ಪುಣಚ: 120 ವರ್ಷಗಳ ಇತಿಹಾಸವಿರುವ ಪುಣಚ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಸೆ.4ರಂದು ಶಾಲಾ ಕಟ್ಟಡದ ಆವರಣದಲ್ಲಿ ನಡೆಯಿತು.
ಪುಣಚ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯಯರು ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಿ,ಮಾತನಾಡಿ ದೈವ ದೇವರುಗಳ ಅನುಗ್ರಹದಿಂದ ಸರ್ವಧರ್ಮೀಯರ ಸಹಕಾರದಲ್ಲಿ ಉತ್ತಮ ರೀತಿಯಲ್ಲಿ ಕಟ್ಟಡ ನಿರ್ಮಾಣಗೊಂಡು ವಿದ್ಯಾದೇಗುಲವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಎಸ್ ಮಹಮ್ಮದ್ ಮಾತನಾಡಿ 120 ವರ್ಷಗಳ ಇತಿಹಾಸ ಇರುವ ನಮ್ಮ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಎಲ್ಲರು ಸರ್ವ ರೀತಿಯ ಸಹಕಾರ ನೀಡಿ ಶಾಲಾ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸುವಂತೆ ತಿಳಿಸಿದರು.
ಪುಣಚ ಪರಿಯಾಲ್ತಡ್ಕ ಮುಹಿಯಿದ್ದೀನ್ ಜುಮಾ ಮಸೀದಿಯ ಧರ್ಮಗುರು ಹಸೈನಾರ್ ಫೈಝಿ, ಕ್ರಿಸ್ತ ರಾಜ ಚರ್ಚ್ ನ ಧರ್ಮಗುರು ಫಾ.ಸ್ಟ್ಯಾನಿ ರೊಡ್ರಿಗಸ್, ಪುಣಚ ಗ್ರಾ.ಪಂ.ಅಧ್ಯಕೆ ಬೇಬಿ ಪಟಿಕಲ್ಲು,
ಶಾಲಾ ಆಡಳಿತ ಸಮಿತಿ ಸಂಚಾಲಕಿ ಉಷಾಲಕ್ಷ್ಮಿ ಮಣಿಲ, ಶಾಲಾ ಮುಖ್ಯಗುರು ರಾಮಚಂದ್ರರಾವ್, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿವೃತ್ತ ಮುಖ್ಯಗುರು ಹರ್ಷ ಶಾಸ್ತ್ರಿ ಮಣಿಲ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.