ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

0

ಪ್ರತೀ ಶಿಕ್ಷಕನಿಗೆ ತನ್ನ ಶಿಷ್ಯರೇ ಗುರುಗಳು : ಲಕ್ಷ್ಮೀಶ ತೋಳ್ಪಾಡಿ


ಪುತ್ತೂರು: ಗುರುವಿನ ಮನಸ್ಸಿನಲ್ಲಿ ಶಿಷ್ಯನಿದ್ದರೆ ಆತನೇ ನಿಜವಾದ ಗುರು. ಪಾಠ ಮಾಡುವ ಪ್ರಕ್ರಿಯೆಯಲ್ಲಿ ಗೊತ್ತಿಲ್ಲದೇ ನಡೆಯುವ ಕಲಿಕೆಯೇ ಶಿಕ್ಷಣ. ಮಕ್ಕಳ ಒಡನಾಟದಲ್ಲಿ ಶಿಕ್ಷಕನೂ ಮಕ್ಕಳ ಹಾಗೆಯೇ ಆಗುತ್ತಾನೆ. ಪ್ರತೀ ಶಿಕ್ಷಕನಿಗೆ ತನ್ನ ಶಿಷ್ಯರೇ ಗುರುಗಳು ಎಂದು ಅಂಬಿಕಾ ಸಮೂಹ ಶೀಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಯೋಜಿಸಲಾದ ಶಿಕ್ಷಕರ ದಿನಾಚರಣೆಯಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಗುರುಗಳಿಗೆ ನಮಸ್ಕಾರ ಮಾಡುವ ಪರಿಪಾಠ, ಸಂಸ್ಕೃತಿ ಇರುವುದು ಭಾರತದಲ್ಲಿ ಮಾತ್ರ. ಡಾ.ಸರ್ವೆಪಲ್ಲಿ ರಾಧಾಕೃಷ್ಣ ಅವರಿದ್ದಂತಹಾ ಮೇಲ್ಪಂಕ್ತಿ ಸ್ಥಾನದಲ್ಲಿ ಶಿಕ್ಷಕರಿರಬೇಕು. ಭ್ರಷ್ಟಾಚಾರ ರಹಿತ ಸಮಾಜ ಕಟ್ಟುವುದಕ್ಕೆ ಶಿಕ್ಷಣ ವ್ಯವಸ್ಥೆ ಅಡಿಯಿರಿಸಬೇಕು ಎಂದರು.


ಶಾಲಾ ಪ್ರಾಂಶುಪಾಲೆ ಮಾಲತಿ ಡಿ, ಶಿಕ್ಷಕ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸನ್ಮಯ್ ಹಾಗೂ ತಂಡದವರು ಪ್ರಸ್ತುತ ಪಡಿಸಿದ ಆಶಯಗೀತೆ ಹಾಡಿದರು. 10ನೇ ತರಗತಿ ವಿದ್ಯಾರ್ಥಿಗಳಾದ ಅಕ್ಷಜ್ ಸ್ವಾಗತಿಸಿ, ಅದಿತಿ ರೈ, ಹಿತಾಲಿ ಪಿ, ಶಿಕ್ಷಕರ ದಿನಾಚರಣೆ ಮಹತ್ವವನ್ನ ತಿಳಿಸಿದರು. ಆದ್ಯ ಎಂ ಎ ಕಾರ್ಯಕ್ರಮ ನಿರೂಪಿಸಿದರು. ಆದ್ಯ ಎಸ್ ರೈ ವಂದನಾರ್ಪನೆ ಮಾಡಿದರು. ಶಾಲಾ ಕನ್ನಡ ಭಾಷಾ ಶಿಕ್ಷಕಿ ದಿವ್ಯ ಅತಿಥಿಗಳನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here