ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ, ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘ ಹಾಗೂ ಶ್ರೀವರ ಯುವಕ ಮಂಡಲ ಪೂರ್ಲಪ್ಪಾಡಿ ಇದರ ಸಹಯೋಗದಲ್ಲಿ 22ನೇ ವರ್ಷದ ಮೊಸರು ಕುಡಿಕೆ ಉತ್ಸವವು ಪೂರ್ಲಪ್ಪಾಡಿ ಅಂಗನವಾಡಿ ಕೇಂದ್ರದ ವಠಾರದಲ್ಲಿ ನಡೆಯಿತು.
ಗೌರವಾಧ್ಯಕ್ಷರಾದ ಈಶ್ವರ್ ಭಟ್ ಪೂರ್ಲಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಮ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸಾಯಂಕಾಲ ನಡೆದ ಬಹುಮಾನ ವಿತರಣಾ ಸಮಾರಂಭವು ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ್ ಪೂರ್ಲಪ್ಪಾಡಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ, ರಾಧಾಕೃಷ್ಣ ಎರುಂಬು, ಶ್ರೀಕೃಷ್ಣ ಬದನಾಜೆ, ವಿಶ್ವನಾಥ ಗೌಡ ಕುಳಾಲು, ಜಗದೀಶ್ ರೈ ಪನಡ್ಕ , ವಕೀಲರು ನೋಟರಿ ರಾಮಣ್ಣ ಗೌಡ ದೇವರಮನೆ, ರೋಹಿತ್ ರೈ ಚೆಂಬರಡ್ಕ, ಸಮಿತಿ ಅಧ್ಯಕ್ಷ ವಿಜಯ ಅಡ್ಯಾಡಿ, ಗ್ರಾಮ ಪಂ. ಸದಸ್ಯೆ ಜಯಲಕ್ಷ್ಮೀ ಕೆ, ಶ್ರೀವರ ಯುವಕ ಮಂಡಲ ಅಧ್ಯಕ್ಷ ಸೋಮನಾಥ ಗೌಡ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮತ್ತು ಸ್ಥಳೀಯ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಶಾರದಾ ಸುಧಾಕರ ಸೇಮಿತ ರವರನ್ನು ಈ ಸಂದರ್ಭದಲ್ಲಿ ಸಮಿತಿಯಿಂದ ಸನ್ಮಾನಿಸಲಾಯಿತು.
ಮಾಲವಿ ಯತೀಶ್ ಪ್ರಾರ್ಥಿಸಿದರು. ಶೀತಲ್ ಪಿ ಜೆ ದೇವರಮನೆ ಸ್ವಾಗತಿಸಿದರು. ಕಿರಣ್ ಚಂದ್ರ ಆಳ್ವ, ಸಂತೋಷ್ ಪಿ, ಯೋಗೀಶ್ ಪಿ , ವಿಶಾಕ್ ಕೆ, ಪ್ರಜೇಶ್ ಕೆ ಬಹುಮಾನ ವಿತರಣೆಯಲ್ಲಿ ಸಹಕರಿಸಿ, ಯತೀಶ್ ಪಾಲೆತ್ತಡಿ ಸನ್ಮಾನ ಪತ್ರ ವಾಚಿಸಿ, ಹರೀಶ್ ವಿಟ್ಲ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಊರವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಿರು ನಾಟಕ ನಡೆಯಿತು.