳಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆ ದೇರಳಕಟ್ಟೆ ಮತ್ತು ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಇದರ ಸಹಯೋಗದಲ್ಲಿ ಆ.18ರಂದು ಶ್ರೀ ಸತ್ಯ ಸಾಯಿ ಮಂದಿರದಲ್ಲಿ ಉಚಿತ ಹೋಮಿಯೋಪಥಿ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೋಗವನ್ನು ಬುಡದಿಂದಲೇ ಕಿತ್ತು ತೆಗೆಯುವ ಕೆಲಸ ಹೋಮಿಯೋಪಥಿ ಚಿಕಿತ್ಸೆಯಿಂದ ಮಾಡಲಾಗುತ್ತದೆ. ಈ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಎಲ್ಲರು ಸದುಪಯೋಗ ಮಾಡಿಕೊಳ್ಳಿ ಎಂದರು.
ಫಾದರ್ ಮುಲ್ಲಾರ್ ಆಸ್ಪತ್ರೆಯ ವೈದ್ಯರಾದ ಡಾ. ನಾಗರಾಜ್, ಡಾ. ಐಶ್ವರ್ಯ, ಡಾ. ಜ್ಯೋತಿ, ಶಿಬಿರದ ಆಯೋಜಕ ಅನಂತ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷ ಡಾ.ಸತ್ಯ ಸುಂದರ ರಾವ್ ಸ್ಚಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರಾ ರೈ, ದಾಮೋದರ್, ರಾಮಣ್ಣ ಗೌಡ, ರೂಪಕಲಾ, ಹೇಮಲತಾ, ಎ ಟಿ ರೈ ಅತಿಥಿಗಳನ್ನು ಗೌರವಿಸಿದರು. ಸಾಯಿಶ್ವರಿ ಮತ್ತು ಜೀವಿತಾ ಪ್ರಾರ್ಥಿಸಿ, ನಿವೃತ್ತ ಮುಖ್ಯಗುರು ರೂಪಕಲಾ ವಂದಿಸಿದರು. ದಯಾನಂದ ಕೆ ಎಸ್ ಕಾರ್ಯಕ್ರಮ ನಿರೂಪಿಸಿದರು.