ಪ್ರತೀ ಮನೆಗೂ ಆಧಾರಸ್ತಂಭವಾಗಿ ನಿಲ್ಲುವ ಸಂಸ್ಥೆಯಾಗಿ ಬೆಳೆದಿದೆ-ದೇವದಾಸ್ ಕಾಪಿಕಾಡ್
ಪುತ್ತೂರು: ದರ್ಬೆ ಮ್ಯೊದಿನ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಆಶೀರ್ವಾದ ಎಂಟರ್‌ಪ್ರೈಸಸ್‌ನ ಲಕ್ಕೀ ಸ್ಕೀಂ.ನ 2ನೇ ಸೀಝನ್ ಶುಭಾರಂಭ, ಸಂಸ್ಥೆಯ ಲೋಗೋ ಅನಾವರಣ, ಮೊಬೈಲ್ ಆಪ್ ಬಿಡುಗಡೆ ಹಾಗೂ 163 ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮ ಬೈಪಾಸ್ ರಸ್ತೆಯಲ್ಲಿರುವ ಅಶ್ಮಿ ಕಂಫರ್ಟ್‌ನಲ್ಲಿ ಆ.25ರಂದು ನಡೆಯಿತು.
ಅತಿಥಿಗಳಾದ ದೇವದಾಸ್ ಕಾಪಿಕಾಡ್ ಸಂಸ್ಥೆಯ ಲೋಗೋ ಬಿಡುಗಡೆಗೊಳಿಸಿದರು. ವಾಲ್ಟರ್ ನಂದಳಿಕೆಯವರು ಸಂಸ್ಥೆಯ ಬ್ರೋಷರ್ ಬಿಡುಗಡೆ ಮಾಡಿದರು. ರವಿ ರಾಮಕುಂಜ ಸಂಸ್ಥೆಯ ಮೊಬೈಲ್ ಆಪ್ ಬಿಡುಗಡೆಗೊಳಿಸಿದರು.
ನಾನು ತಿನ್ನುವ ಅನ್ನದ ಬಟ್ಟಲು ನೀವು-ದೇವದಾಸ್ ಕಾಪಿಕಾಡ್:
ತುಳು ಚಿತ್ರರಂಗದ ನಿರ್ಮಾಪಕರು ಹಾಗೂ ಹಿರಿಯ ಕಲಾವಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಬಳಿಕ 2ನೇ ಸೀಝನ್ ಮತ್ತು ಸಂಸ್ಥೆಯ ಲೋಗೋ ಅನಾವರಣ ಮಾಡಿ ಮಾತನಾಡಿ, ನಿಮ್ಮ ಸಂಸ್ಥೆಯ ಪಾಲುದಾರರಲ್ಲಿ ಒಗ್ಗಟ್ಟು ಇದೆ. ತುಂಬಾ ಖುಷಿಯಾಯಿತು. ನಿಮಗೆಲ್ಲರಿಗೂ ಉಪಕಾರ ಮಾಡಲು ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇವತ್ತು ಪ್ರತೀ ಮನೆಗೂ ಆಧಾರಸ್ತಂಭವಾಗಿ ನಿಲ್ಲುವ ಸಂಸ್ಥೆಯಾಗಿ ಆಶೀರ್ವಾದ ಬೆಳೆದಿದೆ. ನಿಮ್ಮಲ್ಲಿ ನಂಬಿಕೆಯ ನಗು ಇದೆ ಎಂದರು. ನಿಮ್ಮ ಆಶೀರ್ವಾದದಿಂದ ನಾನು ಮೇಲೆ ಬಂದಿದ್ದೇನೆ. ನಾನು ತಿನ್ನುವ ಅನ್ನದ ಬಟ್ಟಲು ನೀವು ಎಂದ ಅವರು ಪ್ರತೀ ಊರಲ್ಲಿ ಆಶೀರ್ವಾದ ಸಂಸ್ಥೆ ಹುಟ್ಟಲಿ ಅಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಲಿ ಎಂದು ಹೇಳಿ ಹಾರೈಸಿದರು.
ಜಗತ್ತಿನ ದುಬಾರಿ ವಸ್ತು ನಂಬಿಕೆ-ವಾಲ್ಟರ್ ನಂದಳಿಕೆ:
ಸಂಸ್ಥೆಯ ಬ್ರೋಷರ್ ಬಿಡುಗಡೆ ಮಾಡಿದ ಡೈಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತನಾಡಿ ಜಗತ್ತಿನಲ್ಲಿ ದುಬಾರಿ ವಸ್ತು ಎಂದರೆ ನಂಬಿಕೆ. ನಂಬಿಕೆಗೆ ಅರ್ಹವಾದ ಈ ಸಂಸ್ಥೆ ಹಲವು ವರ್ಷ ಬಾಳಲಿ. ಮಕ್ಕಳಿಗೆ ಬ್ಯಾಗ್ ನೀಡಿ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಇದು ಹೆಮ್ಮೆಯ ವಿಷಯ ಎಂದರು. ನಿಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದೆ ಇದ್ದು ಉಳಿದ ಚಟುವಟಿಕೆಗಳಲ್ಲಿ ಪ್ರತಿಭಾವಂತರಾಗಿದ್ದರೆ ಅವರಿಗೆ ಪ್ರೋತ್ಸಾಹ ನೀಡಿ. ಮಕ್ಕಳ ಕನಸನ್ನು ಕೇಳಿ. ಮಕ್ಕಳಿಗೆ ಆಸ್ತಿ ಮಾಡಬೇಡಿ. ಮಕ್ಕಳನ್ನು ಸಮಾಜದ ಆಸ್ತಿ ಮಾಡಿ ಎಂದರು. ಮಕ್ಕಳ ಅಂಕಗಳೇ ಎಲ್ಲವೂ ಅಲ್ಲ. ಅದು ಸರ್ಟಿಫಿಕೇಟ್ ಮಾತ್ರ ಎಂದು ಪೋಷಕರಿಗೆ ತಿಳಿಸಿದರು.
