ಪುತ್ತೂರು:ಕರ್ನಾಟಕ ರಾಜ್ಯ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ವತಿಯಿಂದ 2023-24ನೇ ಸಾಲಿನಲ್ಲಿ 625ಕ್ಕೆ 600 ಹಾಗೂ ಪಿಯುಸಿಯಲ್ಲಿ 600ಕ್ಕೆ 570ಕ್ಕಿಂತ ಅಧಿಕ ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪುತ್ತೂರು ತಾಲೂಕಿನ ಬಿಲ್ಲವ ಗ್ರಾಮ ಸಮಿತಿಗಳ ವಿದ್ಯಾರ್ಥಿಗಳನ್ನು ಅವರ ಹೆತ್ತವರ ಸಮ್ಮುಖದಲ್ಲಿ ಅಭಿನಂದಿಸುವ ಕಾರ್ಯಕ್ರಮವು ಆ.18 ರಂದು ಆಯಾಯ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅಭಿನಂದನೆ ಸಲ್ಲಿಸುವ ಮೂಲಕ ವಿಶಿಷ್ಟವಾಗಿ ನಡೆಸಲಾಯಿತು.
ಕೊಡಿಪ್ಪಾಡಿ ಗ್ರಾಮ ಸಮಿತಿಯ ಹರಿಶ್ಚಂದ್ರ ಪೂಜಾರಿ ಹಾಗೂ ಶ್ರೀಮತಿ ತೇಜಾಕ್ಷಿ ದಂಪತಿಗಳ ಪುತ್ರಿ ಕು|ಯಶಸ್ವಿ(606 ಅಂಕ), ಪುತ್ತೂರು ನಗರ ಬಿಲ್ಲವ ಸಮಿತಿಯ ಕೃಷ್ಣಪ್ಪ ಪೂಜಾರಿ ಹಾಗೂ ಶ್ರೀಮತಿ ಜಯಂತಿ ದಂಪತಿ ಪುತ್ರಿ ಕು|ಸಾಕ್ಷಿಕೃಷ್ಣ(618 ಅಂಕ), ನಿಡ್ಪಳ್ಳಿ ಬಿಲ್ಲವ ಸಮಿತಿಯ ಸುಂದರ ಪೂಜಾರಿ ಹಾಗೂ ಶ್ರೀಮತಿ ಭವಿತಾ ದಂಪತಿಗಳ ಪುತ್ರಿ ಕು|ಸಾನ್ವಿ ಎಸ್.ಪಿ(612 ಅಂಕ), ಬಿಲ್ಲವ ಸಮಿತಿಯ ಮೋಹನಾ ಪೂಜಾರಿ ಹಾಗೂ ಶ್ರೀಮತಿ ಜಲಜಾ ದಂಪತಿ ಪುತ್ರಿ ಕು|ಪ್ರಹರ್ಷ(604 ಅಂಕ), ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಜಯಂತ ನಡುಬೈಲು ಹಾಗೂ ಕಲಾವತಿ ಜಯಂತ್‌ರವರ ಪುತ್ರ ಅಂಚಿತ್ ನಡುಬೈಲು(ಪಿಯುಸಿಯಲ್ಲಿ 577 ಅಂಕ) ಹಾಗೂ ಬಿಲ್ಲವ ಗ್ರಾಮ ಸಮಿತಿ ಶಾಂತಿಗೋಡಿನ ಪರಕಮೆ ನಿವಾಸಿ ಜಗದೀಶ್ ಪೂಜಾರಿ ಪರಕಮೆ ಹಾಗೂ ಶ್ರೀಮತಿ ಪ್ರಮೀಳ ಜಗದೀಶ್ ದಂಪತಿ ಪುತ್ರಿ ಕು|ರಕ್ಷಾ ಪೂಜಾರಿ(ಫಾರ್ಮಾಸಿ)ರವರುಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಪುತ್ತೂರು ಘಟಕದ ಉಪಾಧ್ಯಕ್ಷ ಅಣ್ಣಿ ಪೂಜಾರಿ ಚಿಕ್ಕಮುಡ್ನೂರು, ಕಾರ್ಯದರ್ಶಿ ಶಮಿತ್ ಪರ್ಪುಂಜ, ಕೋಶಾಧಿಕಾರಿ ಶರತ್ ಕೈಪಂಗಳದೋಳ, ನಿರ್ದೇಶಕರುಗಳಾದ ದಾಮೋದರ ಸುವರ್ಣ ಶಾಂತಿಗೋಡು, ಗೌತಮ್ ಸರ್ವೆ, ಶ್ರೀಮತಿ ನವ್ಯ ದಾಮೋದರ್ ಶಾಂತಿಗೋಡು, ಕು|ವೈಷ್ಣವಿ ಶಾಂತಿಗೋಡು, ಕೊಡಿಪ್ಪಾಡಿ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಕೇಶವ ಸುವರ್ಣ ಪೆಲತ್ತಡಿ, ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸದಸ್ಯರಾದ ರಾಜೇಶ್ ಅರ್ಲಪದವು, ಕೆಮ್ಮಿಂಜೆ ಗ್ರಾಮ ಸಮಿತಿಯ ಕಾರ್ಯದರ್ಶಿ ಶ್ರೀಧರ ಪೂಜಾರಿ ಹಾಗೂ ಎಲ್ಲಾ ವಿದ್ಯಾರ್ಥಿಗಳ ಹೆತ್ತವರು ಹಾಗೂ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ಸಮಾಜದ ಆಸ್ತಿ..
ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಜಯರಾಮ್ ಬಿ.ಎನ್. ಸ್ವಾಗತಿಸಿ ಮಾತನಾಡಿ, ಅಧಿಕ ಅಂಕಗಳಿಸಿ ನಮ್ಮ ಸಮಾಜಕ್ಕೆ ಒಳ್ಳೆಯ ಹೆಸರನ್ನು ತಂದು ಕೊಟ್ಟ ವಿದ್ಯಾರ್ಥಿಗಳ ವಿದ್ಯಾಸಾಧನೆಯು ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ಸಮಾಜದ ಆಸ್ತಿ. ಇವರೆಲ್ಲರ ವಿದ್ಯಾರ್ಥಿ ಜೀವನವು ಉತ್ತಮ ರೀತಿಯಲ್ಲಿ ಸಾಗಿ ಭವಿಷ್ಯದಲ್ಲಿ ಅವರು ಹೆತ್ತವರಿಗೂ, ಊರಿಗೂ, ನಮ್ಮ ಸಮಾಜಕ್ಕೂ ಒಳ್ಳೆಯ ಹೆಸರನ್ನು ತರುವಲ್ಲಿಯೂ, ಅದೇ ರೀತಿಯಲ್ಲಿ ದೇಶದಲ್ಲಿ ಸತ್ಪ್ರಜೆಯಾಗಿ ಬಾಳುವಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಕೃಪಾಶೀರ್ವಾದ ಸದಾ ಅವರ ಮೇಲಿರಲಿ ಎಂದು ಶುಭ ಹಾರೈಸಿದರು.