ಸೆ.6:ರೋಟರಿ ಪುತ್ತೂರು, ಇನ್ನರ್ ವೀಲ್ ಕ್ಲಬ್ ನಿಂದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಹಾಗೂ ಇನ್ನರ್ ವೀಲ್ ಕ್ಲಬ್ ಜಂಟಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವು ಸೆ.6ರಂದು ತೆಂಕಿಲದ ಒಕ್ಕಲಿಗ ಗೌಡ ಸಮುದಾಯಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ನಡೆಯಲಿದೆ.

ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲೆ 3181, ಇದರ 2026-27ರ ನಿಯೋಜಿತ ಗವರ್ನರ್ ಸತೀಶ್ ಬೋಳಾರ್ ರವರು ಭಾಗವಹಿಸಲಿರುವರು ಎಂದು ರೋಟರಿ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ದಾಮೋದರ್ ಕೆ, ವೃತ್ತಿಪರ ವಿಭಾಗ ನಿರ್ದೇಶಕ ಚಿದಾನಂದ ಬೈಲಾಡಿ, ಕಾರ್ಯಕ್ರಮ ಸಂಯೋಜಕ ಶ್ರೀಧರ ಕಣಜಾಲು, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ ಆಚಾರ್, ಕಾರ್ಯದರ್ಶಿ ವಚನ ಜಯರಾಮ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here