ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ ಸಾಹಿತ್ಯ ರಚನಾ ಕಮ್ಮಟ ಕವಿಗೋಷ್ಠಿ

0

ಪುತ್ತೂರು: ಕರ್ನಾಟಕ ರಾಜ್ಯ ಬರಹಗಾರರ ವೇದಿಕೆ (ರಿ.)ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕು ಘಟಕ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ (ರಿ) ಹುಬ್ಬಳ್ಳಿ , ತಾಲೂಕು ಸಮಿತಿ ಬಂಟ್ವಾಳ ಹಾಗೂ ಕರ್ನಾಟಕ ಪ್ರೌಢಶಾಲೆ ಮಾಣಿ ಇವುಗಳ ಸಹಭಾಗಿತ್ವದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಾಹಿತ್ಯ ರಚನಾ ಕಮ್ಮಟ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ನಿವೃತ್ತ ಸಂಸ್ಕೃತ ಶಿಕ್ಷಕ ಶಿರಂಕಲ್ಲು ಕೃಷ್ಣ ಭಟ್ ಉದ್ಘಾಟಿಸಿದರು. ಸಾಹಿತ್ಯ ರಚನಾ ಕಮ್ಮಟ ಸಂಪನ್ಮೂಲ ವ್ಯಕ್ತಿಯಾಗಿ ಕ.ರಾ.ಬ.ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಧ್ಯಕ್ಷ ಜಯಾನಂದ ಪೆರಾಜೆ ತರಬೇತಿ ನೀಡಿದರು. ಕನ್ನಡ – ನಾಡು ನುಡಿ – ಸಂಸ್ಕೃತಿಯ ವೈಭವ, ಕನ್ನಡ ಸಾಹಿತ್ಯ ಲೋಕದಲ್ಲಿ ದಕ್ಷಿಣ ಕನ್ನಡದ ಕೊಡುಗೆ ಮತ್ತು ಭವಿಷ್ಯದ ಸಾಹಿತಿಗಳು ಹೇಗೆ ತಯಾರಿಗೊಳ್ಳಬೇಕೆಂದು ಸವಿವರವಾಗಿ ತಿಳಿಸಿದರು.

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ (ರಿ) ಹುಬ್ಬಳ್ಳಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಡಾ.ಶಾಂತಾ ಪುತ್ತೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕಿರಣ್ ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಕೆ. ಇಬ್ರಾಹಿಂ ಮಾಣಿ, ಮುಖ್ಯ ಶಿಕ್ಷಕ ಎಸ್. ಚೆನ್ನಪ್ಪ ಗೌಡ ,ಕ.ಚು.ಸಾ.ಪ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ರವೀಂದ್ರ ಕುಕ್ಕಾಜೆ ಉಪಸ್ಥಿತರಿದ್ದರು.ಈ ಕಾರ್ಯಕ್ರಮ ದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ 625/603ಅಂಕಗಳನ್ನು ಗಳಿಸಿದ ಮರ್ಯಂ ಸ್ವಾಬಿರಾರವರನ್ನು ಗೌರವಿಸಲಾಯಿತು.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಅಶೋಕ ಎನ್‌. ಕಡೇಶಿವಾಲಯ ವಹಿಸಿದ್ದರು. ವಿದ್ಯಾರ್ಥಿಗಳಾದ ಶ್ರುತಿಜ, ರಕ್ಷಿತಾ, ನಮೃತ, ಕ.ಚು.ಸಾ.ಪ. ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಡಾ.ಶಾಂತಾ ಪುತ್ತೂರು, ಕ.ಚು.ಸಾ.ಪ. ಬಂಟ್ವಾಳದ ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಪುತ್ತೂರು ವಿವೇಕಾನಂದ ತಾಂತ್ರಿಕ ಕಾಲೇಜಿನ ಸಹ ಪ್ರಾಧ್ಯಾಪಕಿ ಮಾನಸ ಕೈಂತಜೆ, ಬಿ.ಎ. ವಿದ್ಯಾ ಸಂಸ್ಥೆ ತುಂಬೆಯ ಸಹ ಶಿಕ್ಷಕ ರಮೇಶ್ ಮೆಲ್ಕಾರ್, ಪದ್ಮನಾಭ ಪೂಜಾರಿ ಬಂಟ್ವಾಳ, ಪ್ರವೀಣ್ ಜಯ ವಿಟ್ಲ, ಕರ್ನಾಟಕ ಪ್ರೌಢ ಶಾಲೆ ಮಾಣಿ ವಿದ್ಯಾರ್ಥಿಗಳು ಸ್ವರಚಿತ ಕವನ ವಾಚಿಸಿದರು. ಬರಹಗಾರರ ವೇದಿಕೆ ತಾಲೂಕು ಅಧ್ಯಕ್ಷ ಜಯರಾಮ ಕಾಂಚನ ಕವನ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಮೈತ್ರಿ ಮತ್ತು ತಂಡ ಪ್ರಾರ್ಥಿಸಿ, ಜೀವಿತ್ ಮತ್ತು ತಂಡ ಸಹಕರಿಸಿದರು.

LEAVE A REPLY

Please enter your comment!
Please enter your name here