ಸವಣೂರು: ಸವಣೂರು ಗ್ರಾ.ಪಂ.ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆಯ ಕಾಮಗಾರಿಗಳ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಆ.27ರಂದು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.
ಕಡಬ ಪಶುವೈದ್ಯ ಕೇಂದ್ರದ ಪಶುವೈದ್ಯಾಧಿಕಾರಿ ಡಾ.ಅಜಿತ್ ಸಭೆಯ ಅಧ್ಯಕ್ಷತೆ ವಹಿಸಿ ಸಾಮಾಜಿಕ ಪರಿಶೋಧನೆ ನಡೆಸಿದರು. ಉದ್ಯೋಗ ಖಾತರಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಪ್ರವೀಣ್ ಅವರು ಮಾಹಿತಿ ನೀಡಿದರು.
ಪಂ.ಅಭಿವೃದ್ದಿ ಅಧಿಕಾರಿ ಸಂದೇಶ್ ಕೆ.ಎನ್ ಅವರು,ಹಿಂದಿನ ಸಾಮಾಜಿಕ ಫಲಶೋಧನಾ ಗ್ರಾಮ ಸಭೆಯಲ್ಲಿ ಪಂಡು ಬಂದ ಅಂಶಗಳಿಗೆ ಕೈಗೊಂಡ ಅನುಪಾಲನಾ ಕ್ರಮಗಳನ್ನು ಸಭೆಯ ಮುಂದಿಟ್ಟರು.
ತಾಲೂಕು ಐ.ಇ.ಸಿ.ಸಂಯೋಜಕ ಭರತ್ ರಾಜ್ ಕೆ ಅವರು,ಇಲ್ಲಿಯವರೆಗೆ ಲಭ್ಯವಾಗಿರುವ ಹಾಗೂ ವೆಚ್ಚವಾಗಿರುವ ಅನುದಾನದ ವಿವರ, ಮೊದಲನೇ ಹಂತದ ಸಾಮಾಜಿಕ ಪರಿಶೋಧನಾ ವೇಳೆಯಲ್ಲಿ ಸೃಜನೆಯಾಗಿರುವ ಕಾಮಗಾರಿಗಳ ವಿವರ ಮತ್ತು ವೆಚ್ಚ ಮಾಡಿದ ವಿವರದ ಬಗ್ಗೆ,ನೋಂದಾವಣೆ ಮಾಡಿಕೊಂಡಿರುವವರು ಮತ್ತು ಕೂಲಿ ಪಡೆದವರ ಪಟ್ಟಿಯನ್ನು ಸಭೆಯ ಮುಂದಿಟ್ಟರು.
ಸಭೆಯಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.,ಉಪಾಧ್ಯಕ್ಷೆ ಜಯಶ್ರೀ ವಿಜಯ, ತಾಂತ್ರಿಕ ಅಭಿಯಂತರರಾದ ಮನೋಜ್ ಕುಮಾರ್,ಹೃತಿಕ್,ಗ್ರಾ.ಪಂ.ಸದಸ್ಯರಾದ ಗಿರಿಶಂಕರ ಸುಲಾಯ,
ರಾಜೀವಿ ಶೆಟ್ಟಿ, ಭರತ್ ರೈ ಕೆ,ತಾರಾನಾಥ ಬೊಳಿಯಾಲ, ಸತೀಶ್ ಅಂಗಡಿಮೂಲೆ, ರಫೀಕ್ ಎಂ.ಎ.,ತೀರ್ಥರಾಮ ಕೆಡೆಂಜಿ,ಯಶೋಧಾ,ಚೆನ್ನು ಮುಂಡೋತಡ್ಕ, ಇಂದಿರಾ ಬೇರಿಕೆ, ಚಂದ್ರಾವತಿ ಸುಣ್ಣಾಜೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಪ್ರಮೋದ್ ಕುಮಾರ್ ಬಿ.,ದಯಾನಂದ ಎಂ.,ಜಯಶ್ರೀ,ಜಯಾ ಕೆ.,ಯತೀಶ್ ,ದೀಪಿಕಾ ಸಹಕರಿಸಿದರು.