ಪುತ್ತೂರು:ಪುತ್ತೂರು ಯೋಗ ಕೇಂದ್ರ ಆಯೋಜಿಸಿದ ಯೋಗ ಸತ್ಸಂಗದ 8 ನೇ ಆವೃತ್ತಿಯು ಉಪ್ಪಿನಂಗಡಿ ಸಮೀಪದ ಬಳ್ಳಿ ಆಯುರ್ಗ್ರಾಮ ದಲ್ಲಿ ಆ.18ರಂದು ನಡೆಯಿತು.
ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿ ವಿ ಎಸ್ ಭಟ್ ಸತ್ಸಂಗಕ್ಕೆ ಚಾಲನೆ ನೀಡಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ನರೇಂದ್ರ ರೈ ದೇರ್ಲ ವಿಶೇಷ ಉಪನ್ಯಾಸ ನೀಡಿ ಕೃಷಿ, ಆಹಾರ, ಮತ್ತು ಯೋಗದ ನಡುವಿನ ಸಂಬಂಧದ ಕುರಿತು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಭಾರತದ ಸಂಸ್ಕೃತಿಯಲ್ಲಿ ಯೋಗದ ಪ್ರಾಮುಖ್ಯತೆ ಮತ್ತು ಯುವ ಜನತೆಗೆ ಮಹತ್ವವನ್ನು ತಿಳಿಸಿದರು.ಪ್ರಗತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.
ಪ್ರಗತಿ ಶಿಕ್ಷಣ ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ,ದಂತ ವೈದ್ಯ ಡಾ. ರಾಜಾರಾಮ,ಹಿರಿಯ ವೈದ್ಯ ಡಾ. ಕೆ ಜಿ ಭಟ್, ಯೋಗ ಕೇಂದ್ರದ ಪ್ರಸಾದ ಪಾಣಾಜೆ ಮತ್ತು ಗಿರೀಶ ಮಳಿ, ಪ್ರಶಾಂತಿ ಸದ್ಭಾವನಾ ಟ್ರಸ್ಟ್ ನ ಸಂಚಾಲಕರು ಮತ್ತು ಸದಸ್ಯರು ಸೇರಿ ಹಲವಾರು ಯೋಗಾಸಕ್ತರು, ಮುಖ್ಯಸ್ಥೆ ಐರಿನ್ ಲೋಬೊ ಮತ್ತು ಡಾ .ಸುಪ್ರೀತ್ ಲೋಬೋ ಹಾಗು ಕುಟುಂಬಸ್ಥರು, ಉಪಸ್ಥಿತರಿದ್ದರು.