ಆ.25: ದರ್ಬೆ ಆಶೀರ್ವಾದ್ ಎಂಟರ್‌ಪ್ರೈಸಸ್ ಲಕ್ಕೀ ಸ್ಕೀಂ.ನ 2ನೇ ಸೀಝನ್ ಶುಭಾರಂಭ- ಲೋಗೋ ಅನಾವರಣ, ಬ್ಯಾಗ್ ವಿತರಣೆ, ಮೊಬೈಲ್ ಆಪ್ ಅನಾವರಣ-ತುಳು ಚಿತ್ರರಂಗದ ನಟರು, ಉದ್ಯಮಿಗಳು, ಭಾಗಿ

0

ಪುತ್ತೂರು: ದರ್ಬೆ ಮೊಯಿದೀನ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಆಶೀರ್ವಾದ್ ಎಂಟರ್‌ಪ್ರೈಸಸ್ ಆಯೋಜಿಸಿರುವ ಲಕ್ಕೀ ಸ್ಕೀಂ ಯೋಜನೆಯ 2ನೇ ಸೀಝನ್ ಶುಭಾರಂಭ, ಲೋಗೋ ಅನಾವರಣ, ಆಯ್ದ 160 ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮತ್ತು ಮೊಬೈಲ್ ಆಪ್ ಅನಾವರಣ ಕಾರ್ಯಕ್ರಮ ಆ.25ರಂದು ಅಪರಾಹ್ನ 3ರಿಂದ ಬೈಪಾಸ್ ರಸ್ತೆಯಲ್ಲಿರುವ ಅಶ್ಮಿ ಕಂಫರ್ಟ್‌ನಲ್ಲಿ ನಡೆಯಲಿದೆ.

ತಾರಾಮೆರುಗು:
ಕಾರ್ಯಕ್ರಮಕ್ಕೆ ತಾರಾ ಮೆರುಗು ಬರಲಿದ್ದು, ತುಳು ಚಿತ್ರರಂಗದ ನಟರುಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ತುಳು ಚಿತ್ರರಂಗದ ನಿರ್ಮಾಪಕ ಹಾಗೂ ಹಿರಿಯ ಕಲಾವಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಡೈಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ, ತುಳು ಚಿತ್ರರಂಗದ ಕಲಾವಿದ ತುಳುನಾಡ ರಂಗ ಬೊಳ್ಳಿ ಖ್ಯಾತಿಯ ರವಿ ರಾಮಕುಂಜ, ಯೂಟ್ಯೂಬರ್ ಆತ್ಮೀಯ ಗಾನ ನಾಯಕ್, ಸಿಝ್ಲರ್ ಸಾಫ್ಟ್‌ಡ್ರಿಂಕ್ಸ್ ಮತ್ತು ಸಿಝ್ಲರ್ ಅಗ್ರಿಝೋನ್ ಮಾಲಕ ಪ್ರಸನ್ನಕುಮಾರ್ ಶೆಟ್ಟಿ, ಉದ್ಯಮಿ ಲಕ್ಷ್ಮಣ ಬೈಲಾಡಿ ಸಂಪ್ಯ, ಹುಬ್ಬಳ್ಳಿ ಟ್ರೇಡರ‍್ಸ್ ನ ಜಯರಾಜ್ ಶೆಟ್ಟರ್ ಹಾಗೂ ಝೀ ಕನ್ನಡ ಛೋಟಾ ಚಾಂಪಿಯನ್ ವಿನ್ನರ್ ಬೇಬಿ ಆತ್ಮಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಗ್ರಾಹಕರಿಗೆ ಆಶೀರ್ವಾದ ನೀಡಿದ ಸಂಸ್ಥೆ
ಆಶೀರ್ವಾದ ಎಂಟರ್‌ಪ್ರೈಸಸ್ ಆಯೋಜಿಸಿದ ಲಕ್ಕೀ ಸ್ಕೀಂ ಡ್ರಾ. ಯೋಜನೆಯ ಮೊದಲ ಸೀಸನ್ ಗ್ರಾಮೀಣ ಭಾಗದ ಜನರನ್ನು ತಲುಪಿ ಗ್ರಾಹಕರಿಗೆ ಹೊಸ ಭರವಸೆ ಮೂಡಿದ್ದು ಸಂಸ್ಥೆಯ ಹೆಗ್ಗಳಿಕೆಯಾಗಿದೆ. ತನ್ನ ಕಾರ್ಯ ವೈಖರಿಯಲ್ಲಿ ಹೊಸ ಛಾಪನ್ನು ಮೂಡಿಸಿ, ಸಾಮಾನ್ಯ ವ್ಯಕ್ತಿಗೆ ಕೂಡ ಕೈಗೆಟಕುವ ರೀತಿಯಲ್ಲಿ ಲಕ್ಕೀ ಕೂಪನ್ ಮೂಲಕ ಬಹುಮಾನಗಳನ್ನು ನೀಡುತ್ತಾ ಬಂದಿದ್ದು ಗ್ರಾಹಕರಿಗೆ ಆಶೀರ್ವಾದ ಮಾಡಿದೆ. ಇದೀಗ ಮೊದಲ ಸೀಝನ್‌ನಲ್ಲಿ ಗ್ರಾಹಕರ ಮನಸ್ಸಿನ ಆಕಾಂಕ್ಷೆಯನ್ನು ಪೂರೈಸುತ್ತಿರುವ ಸಂಸ್ಥೆ ಇದೀಗ 2ನೇ ಸೀಝನ್ ಆರಂಭಕ್ಕೆ ಸಿದ್ಧತೆ ನಡೆಸಿದೆ.

LEAVE A REPLY

Please enter your comment!
Please enter your name here