ಸುಳ್ಯಪದವು ಜಾಗೃತ ಹಿಂದು ಜಾಗರಣ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಅಟ್ಟಿ ಮಡಿಕೆ ಉತ್ಸವ – 2024 ಕಾರ್ಯಕ್ರಮ

0

ಬಡಗನ್ನೂರು: ಜಾಗೃತ ಹಿಂದು ಜಾಗರಣ ಸುಳ್ಯಪದವು ಇದರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಸುಳ್ಯಪದವು ಇದರ ಸಹಕಾರಗಳೊಂದಿಗೆ ಪ್ರಪ್ರಥಮ ಬಾರಿಗೆ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಅಟ್ಟಿ ಮಡಿಕೆ ಉತ್ಸವ–2024 ಕಾರ್ಯಕ್ರಮವು ಸಂಭ್ರಮದಿಂದ ಆ.26ರಂದು ಅದ್ದೂರಿಯಲ್ಲಿ ನಡೆಯಿತು.

ಕಾರ್ಯಕ್ರಮವು ಸುಳ್ಯಪದವು ಶಬರಿನಗರ ಶ್ರೀ ಸ್ವಾಮಿ ಕೊರಗಜ್ಜ ವಠಾರದಲ್ಲಿ ಶ್ರೀ ಮಂಜುನಾಥ ರೋಡ್ ಲೈನ್ಸ್ ಮ್ಹಾಲಕರಾದ ರವಿಶಂಕರ್ ಬಜ ಸುಳ್ಯಪದವು ಅವರು ಅಟ್ಟಿ ಮಡಿಕೆ ಒಡೆಯುವ ಉತ್ಸವವನ್ನು ಉದ್ಘಾಟಿಸಿ ಮಾಡಿ ಶುಭ ಹಾರೈಸಿದರು.

ಸುಳ್ಯಪದವು ಪರಿಸರದಲ್ಲಿ ಪ್ರಪ್ರಥಮ ಬಾರಿಗೆ ಇತಿಹಾಸ ಸೃಷ್ಟಿಸಿದ ವಿಶೇಷ ಆಕರ್ಷಿತರಾದ ಅಟ್ಟಿ ಮಡಕೆಯ ಜೊತೆಗೆ ಪುಟಾಣಿ ಕೃಷ್ಣವೇಷಧಾರಿಗಳ ಮೆರವಣಿಗೆಯು ಶಬರಿನಗರ ಸ್ವಾಮಿ ಕೊರಗಜ್ಜ ವಠಾರದಿಂದ ಸಿಂಗಾರಿಮೇಳ, ಡಿ.ಜೆ ಮೂಲಕ ಭವ್ಯ ಮೆರವಣಿಗೆಯು ಸುಳ್ಯಪದವು ಕೆಳಗಿನ ಪೇಟೆ ವರೆಗೆ ಬಂದು ಅಲ್ಲಿಂದ ತಿರುಗಿ ಸುಳ್ಯಪದವಿನ ಹೃದಯ ಭಾಗವಾದ ಬಸ್‌ಸ್ಟ್ಯಾಂಡ್ ಬಳಿ ಸಮಾಪ್ತಿಗೊಂಡಿತು.

ರಂಗೇರಿಸಿದ ಕುಣಿತ ಭಜನೆ:-
ಕಾರ್ಯಕ್ರಮದ ಅಂಗವಾಗಿ ಮಹಾವಿಷ್ಣು ಮಕ್ಕಳ ಕುಣಿತ ಭಜನಾ ತಂಡ ಕನ್ನಡ್ಕ ಹಾಗೂ ಅಂಭಾ ಭವಾನಿ ಕಣಿತ ಭಜನಾ ತಂಡ ಪಾದೆಗದ್ದೆ ಇದರ ಸದಸ್ಯರಿಂದ ನಡೆದ ಕುಣಿತ ಭಜನಾ ಕಾರ್ಯಕ್ರಮವು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತುಂಬಿಸಿತ್ತು.

