ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

0

ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದುಳಿದವರ, ಶೋಷಿತರ ಧ್ವನಿಯಾಗಿದ್ದರು- ಎಂ. ಬಿ. ವಿಶ್ವನಾಥ ರೈ

ಪುತ್ತೂರು: ಪುತ್ತೂರು ಕಾಂಗ್ರೆಸ್ ಹಿಂದುಳಿದ ವರ್ಗ ಘಟಕ ಸಮಿತಿಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 170 ನೇ ಜಯಂತಿಯನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ. ವಿಶ್ವನಾಥ ರೈ ದೀಪ ಬೆಳಗಿಸಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದುಳಿದವರ, ಶೋಷಿತರ ಧ್ವನಿಯಾಗಿದ್ದರು. ಅವರು ಅಸ್ಪ್ರಶ್ಯತೆಯನ್ನು ನಿರ್ಮೂಲನೆಗಾಗಿ ಪಣತೊಟ್ಟಿದ್ದರು. ಅವರ ವಿಶ್ವಮಾನವೀಯ ತತ್ವಗಳು ನಮಗೆಲ್ಲರಿಗೂ ದಾರಿದೀಪವಾಗಿದೆ ಎಂದರು.


ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತಗಳ ಮೂಲಕ ಪ್ರೇರಣೆಗೊಂಡು ಹಿಂದುಳಿದವರ ಶೋಷಿತರ ಅಸ್ಪೃಶ್ಯತೆಯರ ಅಭಿವೃದ್ಧಿಗಾಗಿ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಆ ಮೂಲಕ ಅವರ ಅಭಿವೃದ್ಧಿಗೆ ಕಾರಣರಾಗಿದ್ದರು ಎಂದರು.


ಕೋಡಿಂಬಾಡಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷ, ಇಂಟಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ಮಹತ್ವಪೂರ್ಣ ಮಾನವೀಯ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾನ್ ಮಾನತಾವಾದಿಯಾಗಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಮನುಜ ಕುಲಕ್ಕೆ ನೀಡಿದ ವಿಶ್ವಮಾನವ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಜಗತ್ತಿಗೆ ಅವರ ಸಂದೇಶಗಳನ್ನು ಸಾರಬೇಕಾಗಿದೆ ಎಂದು ಅವರು ಹೇಳಿದರು.


ಮುಖ್ಯ ಅತಿಥಿ ಪುತ್ತೂರು ಕಾಂಗ್ರೆಸ್ ಎಸ್.ಸಿ. ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಮಾತನಾಡಿ ಹಿಂದುಳಿದ ಮತ್ತು ಶೋಷಿತ ವರ್ಗದವರಿಗೆ ಧಾರ್ಮಿಕ ಹಕ್ಕಿನ ಅರಿವನ್ನು ಹಾಗೂ ಸಾಮಾಜಿಕ ಬದಲಾವಣೆಯನ್ನು ತಂದುಕೊಟ್ಟವರಾಗಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಇಡೀ ವಿಶ್ವದ ಮಾನವ ಕುಲಕ್ಕೆ ಬೆಳಕನ್ನು ಚೆಲ್ಲಿದವರಾಗಿದ್ದಾರೆ ಎಂದರು.

ಮುಂಡೂರು ವಲಯ ಅಧ್ಯಕ್ಷ ಸುಪ್ರೀತ್ ಕನ್ಹಾಯ ಮಾತನಾಡಿ ಅಸ್ಪೃಶ್ಯತೆಯ ಕರಾಳ ನೆರಳಿನಲ್ಲಿ ಬದುಕುತಿದ್ದವರಲ್ಲಿ ಜಾಗೃತಿ ಮೂಡಿಸಿದ ಹಾಗೂ ಮೂಡನಂಬಿಕೆ, ಕಂದಾಚಾರಗಳನ್ನು ತೊಡೆದು ಹಾಕಿ ಜಾಗೃತಿ ಸಮಾಜವನ್ನು ನಿರ್ಮಾಣ ಮಾಡಿದ ಮಹಾನ್ ಚೇತನ ಬ್ರಹ್ಮಶ್ರೀ ನಾರಾಯಣ ಗುರುಗಳಾಗಿದ್ದರು ಹೇಳಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳು 170 ವರ್ಷಗಳ ಹಿಂದೆ ಜಗತ್ತಿಗೆ ಸಾರಿದ ಮಹಾನ್ ಸಂದೇಶಗಳು ಇಂದು ಕೂಡ ಜಗತ್ತಿನಾದ್ಯಂತ ಪಸರಿಸಿ ಕೊಂಡಿದೆ ಆ ಮೂಲಕ ಜಗತ್ತಿನಲ್ಲೇ ಸಮಾಜ ಸುಧಾರಣೆಗೆ ಪ್ರೇರಪಣೆಯಾಗಿದೆ. ಅವರ ತತ್ವ ಸಂದೇಶಗಳು ಇಂದಿಗೂ ಚಿರನೂತನವಾಗಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೇದನಾಥ ಸುವರ್ಣ, ಗಣೇಶ್ ಬಂಗೇರ, ಸುಜಾಯ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮುಹಮ್ಮದಾಲಿ, ಗ್ಯಾರೆಂಟಿ ಅನುಷ್ಠಾನದ ಯೋಜನಾ ಸಮಿತಿಯ ಸದಸ್ಯ ಹಾಗೂ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ಪುತ್ತೂರು ನಗರಸಭಾ ಸದಸ್ಯ ದಿನೇಶ್ ಶೇವಿರೆ, ಮೊದಲಾದವರು ಉಪಸ್ಥಿತರಿದ್ದರು.

ಪುತ್ತೂರು ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ನಿಡ್ಪಳ್ಳಿ ಅವರು ಸ್ವಾಗತಿಸಿ,ನಿರೂಪಿಸಿ,ಕಾಂಗ್ರೆಸ್ಸಿನ ಪದಾಧಿಕಾರಿ ಕೃಷ್ಣಪ್ಪ ಮುರ ವಂದಿಸಿದರು.

LEAVE A REPLY

Please enter your comment!
Please enter your name here