ಪುತ್ತೂರು: ಕಾಣಿಯೂರು ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ ಈಡನ್ ಗ್ಲೋಬಲ್ ಶಾಲೆಯಲ್ಲಿ ನಡೆಯಿತು. ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅತಿಥಿಯಾಗಿ ಭಾಗವಹಿಸಿದ ಸಂತ ಜಾರ್ಜ್ ಪ್ರೌಢ ಶಾಲೆಯ ಮುಖ್ಯ ಗುರು ಹಾಗೂ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹರೀಶ್ಚಂದ್ರ ಅವರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಪುತ್ತು ಬಾವ ಹಾಜಿ ಅಧ್ಯಕ್ಷೀಯ ಭಾಷಣ ಮಾಡಿದರು. ಸವಣೂರು ಗ್ರಾ.ಪಂ ಸದಸ್ಯ ರಝಾಕ್ ಕೆನರಾ, ಕಾಣಿಯೂರು ವಲಯ ಮಟ್ಟದ ಸಿ.ಆರ್.ಪಿ ಯಶೋಧ ಹಾಗೂ ಈಡನ್ ಗ್ಲೋಬಲ್ ಶಾಲೆಯ ಪ್ರಾಂಶುಪಾಲರಾದ ರಂಝೀ ಮುಹಮ್ಮದ್ ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಹರಿಶ್ಚಂದ್ರ ಇವರಿಗೆ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಪಂದ್ಯಾಕೂಟದಲ್ಲಿ ಸವಣೂರು ವಲಯ ಮಟ್ಟದ ಬಾಲಕ ಬಾಲಕಿಯರ ಒಟ್ಟು ಹದಿಮೂರು ತಂಡಗಳು ಭಾಗವಹಿಸಿದ್ದವು. ಬಾಲಕರ ವಿಭಾಗದಲ್ಲಿ ಸರಸ್ವತಿ ವಿದ್ಯಾ ಮಂದಿರ ಪುರುಷರಕಟ್ಟೆ ಪ್ರಥಮ ಹಾಗೂ ಈಡನ್ ಗ್ಲೋಬಲ್ ಶಾಲೆ ಬೆಳಂದೂರು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ಶ್ರೀ ಕೃಷ್ಣ ಪ್ರೌಢ ಶಾಲೆ ಪಟ್ಟೆ ಪ್ರಥಮ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ಕಾಣಿಯೂರು ದ್ವಿತೀಯ ಸ್ಥಾನ ಪಡೆದಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ. ಈಡನ್ ಗ್ಲೋಬಲ್ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಅಶ್ರಫ್ ಶಾ ಮಾಂತೂರು, ಬಶೀರ್ ಹಾಜಿ ಸವವಣೂರು, ನಿಝಾರ್ ದರ್ಬೆ, ಹಮೀದ್ ಹಾಜಿ ಬೈತಡ್ಕ, ಇಸ್ಮಾಯಿಲ್ ಹಾಜಿ ಬೈತಡ್ಕ, ಮುಸ್ತಫಾ ಸಅದಿ, ಅಬ್ಬಾಸ್ ಬಾವಾ ಹಾಜಿ, ಖಾದರ್ ಹಾಜಿ, ಮುಹಮ್ಮದ್ ಹಾಜಿ ನಡುಪದವು, ಅಶ್ರಫ್ ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ನೋಡಲ್ ಶಿಕ್ಷಕರಾದ ಮೋನಪ್ಪ ಪಟ್ಟೆ, ಪ್ರಾಥಮಿಕ, ವಿಭಾಗದ ನೋಡಲ್ ಶಿಕ್ಷಕರಾದ ಬಾಲಕೃಷ್ಣ, ಶಾಲೆಯ ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ, ಶಾಲಾ ವಿದ್ಯಾರ್ಥಿ ನಾಯಕ ಮುಹಮ್ಮದ್ ಸುಹಾನ್, ಅಬ್ದುಲ್ ಲತೀಫ್, ಮನ್ಸೂರ್ ಹಾಗೂ ಶಾಲಾ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಶಿಕ್ಷಕ ಇಮ್ತಿಯಾಝ್ ಸಿ.ಎಂ ಹಾಗೂ ದೈಹಿಕ ಶಿ. ಶಿಕ್ಷಕಿ ಶ್ವೇತಾ ಕುಮಾರಿ ಕಾರ್ಯಕ್ರಮದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು. ಶಿಕ್ಷಕಿಯರಾದ ಇಸ್ಫಾನ ಹಾಗೂ ಅಫ್ರೀನ್ ಬಾನು ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ವಿಭಾಗದ ನೊಡಲ್ ಶಿಕ್ಷಕ ಬಾಲಕೃಷ್ಣ ವಂದಿಸಿದರು. ಶಾಲಾ ದೈಹಿಕ ಶಿ.ಶಿಕ್ಷಕಿ ಶ್ವೇತಾ ಕುಮಾರಿ ಸ್ವಾಗತಿಸಿದರು.