ವಿಶೇಷ ಆಕರ್ಷಣೆ:-
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ದೇಲಂಪಾಡಿ ಹರಿಹರಸುತ ಬಳಗದವರಿಂದ ಸಿಂಗಾರಿಮೇಳ ಪ್ರದರ್ಶನ ನಡೆದು, ಬಳಿಕ ಸಿಡಿಮದ್ದು ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಹುತೇಕ ಹಿಂದು ಬಾಂಧವರು ಹಿಂದೂ ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಕಾರ್ಯಕ್ರಮದ ಶಿಸ್ತಿಗೆ ಕಾರಣವಾಗಿದೆ.

ಲಘು ಉಪಾಹಾರ ವ್ಯವಸ್ಥೆ;-
ಕಾರ್ಯಕ್ರಮದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಹಿಂದೂ ಬಾಂಧವರು ಭಾಗವಹಿಸಿದ್ದು, ಎಲ್ಲರಿಗೂ ಜಾಗೃತ ಹಿಂದು ಜಾಗರಣ ವೇದಿಕೆ ವತಿಯಿಂದ ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

ಈ ಸಂಧರ್ಭದಲ್ಲಿ ಹಿಂದು ಜಾಗರಣ ವೇದಿಕೆ ಗೌರವಾಧ್ಯಕ್ಷ ಗೋಪಾಲ ನಾಯಕ್ ಇಂದಾಜೆ, ಸುಳ್ಯಪದವು. ಅಧ್ಯಕ್ಷರಾದ ಅಶೋಕ್ ಪಿ. ಎಸ್. ಪ್ರ. ಕಾರ್ಯದರ್ಶಿ ಸುಧೀರ್ ಶಬರಿನಗರ. ಜಾಗರಣ ವೇದಿಕೆಯ ಕೋಶಾಧಿಕಾರಿ ಚೇತನ್ ಕುಲಾಲ್, ಜತೆ ಕಾರ್ಯದರ್ಶಿ ರಜತ್ ಬೀರಮೂಲೆ, ಅಚ್ಚುತ ಕನ್ನಡ್ಕ, ಆನಂದ ಪೂಜಾರಿ ಕನ್ನಡ್ಕ, ಚಂದ್ರಶೇಖರ ಭಂಡಾರಿ, ರಂಜಿತ್ ಮರದಮೂಲೆ, ಪ್ರವೀಣ್ ಮರದಮೂಲೆ, ಉದಯ ಶಬರಿನಗರ, ರಮೇಶ್ ಶಬರಿನಗರ ಬಡಗನ್ನೂರು ಗ್ರಾ. ಪಂ. ಸದಸ್ಯರಾದ ವೆಂಕಟೇಶ್ ಕನ್ನಡ್ಕ. ಪದ್ಮನಾಭ ಕನ್ನಡ್ಕ, ಶ್ರೀಮತಿ ಕನ್ನಡ್ಕ ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಡಳಿತ ಸಮಿತಿ ಅಧ್ಯಕ್ಷ ಸೇಸಪ್ಪ ಪೂಜಾರಿ ಕಡಮಗದ್ದೆ ಶಬರಿನಗರ ಸ್ವಾಮಿ ಕೊರಗಜ್ಜ ಸಮಿತಿ ಕಾರ್ಯದರ್ಶಿ ಪ್ರಕಾಶ್ ಮರದಮೂಲೆ ಆಯುಧ ಪೂಜಾ ಸಮಿತಿ ಅಧ್ಯಕ್ಷ ಸುಂದರ ನಾಯ್ ಕನ್ನಡ್ಕ, ಹಾಗೂ ಜಾಗೃತ ಹಿಂದೂ ಜಾಗರಣ ಸಮಿತಿ ಸದಸ್ಯರು, ಈಶ್ವರಮಂಗಲ ಜಾಗೃತ ಹಿಂದು ಜಾಗರಣ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಊರ ಪರವೂರ ಹಿಂದೂ ಬಾಂಧವರು ಭಾಗವಹಿಸಿದ್ದರು.

ಜಾಗೃತ ಹಿಂದು ಜಾಗರಣ ಸಮಿತಿ ಸದಸ್ಯರಾದ ಗುರುಕಿರಣ್ ರೈ ಸುಳ್ಯಪದವು, ರಾಜೇಶ್ ಸುಳ್ಯಪದವು, ಹಾಗೂ ಚಂದ್ರಶೇಖರ ಸುಳ್ಯಪದವು ಕಾರ್ಯಕ್ರಮ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here