ಬೆಟ್ಟಂಪಾಡಿ: ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ಸಿಂಹ ಮಾಸದ ಯಕ್ಷಗಾನ ತಾಳಮದ್ದಳೆ ಮತ್ತು ಹಿರಿಯ ಕಲಾವಿದರ ಸಂಸ್ಮರಣೆ ಸರಣಿ ಕಾರ್ಯಕ್ರಮದ ಉದ್ಘಾಟನೆ ಆ. 17 ರಂದು ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಜರಗಿತು.
ಹಿರಿಯ ಕಲಾವಿದ ಬಿ. ವೆಂಕಟ್ರಾವ್ ಬೆಟ್ಟಂಪಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಈ ವೇಳೆ ಉದ್ಯಮಿ ಯತೀಶ್ ರೈ ಚೆಲ್ಯಡ್ಕ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಸಂಘದ ಗೌರವಾಧ್ಯಕ್ಷ ಎನ್. ಸಂಜೀವ ರೈ ನುಳಿಯಾಲು, ಗೌರವ ಸಲಹೆಗಾರರಾದ ಸುಂದರ ಶೆಟ್ಟಿ ಬೆಟ್ಟಂಪಾಡಿ, ಅಧ್ಯಕ್ಷ ಐ. ಗೋಪಾಲಕೃಷ್ಣ ರಾವ್, ಕಾರ್ಯದರ್ಶಿ ಪ್ರದೀಪ ರೈ ಕೆ., ಕೋಶಾಧಿಕಾರಿ ಶ್ಯಾಮ್ ಪ್ರಸಾದ್ ಎಂ., ಸಂಚಾಲಕ ಪಾರ ಸುಬ್ಬಣ್ಣ ಗೌಡ, ಭಾಗವತರಾದ ರಾಮಚಂದ್ರ ಮಣಿಯಾಣಿ, ಬಿ. ವಿಷ್ಣುರಾವ್, ಬೆಟ್ಟಂಪಾಡಿ ದೇವಳದ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ, ಹಿರಿಯ ಅರ್ಥಧಾರಿ ಭಾಸ್ಕರ ಶೆಟ್ಟಿ ಮತ್ತು ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಹಿರಿಯ ಕಲಾವಿದರ ಸಂಸ್ಮರಣೆ
ಬೆಳಿಗ್ಗೆ ಸಿಂಹಮಾಸದ ಯಕ್ಷಗಾನ ತಾಳಮದ್ದಳೆ ‘ಸೀತಾಪಹಾರ’ ನಡೆಯಿತು. ಮಧ್ಯಾಹ್ನ ಹಿರಿಯ ಕಲಾವಿದ ದಿ. ಅಡ್ಯನಡ್ಕ ಕೃಷ್ಣ ಭಂಡಾರಿಯವರ ಸಂಸ್ಮರಣೆ ಮಾಡಲಾಯಿತು. ಕೃಷ್ಣ ಭಂಡಾರಿಯವರ ಪುತ್ರ, ಯಕ್ಷಗಾನ ಕಲಾವಿದ ನರಸಿಂಹ ಸಿ.ಕೆ.ಯವರನ್ನು ಗೌರವಿಸಲಾಯಿತು. ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಸಂಸ್ಮರಣಾ ಭಾಷಣ ಮಾಡಿದರು.