ದರ್ಬೆಯಲ್ಲಿ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ & ಫರ್ನಿಚರ್ಸ್ ನಲ್ಲಿ ಲಕ್ಕಿ ಸ್ಕೀಂ ಕಾರ್ಡ್ ಬಿಡುಗಡೆ

0

ಪಾರದರ್ಶಕತೆಯ ವ್ಯವಹಾರ ಸಂಸ್ಥೆ ಯಶಸ್ಸಿನ ರಹದಾರಿ: ಒಡಿಯೂರು‌‌ ಶ್ರೀ

ಗ್ರಾಹಕನ ಸಂತೃಪ್ತಿಯೇ ವ್ಯವಹಾರದ ಯಶಸ್ಸು‌: ಸವಣೂರು ಸೀತಾರಾಮ ರೈ

ವಿಟ್ಲ: ಸುಮುಹೂರ್ತದಲ್ಲಿ ಆರಂಭಿಸಿದ ಕೆಲಸ ಯಶಸ್ಸಾಗುತ್ತದೆ. ಇದೊಂದು ಅನುಕೂಲಕರ ಕಾರ್ಯವಾಗಿದೆ. ಪಾರದರ್ಶಕತೆಯ ವ್ಯವಹಾರ ಸಂಸ್ಥೆ ಯಶಸ್ಸಿನ ರಹದಾರಿ.
ಪ್ರಾಮಾಣಿಕ ಪ್ರಯತ್ನ ದಿಂದ ಸಂಸ್ಥೆ 28 ವರ್ಷ ಪೂರೈಸಲು ಸಾಧ್ಯವಾಗಿದೆ. ಧಾರ್ಮಿಕತೆ ನಮ್ಮೊಳಗೆ ಬೇಕಾಗಿದೆ. ಈ‌ ಸಂಸ್ಥೆ ಜನಪ್ರೀಯ ಗೊಳ್ಳುವುದರಲ್ಲಿ ಯಾವುದೇ ಸಂದೇಶವಿಲ್ಲ. ಸ್ವಾರ್ಥ ತೊರೆದ ಪ್ರೀತಿ ನಮ್ಮಲ್ಲಿರಲಿ. ಮನಸ್ಸು ಸ್ಥಿರತೆಯಲ್ಲಿದ್ದರೆ ಸಮಸ್ಯೆಗಳಿಲ್ಲ. ನಾವು ಬುದ್ದಿಯಲ್ಲಿ ಲಕ್ಕಿಯಾಗಿದ್ದರೆ ಬದುಕು ಹಸನು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ಚಾಮೀಜಿರವರು ಹೇಳಿದರು‌.

ಅವರು ಕಳೆದ 28 ವರ್ಷಗಳಿಂದ ವಿಟ್ಲದಲ್ಲಿರುವ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ &ಫರ್ನಿಚರ್ಸ್ ನ ಸಹಸಂಸ್ಥೆ ದರ್ಬೆ ಸರ್ಕಲ್ ನ ಸಮೀಪ ಇರುವ ಪ್ರಶಾಂತ್ ಮಹಲ್ ನಲ್ಲಿರುವ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ & ಫರ್ನಿಚರ್ಸ್ ನಲ್ಲಿ ಆ.23ರಂದು ಸ್ಕೀಮ್ ನ ಕಾರ್ಡ್ ನ್ನು ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.

ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸವಣೂರು ಸೀತಾರಾಮ ರೈರವರು ಮಾತನಾಡಿ, ಇದೊಂದು ಒಳ್ಳೆಯ ಸಮಾರಂಭ. ಇದೊಂದು ಜನಾನುರಾಗಿಯಾಗಿರುವ ವ್ಯಕ್ತಿ ನಡೆಸುವ ನಂಬಿಕೆಯ ಸಂಸ್ಥೆ. ಉತ್ತಮ ಕಾರ್ಯಗಳಿಗೆ ನನ್ನ ಬೆಂಬಲ ಸಧಾ ಇದೆ. 28 ವರ್ಷದ ಪಯಣ ಎಂದರೆ ಅದು ಅಷ್ಟೊಂದು ಸುಲಭದ ಮಾತಲ್ಲ. ಗ್ರಾಹಕನ ಸಂತೃಪ್ತಿಯೇ ವ್ಯವಹಾರದ ಯಶಸ್ಸು‌. ಸಂಸ್ಥೆ ಇನ್ನಷ್ಟು ಬೆಳಗಲಿ ಎಂದರು. ಇದೇ ಸಂದರ್ಭದಲ್ಲಿ ಶ್ರೀಗಳು ಲಕ್ಕಿ ಸ್ಕೀಮ್ ನ ಐದನೇ ಆವೃತಿಯ ಕೂಪನ್‌ ಅನ್ನು ಬಿಡುಗಡೆ ಮಾಡಿದರು.

