ಉಪ್ಪಿನಂಗಡಿ: ಇಲ್ಲಿನ ನಟ್ಟಿಬೈಲ್‌ನ ಶ್ರೀ ರಾಮ ಶಾಲೆಯಲ್ಲಿ ನಿರ್ಮಾಣಗೊಂಡ ಲವ- ಕುಶ ಎಂಬ ಹೆಸರಿನ ಅವಳಿ ಕುಟೀರವನ್ನು ಶ್ರೀ ಕ್ಷೇತ್ರ ಅರಿಕ್ಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಶ್ರೀ ಚಾಮುಂಡೇಶ್ವರಿಯ ಅಭಯ ಸದಾ ಈ ಶಾಲೆಯ ಮೇಲಿರಲಿ. ಎಲ್ಲಾ ವಿದ್ಯಾರ್ಥಿಗಳಿಗೂ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಜನನಿಯು ಮೊದಲ ಗುರುವಾಗಿದ್ದು, ಇತಿಹಾಸದಲ್ಲಿ ಮಹಿಳೆಯರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಆದರೆ ಈಗ ಮಹಿಳೆಯರಿಗೆ ಗೌರವ ಮತ್ತು ರಕ್ಷಣೆಯೇ ಇಲ್ಲದಾಗಿದೆ. ಸ್ವಾಭಿಮಾನ, ಧೈರ್ಯ, ಸಾಹಸದಲ್ಲಿ ಹೆಣ್ಣು ಮಕ್ಕಳು ಸದಾ ಮುಂದಿರಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಐತ್ತಪ್ಪ ನಾಯ್ಕ್ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಿಲ್ಪಿ ರಾಜೇಂದ್ರ ಸುಭಾಷ್‌ನಗರ, ಬಿಎಸ್ಸೆಫ್‌ನ ನಿವೃತ ಡೆಪ್ಯೂಟಿ ಕಮಾಡೆಂಟ್ ಚಂದಪ್ಪ ಮೂಲ್ಯ, ಕಂಗ್ವೆ ವಿಶ್ವನಾಥ ಶೆಟ್ಟಿ, ಗುತ್ತಿಗೆದಾರ ಪ್ರತಾಪ್ ಪೆರಿಯಡ್ಕ, ಶಾಲಾ ಗೌರವ ಸಲಹೆಗಾರ ಗೋವಿಂದ ಭಟ್, ಆಡಳಿತ ಮಂಡಳಿಯ ಅಧ್ಯಕ್ಷ ಸುನಿಲ್ ಅಣಾವು, ಉಪಾಧ್ಯಕ್ಷೆ ಅನುರಾಧ ಆರ್. ಶೆಟ್ಟಿ, ಕೋಶಾಧಿಕಾರಿ ಸುಧೀರ್ ಟಿ.ಎಸ್., ಸದಸ್ಯರಾದ ಜಯಂತ್ ಪೊರೋಳಿ, ಗುಣಕರ ಅಗ್ನಾಡಿ, ಗಣೇಶ್, ಗೀತಾಲಕ್ಷ್ಮೀ ತಾಳ್ತಜೆ, ಪೋಷಕ ಸಂಘದ ಅಧ್ಯಕ್ಷ ಉದಯ ಕುಮಾರ್ ಅತ್ರೆಮಜಲು, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ವಿಮಲ, ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ, ಸಂಚಾಲಕ ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಸುರೇಶ್ ಜಿ., ಪ್ರಾಂಶುಪಾಲ ಹೆಚ್.ಕೆ ಪ್ರಕಾಶ್, ಮುಖ್ಯಗುರು ಶ್ರೀಮತಿ ವೀಣಾ ಆರ್. ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ನಟ್ಟಿಬೈಲ್‌ನ ಮಾಧವ ಶಿಶು ಮಂದಿರದ ಸಮಿತಿಯ ವತಿಯಿಂದ ಈ ಸಂದರ್ಭ ಶಾಲೆಯ ಅನ್ನ ಬ್ರಹ್ಮ ಯೋಜನೆಗೆ ಒಂದು ಲಕ್ಷ ರೂ. ದೇಣಿಗೆಯನ್ನು ನೀಡಲಾಯಿತು.
ಶಾಲಾ ಸಂಚಾಲಕ ಯು.ಜಿ. ರಾಧಾ ಸ್ವಾಗತಿಸಿದರು. ಪ್ರೌಢವಿಭಾಗದ ಮುಖ್ಯಸ್ಥ ರಘುರಾಮ ಭಟ್ ವಂದಿಸಿದರು. ವಿದ್ಯಾ, ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.