ಗಿಡಗಳನ್ನು ನೆಟ್ಟ ಮಾತ್ರಕ್ಕೆ ವನ ಮಹೋತ್ಸವಕ್ಕೆ ಅರ್ಥ ಬರುವುದಿಲ್ಲ ಬದಲಾಗಿ ನೆಟ್ಟ ಗಿಡಗಳನ್ನು ನೀರೆರೆದು ಘೋಷಿಸಿ ಬೆಳೆಸಿದಾಗ ಮಾತ್ರ ಆಚರಿಸಿದ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಅಧ್ಯಕ್ಷೆ ವೇದಾವತಿ ರಾಜೇಶ್ ತಿಳಿಸಿದರು.
ಅವರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಬ್ ನ ವತಿಯಿಂದ ನಡೆದ ವನುಮೋಹೋತ್ಸವ ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿ ಹಣ್ಣಿನ ಗಿಡಗಳನ್ನು ಹಸ್ತಾಂತರ ಮಾಡಿ ಮಾತನಾಡಿದರು. ಲಯನ್ಸ್ ಕ್ಲಬ್ ಪುತ್ತೂರ್ದ ಮತ್ತು ಇದರ ಪ್ರಧಾನ ಕಾರ್ಯದರ್ಶಿ ಹಾಗೂ ವಿದ್ಯಾಮಾತ್ರ ಅಕಾಡೆಮಿಯ ಸಂಚಾಲಕರಾದ ಭಾಗ್ಯೇಶ್ ರೈ ಇವರು ಸಂದರ್ಭೋಚಿತವಾಗಿ ಮಾತುಗಳನ್ನಾಡಿ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಮೇಶ್ ಗೌಡ ಪಜಿಮಣ್ಣು ಇವರು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇವರ ಸಮಾಜಮುಖಿ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಕ್ಲಬ್ ನ ಉಪಾಧ್ಯಕ್ಷರಾದ ಲಯನ್ ರವಿಪ್ರಸಾದ್ ಶೆಟ್ಟಿ, ಕ್ಲಬ್ ನ ಮಾರ್ಕೆಟಿಂಗ್ ಎಂಡ್ ಕಮ್ಯುನಿಕೇಶನ್ ಚೇರ್ ಪರ್ಸನ್ ಲಯನ್ ರಂಜಿನಿ ಶೆಟ್ಟಿ, ಶಾಲಾ ಹಿರಿಯ ವಿದ್ಯಾರ್ಥಿಗಳೂ ಹಾಗೂ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ನಿರ್ದೇಶಕರೂ ಆದ ಲಯನ್ ಅಬೂಬಕ್ಕರ್ ಮುಲಾರ್ ಹಾಗೂ ಹನೀಫ್ ಮುಂಡೂರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರುಗಳಾದ ವಿಜಯಾ ಪಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ ಶಿಕ್ಷಕಿ ಮೂಕಾಂಬಿಕಾ ವಂದಿಸಿದರು ದೈಹಿಕ ಶಿಕ್ಷಣ ಶಿಕ್ಷಕಿ ವನಿತ ಬಿ ಇವರು ಕಾರ್ಯಕ್ರಮ ನಿರೂಪಿಸಿದರು.ಶಾಲಾ ಹಿರಿಯ ಶಿಕ್ಷಕರಾದ ರಾಮಚಂದ್ರ ಇವರು ಗಿಡಗಳನ್ನು ನೆಡಲು ಸೂಕ್ತ ವ್ಯವಸ್ಥೆ ಮಾಡಿದರು. ಶಿಕ್ಷಕ ವೃಂದದವರು ಸಹಕರಿಸಿದರು.