ಪ್ರಮುಖರಾದ ಕೃಷ್ಣ ನಾಯ್ಕ್ ಕೋಡಿಂಬಾಳ, ನಯನಾ ರೈ, ಸಂಸ್ಥೆಯ ಮಾಲಕರಾದ ಮಂಜುನಾಥ, ಪತ್ನಿ ರಶ್ಮಿಮಂಜುನಾಥ,ಮಾಲಕರ ತಾಯಿ ಭವಾನಿ, ಸಹೋದರ ರವೀಂದ್ರನಾಥ ಮುಳ್ಳೇರಿಯ, ಮಾಲಕರ ಪುತ್ರ ಶ್ರೀಶಾಸ್ತ, ಪುತ್ರಿ ಶ್ರೀದೇವಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿವೃತ್ತ ಸಿಡಿಪಿಒ ಶಾಂತಿ ಹೆಗ್ಡೆ ಪ್ರಾರ್ಥಿಸಿದರು. ರಾಧಾಕೃಷ್ಣ ಪೊರ್ದಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

25 ತಿಂಗಳ ಸ್ಕೀಮ್:
ಈ ಲಕ್ಕಿ ಸ್ಕೀಮ್ ನಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ರೂ. 500 ರ ಹಾಗೆ 50 ಕಂತು ಪಾವತಿಸ ಬೇಕಾಗಿದ್ದು, ವಿಜೇತ ಸದಸ್ಯರಿಗೆ ದ್ವಿಚಕ್ರ ವಾಹನ, ಎಲೆಕ್ಟೋನಿಕ್ಸ್ ಐಟಂ, ಫರ್ನಿಚರ್ ಐಟಂಗಳು, ಚಿನ್ನದ ಆಭರಣಗಳು ಇನ್ನೂ ಬಹಳಷ್ಟು ಐಟಂಗಳನ್ನು ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ. ಇಷ್ಟು ಮಾತ್ರವಲ್ಲದೆ ಬಂಪರ್ ಬಹುಮಾನವಾಗಿ ಸ್ವಿಪ್ಟ್ ಕಾರನ್ನು ಗೆಲ್ಲಬಹುದಾಗಿದೆ. ವಿಜೇತರಾಗದೆ ಉಳಿದ ಸದಸ್ಯರಿಗೆ ಅವರ ಪಾವತಿ ಮೊತ್ತದಷ್ಟೇ ಮೌಲ್ಯದ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಐಟಂ ಗಳನ್ನು ಸಂಸ್ಥೆ ಉತ್ತಮ ವಾರಂಟಿಯೊಂದಿಗೆ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ
ದೂರವಾಣಿ ಸಂಖ್ಯೆ 08251235122, ಮೊಬೈಲ್ ಸಂಖ್ಯೆ 9740242272ಯನ್ನು ಸಂಪರ್ಕಿಸಬಹುದಾಗಿದೆ.

ಸಂತೃಪ್ತ ಗ್ರಾಹಕರೆ ನಮ್ಮ ಆಸ್ತಿ

ಕಳೆದ 28 ವರುಷಗಳಿಂದ ವಿಟ್ಲದಲ್ಲಿ ನಮ್ಮ ಸಂಸ್ಥೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ನಮ್ಮ ಯಶಸ್ಸಿಗೆ ಗ್ರಾಹಕ ಬಂಧುಗಳು ಮಾಡಿರುವ ಆಶೀರ್ವಾದವೇ ಪ್ರಮುಖ ಕಾರಣವಾಗಿದೆ. ಸಂತೃಪ್ತ ಗ್ರಾಹಕರೇ ನಮ್ಮ ಆಸ್ತಿಯಾಗಿದ್ದಾರೆ. ಪುತ್ತೂರಿಗೂ ನಮ್ಮ ವ್ಯವಹಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕಳೆದ ಆರು ತಿಂಗಳ ಹಿಂದೆ ಇಲ್ಲಿ‌ ಸಂಸ್ಥೆಯನ್ನು ಆರಂಭಿಸಿದೆವು. ನಮ್ಮ ನಿರೀಕ್ಷೇಗೂ ಮೀರಿದ ಸಹಕಾರವನ್ನು ಈ ಭಾಗದ ಜನರು ನಮಗೆ ನೀಡಿದ್ದಾರೆ. ವಿಟ್ಲದಲ್ಲಿ ಲಕ್ಕಿ ಸ್ಕೀಮ್ ನ ನಾಲ್ಕು ಆವೃತಿಯನ್ನು ಯಶಸ್ವಿಯಾಗಿ ಪೂರೈಸಿದ ನಾವು ಇದೀಗ ಐದನೇ ಆವೃತಿಯನ್ನು ಪುತ್ತೂರಿನಲ್ಲಿ ಆರಂಭಿಸಿದ್ದೇವೆ. ಸ್ಕೀಮ್ ನಲ್ಲಿ ಬೆಲೆಬಾಳುವ ವಸ್ತುಗಳ ಜೊತೆಗೆ ದ್ವಿಚಕ್ರ ವಾಹನ ಹಾಗೂ ಕೊನೆಯಲ್ಲಿ ಕಾರನ್ನು ಗೆಲ್ಲುವ ಅವಕಾಶವಿದೆ.
ಈವರೆಗೆ ಸಹಕಾರ ನೀಡಿರುವ ಗ್ರಾಹಕ ಬಂಧುಗಳಿಗೆ ನಾವು ಆಭಾರಿಯಾಗಿದ್ದೇವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿದ್ದೇವೆ‌ ಎಂದು ಮಾಲಕರಾದ ಮಂಜುನಾಥ ಅವರು ತಿಳಿಸಿದರು.


LEAVE A REPLY

Please enter your comment!
Please enter your name here