ಆ.26: ಪೆರ್ಲಂಪಾಡಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ, ಮೊಸರು ಕುಡಿಕೆ ಉತ್ಸವ

0

ಪುತ್ತೂರು: ಯುವಕ ಮಂಡಲ ಕೊಳ್ತಿಗೆ ಪೆರ್ಲಂಪಾಡಿ ಮತ್ತು ಆದಿಶಕ್ತಿ ಮಹಿಳಾ ಮಂಡಲ ಕೊಳ್ತಿಗೆ ಪೆರ್ಲಂಪಾಡಿ ಇವುಗಳ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಆ.26 ರಂದು ಶ್ರೀ ಷಣ್ಮುದೇವ ಭಜನಾ ಮಂದಿರದ ಬಳಿಯ ಪಂಚಾಯತ್‌ಗ ಬಯಲು ರಂಗಮಂದಿರ ಪೆರ್ಲಂಪಾಡಿ ಇಲ್ಲಿ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಪುಟಾಣಿ ಮಕ್ಕಳಿಂದ ಉದ್ಘಾಟನೆಗೊಂಡು ವಿವಿಧ ಆಟೋಟ ಸ್ಪರ್ಧೆಗಳು ಆರಂಭಗೊಳ್ಳಲಿದೆ. ಅಪರಾಹ್ನ 4.30 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಯುವಕ ಮಂಡಲದ ಅಧ್ಯಕ್ಷ ಹರ್ಷಿತ್ ಕುದ್ಕುಳಿ ಸಭಾಧ್ಯಕ್ಷತೆ ವಹಿಸಲಿದ್ದು, ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ, ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಷಣ್ಮುಖದೇವ ಪ್ರೌಢಶಾಲೆಯ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ, ಆದಿಶಕ್ತಿ ಮಹಿಳಾ ಮಂಡಲದ ಅಧ್ಯಕ್ಷೆ ಮಮತಾ ಗೋಳಿತ್ತಡ್ಕ, ಷಣ್ಮುದೇವ ಭಜನಾ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಕೊಂರ್ಬಡ್ಕ ದೊಡ್ಡಮನೆ ಭಾಗವಹಿಸಲಿದ್ದಾರೆ. ಬೆಳಿಗ್ಗೆಯಿಂದಲೇ ನಿರಂತರವಾಗಿ ಸ್ಪರ್ಧೆಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಯುವಕ ಮಂಡಲದ ಅಧ್ಯಕ್ಷ ಹರ್ಷಿತ್ ಕುದ್ಕುಳಿ, ಕಾರ್ಯದರ್ಶಿ ನಾಗೇಶ್ ಬೀರ್ಣಕಜೆ, ಕೋಶಾಧಿಕಾರಿ ದಯಾನಂದ ನೀಟಡ್ಕ, ಮಹಿಳಾ ಮಂಡಲದ ಅಧ್ಯಕ್ಷೆ ಮಮತಾ ಗೋಳಿತ್ತಡ್ಕ, ಕಾರ್ಯದರ್ಶಿ ವಿಶಾಲಾಕ್ಷಿ ಗೋಳಿತ್ತಡ್ಕ, ಕೋಶಾಧಿಕಾರಿ ಯಶೋಧ ಬಾಬುರಾಜೇಂದ್ರ ಹಾಗೂ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಪುರುಷರಿಗೆ ಜಾರುಕಂಬ, ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ, ಕಬಡ್ಡಿ, ಭಕ್ತಿಗೀತೆ, ಬಾಟ್ಲಿಗೆ ನೀರು ತುಂಬಿಸುವುದು, ಮಹಿಳೆಯರಿಗೆ ಸಂಗೀತ ಕುರ್ಚಿ, ಬಾಸ್ಕೆಟ್ ಬಾಲ್, ಮೇಣದ ಬತ್ತಿ ಉರಿಸುವುದು, ಮಡಿಕೆ ಒಡೆಯುವುದು, ಬಲೂಕು ಆಟ, ತಟ್ಟೆ ಓಟ, ತ್ರೋಬಾಲ್, ಹಗ್ಗ ಜಗ್ಗಾಟ, ಭಕ್ತಿಗೀತೆ, ಭಾವಗೀತೆ, ಮಕ್ಕಳಿಗೆ ಬಲೂನ್ ಆಟ, ಕಬಡ್ಡಿ, ಸಂಗೀತ ಕುರ್ಚಿ, ಬಾಟ್ಲಿಗೆ ನೀರು ತುಂಬಿಸುವುದು,ಭಕ್ತಿ ಮತ್ತು ಭಾವಗೀತೆ, 5 ವರ್ಷದ ಕೆಳಗಿನ ಮಕ್ಕಳಿಗೆ ಶ್ರೀ ಕೃಷ್ಣನ ವೇಷ ಹಾಕುವ ಸ್ಪರ್ಧೆ ನಡೆಯಲಿದೆ.

LEAVE A REPLY

Please enter your comment!
Please enter your name here