ಎಲ್ಲಾ ಕಡೆ ಸಂಸ್ಥೆ ಬೆಳಗಲಿ-ರವಿ ರಾಮಕುಂಜ:
ಸಂಸ್ಥೆಯ ಮೊಬೈಲ್ ಆಪ್ ಬಿಡುಗಡೆ ಮಾಡಿದ ತುಳು ಚಿತ್ರರಂಗ ಕಲಾವಿದ ಹಾಗೂ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ರವಿ ರಾಮಕುಂಜ ಮಾತನಾಡಿ ಸಂಸ್ಥೆಯು ಸ್ಕೀಂ ಜೊತೆಗೆ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದೆ. ಪುತ್ತೂರು ಅಲ್ಲದೆ. ಸುಳ್ಯ, ಮಂಗಳೂರು ಮುಂತಾದ ಕಡೆಗಳಲ್ಲಿಯೂ ಸಂಸ್ಥೆ ಬೆಳೆಯಲಿ ಎಂದು ಹಾರೈಸಿದರು.
ನನ್ನನ್ನು ಗುರುತಿಸಿದ್ದಕ್ಕೆ ಕೃತಜ್ಞತೆ-ಆತ್ಮೀಯ ಗಾನ ನಾಯಕ್:
ಯೂಟ್ಯೂಬರ್ ಆತ್ಮೀಯ ಗಾನ ನಾಯಕ್ ಮಾತನಾಡಿ ಇಂದು ನನ್ನನ್ನು ಗುರುತಿಸಿದ್ದಕ್ಕೆ ಕತಜ್ಞತೆ ಸಲ್ಲಿಸುತ್ತೇನೆ. ಆಶೀರ್ವಾದ ಎಂಟರ್‌ಪ್ರೈಸಸ್ ಸಂಸ್ಥೆಗೆ ಎಲ್ಲರೂ ಆಶೀರ್ವಾದ ಮಾಡಬೇಕು ಈ ಮೂಲಕ ಸಂಸ್ಥೆ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಝೀ ಕನ್ನಡ ಛೋಟಾ ಚಾಂಪಿಯನ್ ವಿನ್ನರ್ ಬೇಬಿ ಆತ್ಮೀ, ಸಿಝ್ಲರ್ ಸಾಪ್ಟ್ ಡ್ರಿಂಕ್ಸ್ ಮತ್ತು ಸಿಝ್ಲರ್ ಅಗ್ರಿಝೋನ್ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಉದ್ಯಮಿ ಲಕ್ಷ್ಮಣ ಬೈಲಾಡಿ ಹಾಗೂ ಹುಬ್ಬಳ್ಳಿ ಟ್ರೇಡರ‍್ಸ್‌ನ ಉದ್ಯಮಿ ಜಯರಾಜ್ ಶೆಟ್ಟರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತಿಥಿಗಳೊಂದಿಗೆ ಸೆಲ್ಫೀ ತೆಗೆದು ಸಂಭ್ರಮ:
ಅತಿಥಿ ಗಣ್ಯರಾದ ದೇವದಾಸ್ ಕಾಪಿಕಾಡ್, ವಾಲ್ಟರ್ ನಂದಳಿಕೆ, ರವಿ ರಾಮಕುಂಜ, ಆತ್ಮೀಯ ಗಾನ ನಾಯಕ್ ಹಾಗೂ ಬೇಬಿ ಆತ್ಮೀಯೊಂದಿಗೆ ಕೆಲವರು ಸೆಲ್ಫೀ ತೆಗೆದು ಸಂಭ್ರಮಿಸಿದರು.
ಸಂಸ್ಥೆಯ ಪಾಲುದಾರ ದೇವಿಪ್ರಸಾದ್ ಮೊಬೈಲ್ ಆಪ್ ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳನ್ನು ಶಾಲು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆಶೀರ್ವಾದ ಸಂಸ್ಥೆಗೆ ಸಹಕರಿಸಿದ ಕೃಷ್ಣ ಹಾಗೂ ಮೋಹನ ನಾಯಕ್‌ರವರನ್ನು ಗೌರವಿಸಲಾಯಿತು. ಸಂಸ್ಥೆಯ ಪಾಲುದಾರರಾದ ದೇವಿಪ್ರಸಾದ್, ಸಲ್ಮಾನ್, ಸಿರಾಜ್, ಸುಲ್ತಾನ್, ಜಾಹೀರ್‌ರವರು ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ಸ್ಕೀಂಗ್ ಸೇರಿಯರ ಆಪುಜ…
ಝೀ ಕನ್ನಡ ಛೋಟಾ ಚಾಂಪಿಯನ್ ವಿನ್ನರ್ ಬೇಬಿ ಆತ್ಮೀ ತುಳುವಿನಲ್ಲಿ ಮಂಡೆಬೆಚ್ಚ ಮಾಲ್ಪೊಡ್ಚಿ. ಸ್ಕೀಂ.ಗ್ ಸೇರಿಯರ ಆಪುಜ ಎಂದು ಮಾತನಾಡಿ ಎಲ್ಲರ ಗಮನ ಸೆಳೆದಳು.