ಬೆಂಗಳೂರಿನ ಬ್ಯಾರಿಸ್ ಸೌಹಾರ್ದ ಭವನದಲ್ಲಿ ಯಕ್ಷಗಾನ ಪ್ರಸಂಗ

0

ಶಾಂತಿ ಸೌಹಾರ್ದತೆ ಹೆಚ್ಚಿಸಲು ಯಕ್ಷಗಾನ ಪೂರಕ”- ಉಮರ್ ಟೀಕೆ

ಬೆಂಗಳೂರು: ಇಲ್ಲಿನ H.B.R. ಬಡಾವಣೆಯಲ್ಲಿರುವ ಬ್ಯಾರಿಸ್ ಸೌಹಾರ್ದ ಭವನದಲ್ಲಿ ಆ. 23ರಂದು ಹೈಕೋರ್ಟ್ ಯಕ್ಷಗಾನಾಭಿಮಾನಿ ವಕೀಲರು ಬೆಂಗಳೂರು ಬ್ಯಾರಿ ವೆಲ್ಫಾರ್ ಅಸೋಸಿಯೇಷನ್ ರವರ ಸಹಕಾರದೊಂದಿಗೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರಿಂದ “ಶ್ರೀಮತಿ ಪರಿಣಾಯ ಅಗ್ರ ಪೂಜೆ” ಎಂಬ ಯಕ್ಷಗಾನ ಪ್ರಸಂಗ ಆಯೋಜಿಸಲಾಯಿತು.

ಬ್ಯಾರಿ ಅಸೋಸಿಯೇಷನ್ ನ ಪ್ರವರ್ತಕ ಉಮರ್ ಟೀಕೆ ಮಾತನಾಡಿ, ಗಂಡು ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸಲು ಸಹೋದರ ಸಮುದಾಯದೊಂದಿಗೆ ಬ್ಯಾರಿ ಸಮುದಾಯವು ಕೈ ಜೋಡಿಸಿದೆ, ಇಂತಹ ಕಲಾ ಕಾರ್ಯಕ್ರಮ ಗಳು ಅವಿಭಜಿತ ದ.ಕನ್ನಡ ಜಿಲ್ಲೆಯ ಮಣ್ಣಿನ ಮಕ್ಕಳಲ್ಲಿ ಶಾಂತಿ ಸೌಹಾರ್ದತೆ ಹೆಚ್ಚಿಸಲು ಪೂರಕವಾಗಿದೆ ಮತ್ತು ಈ ಕಾರ್ಯಕ್ರಮವು ಸೌಹಾರ್ದ ಭವನದಲ್ಲಿ ಆಯೋಜಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ಪಿ.ಮೊಹಮ್ಮದ್ ನವಾಜ್,ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ, ನ್ಯಾಯಮೂರ್ತಿ ಕೆ.ರಾಜೇಶ್ ರೈ ,ಕರ್ನಾಟಕದ ಅಡ್ವೊಕೇಟ್ ಜನರಲ್ ಶ್ರೀ.ಕೆ.ಶಶಿಕಿರಣ್ ಶೆಟ್ಟಿ , ಹೈಕೋರ್ಟಿನ ಹಿರಿಯ ನ್ಯಾಯವಾದಿ ಕೆ.ಎಸ್.ವ್ಯಾಸ ರಾವ್ ಉಪಸ್ಥಿತರಿದ್ದರು.

ಹೈಕೋರ್ಟ್ ನ್ಯಾಯವಾದಿ ಮೊಹಮ್ಮದ್ ನಿಯಾಜ್ ಉಪ್ಪಿನಂಗಡಿ ಅತಿಥಿಗಳನ್ನು ಸತ್ಕರಿಸಿದರು. ಕರ್ನಾಟಕ ಹೈಕೋರ್ಟಿನ ಹಿರಿಯ ನ್ಯಾಯವಾದಿ ಎಂ.ಸುಧಾಕರ ಪೈ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here