ಪುತ್ತೂರು: ಸವಣೂರು ಮೊಗರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಸಾಮಾಜಿಕ ಪರಿಶೋಧನ ಸಮಿತಿ ವತಿಯಿಂದ ಶಾಲಾ ಪೋಷಕರ ಸಭೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಫೀಕ್ ಎಂ.ಎ ಅಧ್ಯಕ್ಷತೆಯಲ್ಲಿ ಆ.19ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ಹಾಗೂ ಕಡಬ ತಾಲೂಕು ಸಾಮಾಜಿಕ ಪರಿಶೋಧನ ಮುಖ್ಯಸ್ಥ ಪ್ರವೀಣ್ ಮಾತನಾಡಿ, ಶಾಲೆಯ ಅಭಿವೃದ್ಧಿಗಾಗಿ ಪೋಷಕರು ಮಾಡಬೇಕಾದ ಕರ್ತವ್ಯ ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಸರಕಾರದಿಂದ ಆಗಬೇಕಾದ ಕೆಲವೊಂದು ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿ, ಶಿಕ್ಷಣದಲ್ಲಿ ಆಗಬೇಕಾದ ಹೊಸ ಬದಲಾವಣೆಯ ಕುರಿತಾದ ಪೋಷಕರಲ್ಲಿನ ಚಿಂತನೆ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಪರಿಶೋಧನಾ ಸಮಿತಿಯ ಸಿಬ್ಬಂದಿಗಳಾದ ಶ್ವೇತಾ, ಜಯ, ಪ್ರಭಾರ ಮುಖ್ಯಗುರು ಜುಸ್ತಿನಾ ಲಿಡ್ವಿನ್ ಡಿ ಸೋಜ, ಎಸ್.ಡಿ.ಎಂ.ಸಿ ಸದಸ್ಯರುಗಳಾದ ಕೇಶವ, ನಸೀಮಾ ಎಸ್.ಕೆ, ಪುಷ್ಪಾ ಹಾಗೂ ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು. ಪ್ರಭಾರ ಮುಖ್ಯಗುರು ಜುಸ್ತಿನಾ ಲಿಡ್ವಿನ್ ಡಿಸೋಜ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ದಯಾಮಣಿ ವಂದಿಸಿದರು.