ಯುವಕರನ್ನು ಆದಷ್ಟು ಒಳ್ಳೆಯ ರೀತಿಯಲ್ಲಿ ಸೇರಿಸಿಕೊಳ್ಳುವ ಕೆಲಸ ಶ್ಲಾಘನೀಯ – ಅಶೋಕ್ ಕುಮಾರ್ ರೈ
ಪುತ್ತೂರು: ಬಡವರಿಗೆ ಸಹಾಯ ಮಾಡಿದರೆ ಮಾತ್ರ ನನಗೆ ತೃಪ್ತಿ. ಅದರಲ್ಲಿ ಧನ್ಯತೆ ಇರುವುದು. ಅದರಲ್ಲಿ ದೇವರನ್ನು ಕಾಣುವುದು. ಈ ನಿಟ್ಟಿನಲ್ಲಿ ರಕ್ತದಾನದ ಮೂಲಕ ಬಡವರಿಗೆ ಎ.ಆರ್ ವಾರಿಯರ‍್ಸ್ ನೆರವಾಗಿದೆ. ಯುವಕರನ್ನು ಆದಷ್ಟು ಇಂತಹ ಒಳ್ಳೆಯ ರೀತಿಯಲ್ಲಿ ಸೇರಿಸಿಕೊಳ್ಳುವ ಕೆಲಸ ಮಾಡಿ ಎಂದು ಶಾಸಕ ಅಶೋಕ್ ಕುಮಾರ್ ರೈ(Ashok Kumar Rai) ಅವರು ಹೇಳಿದರು.
ಶಾಸಕ ಅಶೋಕ್ ಕುಮಾರ್ ರೈ(Ashok Kumar Rai) ಅವರ ಹುಟ್ಟು ಹಬ್ಬದ ಅಂಗವಾಗಿ ಎ.ಆರ್.ವಾರಿಯರ‍್ಸ್‌ನಿಂದ ಪುತ್ತೂರು ರೋಟರಿ ಮನೀಷಾ ಹಾಲ್‌ನಲ್ಲಿ ನಡೆದ 7ನೇ ವರ್ಷದ ರಕ್ತದಾನ ಶಿಬಿರದಲ್ಲಿ ಸಂಘಟನೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾನು ಹುಟ್ಟಿದ ಹಬ್ಬವನ್ನು ಆಚರಿಸಿದ್ದು ಬಾರಿ ಕಡಿಮೆ. ಈ ಹಿಂದೊಮ್ಮೆ ಮಂಗಳೂರಿನಲ್ಲಿ ಎಡ್ಸ್ ಪೀಡಿತ ಮಕ್ಕಳ ಜೊತೆ ಒಂದು ವರ್ಷ ಆಚರಿಸಿದ್ದೆ. ಪ್ರತಿ ತಿಂಗಳಿಗೆ ಖರ್ಚಿಗೆ ಹಣವನ್ನೂ ಕೊಡುತ್ತಿದ್ದೆ. ಮುಂದೆ ಅವರಿಗೆ ಸರಕಾರವೂ ಸಹಾಯ ನೀಡುವ ಕೆಲಸ ಮಾಡುತ್ತಿದೆ ಎಂದ ಅವರು ನಾನು ಇಲ್ಲಿನ ತನಕ ಗೊತ್ತಿದ್ದು ಯಾರಿಗೂ ಅನ್ಯಾಯ ಮಾಡಿದವನಲ್ಲ. ವಿರೋಧಿಗೂ ಅನ್ಯಾಯ ಮಾಡುವವನು ನಾನಲ್ಲ. ಯುವಕರನ್ನು ಆದಷ್ಟು ಒಳ್ಳೆಯ ರೀತಿಯಲ್ಲಿ ಇಂತಹ ಕಾರ್ಯದಲ್ಲಿ ಸೇರಿಸಿಕೊಂಡು ಕೆಲಸ ಮಾಡಬೇಕು. ನಾನಿವತ್ತು ಶಾಸಕನಾಗಿದ್ದನೆ. ಹಾಗೆಂದು ನಾನು ತಪ್ಪು ಮಾಡಿದರೆ ಹೇಳಿ ಕಂಡಿತಾ ತಿದ್ದಿಕೊಳ್ಳುವ ಕೆಲಸ ಮಾಡುತ್ತೇನೆ ಎಂದ ಅವರು ಎ.ಆರ್ ವಾರಿಯರ‍್ಸ್‌ನ ರಕ್ತದಾನ ಶಿಬಿರಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭ ಅಶೋಕ್ ರೈ ದಂಪತಿಯನ್ನು ಎ.ಆರ್.ವಾರಿಯರ‍್ಸ್ ತಂಡದಿಂದ ಸನ್ಮಾನಿಸಿ ಗೌರವಿಸಲಾಯಿತು. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ್ ಶೆಟ್ಟಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕೃಷ್ಣಪ್ರಸಾದ್ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ಎಮ್.ಎಸ್ ಮೊಹಮ್ಮದ್, ಶಿವರಾಮ್ ಆಳ್ವ, ರೋಶನ್ ರೈ ಬನ್ನೂರು, ಉದ್ಯಮಿ ರಾಜೇಶ್ ಶೆಟ್ಟಿ ಮಠಂತಬೆಟ್ಟು, ಡಾ. ಸುರೇಶ್ ಪುತ್ತೂರಾಯ, ನಿಹಾಲ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎ.ಆರ್.ವಾರಿಯರ‍್ಸ್‌ನ ಅಧ್ಯಕ್ಷ ಪ್ರಜ್ವಲ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಆರ್.ಆರ್ ವಾರಿಯರ‍್ಸ್‌ನ ಪದಾಧಿಕಾರಿಗಳಾದ ಮನೀಷ್, ಕಾರ್ತಿಕ್ ರೈ, ಸುಶಾಂತ್ ಶೆಟ್ಟಿ, ಸುಮಿತ್ ಶೆಟ್ಟಿ, ಇಬ್ರಾಹಿಂ, ಸರ್ವೇಶ್, ರೋಹಿತ್ ಬಲ್ನಾಡು, ಮೋಹನ ಸವಣೂರು, ಪ್ರಜ್ವಲ್ ರೈ, ಕೀರ್ತನ್ ರೈ, ರಾಧಾಕೃಷ್ಣ, ಅನೀಶ್ ಶೆಟ್ಟಿ ಸಹಿತ ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸುಮಾರು 70 ಮಂದಿ ರಕ್ತದಾನ ಮಾಡಿದರು ಎಂದು ಪ್ರಜ್ವಲ್ ರೈ ತಿಳಿಸಿದ್ದಾರೆ.