ಯೋಗಾಸನ ಸ್ಪರ್ಧೆ: ಮುಕ್ರಂಪಾಡಿ ಬಾಲಕಿಯರ ಸ.ಪೂ.ಕಾಲೇಜ್ ವಿದ್ಯಾರ್ಥಿನಿ ಕೃಪಾ ಕೆ ರಾಜ್ಯಮಟ್ಟಕ್ಕೆ ಆಯ್ಕೆ

0

ಪುತ್ತೂರು: ಮುಕ್ರಂಪಾಡಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್‌ನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಕೃಪಾ ಕೆರವರು ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು 2018ದಿಂದಲೇ ರಾಷ್ಟ್ರಮಟ್ಟ, ರಾಜ್ಯಮಟ್ಟ, ದಸರಾ ಯೋಗಾಸ್ಪರ್ಧೆ, ಕೊರೋನ ಅವಧಿಯಲ್ಲಿ ಆನ್‌ಲೈನ್ ಯೋಗ ಸ್ಪರ್ಧೆ, ಅಂತರಾಷ್ಟ್ರೀಯ ಯೋಗ ದಿನದ ಸ್ಪರ್ಧೆ, ಪಾಂಡಿಚೇರಿಯಲ್ಲಿ ನಡೆದ ಯೋಗ ಫೆಸ್ಟಿವಲ್, ತಾಲೂಕು, ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಇವರು ವೀರಮಂಗಳ ಕೇತ್ಕಾರ್ ಶಿನಪ್ಪ ಗೌಡ ಹಾಗೂ ದಿ.ವನಿತ.ಕೆರವರ ಪುತ್ರಿಯಾಗಿದ್ದು ರಾಷ್ಟ್ರೀಯ ಯೋಗ ತರಬೇತಿದಾರರಾದ ಹೇಮಾಚಂದ್ರಹಾಸ್ ಆಗಳಿ ಇವರಿಂದ ತರಬೇತಿ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here