ಪಶುಪಾಲನ ಇಲಾಖೆಯಿಂದ ಜಾನುವಾರು ಗಣತಿದಾರರಿಗೆ ತರಬೇತಿ-ಮೊಬೈಲ್ ಅಥವಾ ಟ್ಯಾಬ್ ಒದಗಿಸಲು ತಾ.ಪಂಗೆ ಮನವಿ

0

ಪುತ್ತೂರು: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಸೆ.1ರಿಂದ ಡಿಸೆಂಬರ್ 31ರವರೆಗೆ ನಡೆಯಲಿರುವ 21ನೇ ರಾಷ್ಟ್ರೀಯ ಜಾನುವಾರು ಗಣತಿಯ ಕುರಿತು ಗಣತಿದಾರರಿಗೆ ತರಬೇತಿಯು ಆ.30ರಂದು ಸೈನಿಕ ಭವನದಲ್ಲಿ ನಡೆಯಿತು.


ತರಬೇತಿಯನ್ನು ಉದ್ಘಾಟಿಸಿದ ತಾ.ಪಂ ವ್ಯವಸ್ಥಾಪಕ ಜಯಪ್ರಕಾಶ್ ಮಾತನಾಡಿ, ಸಾಕು ಪ್ರಾಣಿಗಳ ಬಗ್ಗೆ ನಿಖರ ಮಾಹಿತಿ ಪಡೆದುಕೊಳ್ಳಲು ಜಾನುವಾರು ಗಣತಿಯು ಸಹಕಾರಿಯಾಗಲಿದೆ. ಇದರ ಆಧಾರದಲ್ಲಿ ಜಾನುವಾರುಗಳಿಗೆ ಲಸಿಕೆ, ಔಷಧಿಗಳು, ಸಹಾಯಧನಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ. ತರಬೇತಿಯಲ್ಲಿ ಗಣತಿಯ ಕುರಿತು ಮಾಹಿತಿ ಪಡೆದುಕೊಂಡು ಇಲಾಖೆಯ ಅಧಿಕಾರಿ, ಸಿಬಂದಿಗಳು ಹಾಗೂ ಪಶುಸಖಿಯರ ಸಹಕಾರದಿಂದ ಜಾನುವರು ಗಣತಿಯು ಉತ್ತಮವಾಗಿ ನಡೆಯಲಿ ಎಂದರು.


ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೆ ಧರ್ಮಪಾಲ ಮಾತನಾಡಿ, ಜಾನುವಾರು ಗಣತಿಯ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಜಾನುವಾರು ಗಣತಿಯ ಮಾಸ್ಟರ್ ಟ್ರೈನರ್ ಡಾ.ವಿನಯ ಗಣತಿಯ ಕುರಿತು ತರಬೇತಿ ನಡೆಸಿಕೊಟ್ಟರು. ಪಶುವೈದ್ಯಾಧಿಕಾರಿ ಡಾ.ಎಂ.ಪಿ ಪ್ರಕಾಶ್, ಪಶುಸಖಿ ಭವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷ್ಪರಾಜ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

ಮೊಬೈಲ್/ಟ್ಯಾಬ್ ಒದಗಿಸಲು ತಾ.ಪಂಗೆ ಮನವಿ:
ಜಾನುವಾರು ಗಣತಿಯನ್ನು ಮೊಬೈಲ್ ಆಪ್ ಮೂಲಕ ನಡೆಸುವಂತೆ ಆದೇಶ ಬಂದಿದೆ. ಆದರೆ ಗಣತಿಗಾಗಿ ಪ್ರತ್ಯೇಕ ಮೊಬೈಲ್ ಒದಗಿಸಿಲ್ಲ. ಹೀಗಾಗಿ ಜಾನುವಾರು ಗಣತಿಗೆ ಅನುಕೂಲವಾಗುವಂತೆ ಮೊಬೈಲ್ ಅಥವಾ ಟ್ಯಾಬ್‌ನ್ನು ತಾ.ಪಂನಿಂದ ಒದಗಿಸಿಕೊಡುವಂತೆ ಇಲಾಖೆಯ ಪರವಾಗಿ ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷ್ಪರಾಜ್ ಶೆಟ್ಟಿಯವರು ತಾ.ಪಂ ವ್ಯವಸ್ಥಾಪಕ ಜಯಪ್ರಕಾಶ್‌ರವರಲ್ಲಿ ಮನವಿ ಮಾಡಿದರು.

LEAVE A REPLY

Please enter your comment!
Please enter your name here