ಕುಂಬ್ರ : ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಕೆದಂಬಾಡಿ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಒಂದು ದಿನದ ಜೇನು ಕೃಷಿ ತರಬೇತಿ ಕಾರ್ಯಕ್ರಮ ನವೋದಯ ರೈತ ಭವನ ಕುಂಬ್ರ ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿ ಆರ್ ಡಿ ಎಫ್ ಮಂಗಳೂರು ಇದರ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ರೈ ನೆರವೇರಿಸಿ, ಬ್ಯಾಂಕ್ ಆಫ್ ಬರೋಡ ಪ್ರಾಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನವು ಸ್ವ ಉದ್ಯೋಗಕ್ಕೆ ಹೆಚ್ಚಿನ ಬೆಂಬಲವನ್ನು ನೀಡುತ್ತಿದ್ದು ಜೇನು ಕೃಷಿ ಕೈಗೊಳ್ಳುವ ಯುವಕರಿಗೆ ಬ್ಯಾಂಕ್ನಿಂದ ಸಿಗುವ ಸವಲತ್ತು ನೀಡಲಾಗುವುದು ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡದ ಕೃಷಿ ವಿಭಾಗದ ಮುಖ್ಯಸ್ಥರಾದ ಇಂದುಮತಿ ಕೃಷಿಕರಿಗೆ ಬ್ಯಾಂಕಿನಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿ ಎಲ್ಲರೂ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ತಮ್ಮ ಖಾತೆಯನ್ನು ತೆರೆಯಬೇಕೆಂದು ಕೇಳಿಕೊಂಡರು.
ಸಭೆಯ ಅಧ್ಯಕ್ಷತೆಯನ್ನು ಕೃಷಿಪತ್ತಿನ ಸಹಕಾರಿ ಸಂಘ ಕುಂಭ್ರ ಇದರ ಅಧ್ಯಕ್ಷರಾದ ಪ್ರಕಾಶ್ ಚಂದ್ರ ರೈ ಕೈಕಾರ ವಹಿಸಿದ್ದರು. ರಾಜ್ಯಮಟ್ಟದ ತರಬೇತುದಾರರಾದ ರಾಧಾಕೃಷ್ಣ ಕೋಡಿ ಮತ್ತು ಮನಮೋಹನ ಅರಂಬ್ಯ ತರಬೇತಿಯನ್ನು ನೀಡಿದರು. ವೇದಿಕೆಯಲ್ಲಿ ಬ್ಯಾಂಕ್ ಆಫ್ ಬರೋಡದ ಕುಂಬ್ರ ಶಾಖೆಯ ಶಾಖಾಧಿಕಾರಿ ವೆಂಕಟಬದಿರಾಜು, ಪ್ರಗತಿಪರ ಕೃಷಿಕರಾದ ಕಡಮಜಲು ಸುಭಾಸ್ ರೈ ಉಪಸ್ಥಿತರಿದ್ದರು. 40 ಮಂದಿ ಜೇನು ಕೃಷಿ ತರಬೇತಿ ಪಡೆದುಕೊಂಡರು.
ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ಮತ್ತು ಜೇನುಪೆಟ್ಟಿಗೆಯನ್ನು ವಿತರಿಸಲಾಯಿತು. ವಿ ಆರ್ ಡಿ ಎಫ್ ನ ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ವಿಜಯಕುಮಾರ್ ರೈ ಕೋರಂಗ ಸ್ವಾಗತಿಸಿ ಕೋಶಾಧಿಕಾರಿ ಬಾಲಕೃಷ್ಣ ಚೌಟ ವಂದಿಸಿದರು.
ಯುವರಾಜ್ ಪೂಂಜ, ಚಂದ್ರಶೇಖರ್ ಶೆಟ್ಟಿ , ನಯನ ರೈ, ಪ್ರವೀಣ್ ಕುಮಾರ್ ಶೆಟ್ಟಿ,ನಾರಾಯಣ ಕೆ, ಸುರಕ್ಷಾ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.