ಆ.21 -22:ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೂತನ ಗರ್ಭಗೃಹದ ಪಾದುಕಾನ್ಯಾಸ

0

ಆಲಂಕಾರು: ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಇಷ್ಟಿಕಾ ಸ್ಥಾಪನ ಗರ್ಭಪಾತ್ರನ್ಯಾಸ ಮತ್ತು ನೂತನ ಗರ್ಭಗೃಹದ ಪಾದಕಾನ್ಯಾಸ ಆ.21 ಮತ್ತು ಆ.22 ರಂದು ನಡೆಯಲಿದೆ.

ಆ.21 ರಂದು ಬುಧವಾರ ಬೆಳಿಗ್ಗೆ ಸಾಯಂಕಾಲ ನೂತನ ಗರ್ಭಗೃಹಕ್ಕೆ ಇಷ್ಟಿಕಾಸನ ಗರ್ಭಪಾತ್ರನ್ಯಾಸ ನಡೆದು ಆ.22 ರಂದು ಗುರುವಾರ ಬೆಳಿಗ್ಗೆ 9:00 ರಿಂದ ಕನ್ಯಾ ಲಗ್ನ ಸುಮುಹೂರ್ತದಲ್ಲಿ ನೂತನ ಗರ್ಭಗೃಹದ ಪಾದುಕಾನ್ಯಾಸ ನಡೆಯಲಿದೆ ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಅಗಮಿಸಿ ದೇವರ ಪ್ರಸಾದ ಸ್ವೀಕರಿಸುವಂತೆ ದೇವಾಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here