ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜ್ಯಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಸೆ.5ರಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ
ಸಾಧಕ ಶಿಕ್ಷಕರಿಗೆ ಗುರು ಪುರಸ್ಕಾರ ಮತ್ತು ಗೌರವ ಸಮ್ಮಾನ ಸಮಾರಂಭವು ಜರಗಲಿದೆ.
ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲುರವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ.ತುಕಾರಾಂ ಪೂಜಾರಿರವರು ನೆರವೇರಿಸಲಿದ್ದಾರೆ. ಗಣ್ಯ ಉಪಸ್ಥಿತಿಯಾಗಿ ಅಕ್ಷಯ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್‌ರವರು ಭಾಗವಹಿಸಲಿದ್ದಾರೆ.
14 ಶಿಕ್ಷಕರಿಗೆ ಗೌರವದ ಸಮ್ಮಾನ:
ಶಾಲೆಯ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಾಗಿದ್ದು, ಈ ವಿದ್ಯಾರ್ಥಿಗಳ ಹೆತ್ತವರು ವಿವಿಧ ಕಡೆಯ ಶಾಲೆಗಳಲ್ಲಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಿರುವ ಬೆಳ್ತಂಗಡಿ ಬಂದಾರು, ಪೇರಳಪಲ್ಕೆ ಅಂಗನವಾಡಿ ಕೇಂದ್ರದ ಕುಸುಮ, ಸುಳ್ಯ ಸಂಪಾಜೆಯ ಗಡಿಕಲ್ಲು ಅಂಗನವಾಡಿ ಕೇಂದ್ರದ ಶೀಲಾವತಿ ಕೆ.ಕೆ, ಕೊಡಗು ಮಡಿಕೇರಿ ಬಾಲಂಬಿ ಅಂಗನವಾಡಿ ಕೇಂದ್ರದ ಮೀನಾಕ್ಷಿ ಕೆ.ಎಸ್, ಕೊಡಗು ಮಡಿಕೇರಿ ಬಲಮುರಿ ಅಂಗನವಾಡಿ ಕೇಂದ್ರದ ಸ್ವಾತಿ ಎನ್.ಎನ್, ವಿರಾಜಪೇಟೆ ಚಿಕ್ಕಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೋಭಾವತಿ, ವಿಟ್ಲ ಸೈಂಟ್ ರೀಟಾ ಶಾಲೆಯ ನಿವೃತ್ತ ಶಿಕ್ಷಕಿ ಪಾರ್ವತಿ ಡಿ, ಕೊಡಗು ಕುಶಾಲನಗರ ಮಹಿಳಾ ಸಮಾಜದ ಶಿಕ್ಷಕಿ ತನುಜ ಎಂ.ಡಿ, ನಾನಿಲ ಸರಕಾರಿ ಶಾಲೆಯ ನಿವೃತ್ತ ಸಹ ಶಿಕ್ಷಕಿ ವಾಣಿ ಎ, ಬಂಟ್ವಾಳ ಪಕ್ಕಳಕುಂಜ ಅಂಗನವಾಡಿ ಕೇಂದ್ರದ ಚೈತ್ರ ಪಿ, ಕಡಬ ಬೆಳಂದೂರು ಅಮೈಯ ಗುಲಾಬಿ ಕೆ, ಪೆರ್ಲ, ಸೇರಾಜೆ ಅಂಗನವಾಡಿ ಕೇಂದ್ರದ ಯಶೋಧ ಎ, ಸುಳ್ಯ ಕೊಡ್ಯಡ್ಕ ಅಂಗನವಾಡಿ ಕೇಂದ್ರದ ಅನಂತೇಶ್ವರಿ, ಕಾವು ಜಿ.ಎಂ.ಯು.ಪಿ.ಎಸ್‌ನ ನಿವೃತ್ತ ಶಿಕ್ಷಕ ಭಾಸ್ಕರ್ ಎನ್, ಬೆಟ್ಟಗೇರಿ ಜಿ.ಎಚ್.ಪಿ.ಎಸ್‌ನ ನಿವೃತ್ತ ಶಿಕ್ಷಕ ಬಾಲಕೃಷ್ಣ ಬಿ.ಸಿರವರುಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ ಎಂದು ಕಾಲೇಜು ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೀವನ್, ಕಾರ್ಯದರ್ಶಿ ಪೂಜಿತರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.