ಕಾಣಿಯೂರು: ಕಾಣಿಯೂರು ಸ. ಹಿ. ಪ್ರಾ. ಶಾಲೆಯಲ್ಲಿ ಸುಮಾರು 22 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಇದೀಗ ನಾಣಿಲ ಸ.ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡಿರುವ ಮೋಹಿನಿ ಅವರಿಗೆ ಬೀಳ್ಕೊಡುಗೆ ಸಮಾರಂಭವು ಶಾಲಾ ಎಸ್.ಡಿ.ಎಂ.ಸಿ ಮತ್ತು ಪೋಷಕರ ವತಿಯಿಂದ ಕಾಣಿಯೂರು ಸ. ಹಿ. ಪ್ರಾ. ಶಾಲೆಯಲ್ಲಿ ಸೆ 2ರಂದು ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಮೋಹಿನಿ ಅವರು ಸುಮಾರು 22 ವರ್ಷಗಳ ಕಾಲ ಕಾಣಿಯೂರು ಶಾಲೆಯಲ್ಲಿ ಪ್ರಾಮಾಣಿಕವಾಗಿ, ಅತ್ಯಂತ ಯಶಸ್ವಿಯಾಗಿ ತಮ್ಮೆಲ್ಲರ ಸಹಕಾರದಿಂದ ಶಿಕ್ಷಕಿಯಾಗಿ ತನ್ನ ಸೇವೆಯನ್ನು ನಿಭಾಯಿಸಿದ್ದೇನೆ ಎಂಬ ವಿಶ್ವಾಸ ನನಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ ಮಾತನಾಡಿ, ಶಿಕ್ಷಕಿ ಮೋಹಿನಿಯವರ ವರ್ಗಾವಣೆ ಅನಿವಾರ್ಯ. ಅವರ ತನ್ನ ಕರ್ತವ್ಯ ನಿಷ್ಠೆಯಿಂದಾಗಿ ಎಷ್ಟೋ ವಿದ್ಯಾರ್ಥಿಗಳು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕಾಣಿಯೂರು ಗ್ರಾ.ಪಂ. ಸದಸ್ಯ ರಾಮಣ್ಣ ಗೌಡ ಮುಗರಂಜ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಯಶೋದ ನೇರೋಳ್ತಡ್ಕ ಶುಭಹಾರೈಸಿದರು. ಪೋಷಕರು, ಶಿಕ್ಷಕರು ಅನಿಸಿಕೆ ವ್ಯಕ್ತಪಡಿಸಿದರು. ಶಾಲಾ ಮುಖ್ಯಗುರು ಪುಂಡಲಿಕ ಪೂಜಾರ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣರವರು ವಂದಿಸಿ, ಶಿಕ್ಷಕಿ ಸುಜಯರವರು ಕಾರ್ಯಕ್ರಮ ನಿರೂಪಿಸಿದರು.
ಗೋದ್ರೇಜ್ ಕೊಡುಗೆ:
ಕಾಣಿಯೂರು ಶಾಲೆಯಿಂದ ನಾಣಿಲ ಶಾಲೆಗೆ ವರ್ಗಾವಣೆಗೊಂಡಿರುವ ಶಿಕ್ಷಕಿ ಮೋಹಿನಿ ಅವರು ಶಾಲೆಗೆ ಗೋದ್ರೇಜ್ ಕೊಡುಗೆಯಾಗಿ ನೀಡಿದರು.