ವಾಲಿಬಾಲ್ -ಬಾಲಕರ ವಿಭಾಗದಲ್ಲಿ ಪುತ್ತೂರು ಪಾಂಗ್ಲಾಯಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕರ್ನಾಟಕ ಸರಕಾರ ಕ್ಷೇತ್ರ ಶಿಕ್ಷಣ ಇಲಾಖೆ, ದ.ಕ.ಜಿ.ಪo , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ನರಿಮೊಗರು ಮತ್ತು ಶಾಂತಿಗಿರಿ ವಿದ್ಯಾನಿಕೇತನ್ ಶಾಲೆ ಪಂಜಳ ಇವರ ಸಹಯೋಗದೊಂದಿಗೆ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾಟವು ಆ.27ರಂದು ನಡೆಯಿತು. ಈ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪುತ್ತೂರು ಪಾಂಗ್ಲಯಿ ಬೆಥನಿ ಆಂಗ್ಲ ಮಾದ್ಯಮ ಶಾಲೆಯು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಉಪ್ಪಿನಂಗಡಿಯ ಇಂದ್ರಪ್ರಸ್ಥ ಶಾಲೆಯು ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೇಮಜಲು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು. ದ್ವಿತೀಯ ಸ್ಥಾನವನ್ನು ಸರಕಾರಿ ಉ. ಹಿ .ಪ್ರಾ ಶಾಲೆ ಪಡೆಯಿತು.

ಬಾಲಕರ ವಿಭಾಗದಲ್ಲಿ ಉತ್ತಮ ಅಟ್ಯಾಕರ್ ಆಗಿ ಬೆಥನಿ ಶಾಲೆಯ ಕ್ಲೇಟನ್ ಡಿಕ್ಸನ್ ತೋರಸ್, ಉತ್ತಮ ಪಾಸರ್ ಆಗಿ ಬೆಥನಿಯ ಮಹಮ್ಮದ್ ಹೂಧ್ ಹಾಗು ಆಲ್ ರೌಂಡರ್ ಆಗಿ ಇಂದ್ರಪ್ರಸ್ಥ ಶಾಲೆಯ ವಂಶಿ ಪ್ರಶಸ್ತಿಗಳನ್ನು ಪಡೆದರು. ಬಾಲಕಿಯರ ವಿಭಾಗದಲ್ಲಿ ಉತ್ತಮ ಅಟ್ಯಾಕರ್ ಆಗಿ ಸಿಂಚನ ಪಾಪೇಮಜಲು , ಉತ್ತಮ ಪಾಸರ್ ಆಗಿ ಕೆ.ವಿ ಲಾಸ್ಯ ಪಾಪೇಮಜಲು ಹಾಗು ಆಲ್ ರೌಂಡರ್ ಆಗಿ ಕಾವು ಸರಕಾರಿ ಶಾಲೆಯ ಪುಣ್ಯಶ್ರೀ ಪ್ರಶಸ್ತಿಗಳನ್ನು ಪಡೆದರು.

LEAVE A REPLY

Please enter your comment!
Please enter your name here