ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ-ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳು ದ್ವಿತೀಯ ಸಮಗ್ರ ಪ್ರಶಸ್ತಿಗಳೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆ

0

ಪುತ್ತೂರು:ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಪುತ್ತೂರು ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಆ.29ರಂದು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆಯಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಥಮ ಪ್ರಶಸ್ತಿಗಳನ್ನು ಪಡೆದುಕೊಂಡು  ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕಿರಿಯರ ವಿಭಾಗದಲ್ಲಿ ಸಂಸ್ಕೃತ ಧಾರ್ಮಿಕ ಪಠಣ -ಶ್ರೀ ಸುಮುಖ ಶರ್ಮ 4ನೇ ತರಗತಿ ಪ್ರಥಮ (ಕೆಮ್ಮಾಯಿ ಶ್ರೀ ರಾಮ ಶರ್ಮ ಹಾಗೂ ಸವಿತಾ ಶರ್ಮ ದಂಪತಿಯ ಪುತ್ರ) , ಛದ್ಮವೇಷ ಅದ್ವಿಕಾ ಪ್ರಭು 4ನೇ ತರಗತಿ. ಪ್ರಥಮ. (ದಾರಂದಕುಕ್ಕು ಶ್ರೀ ಅಶೋಕ್ ಪ್ರಭು ಹಾಗೂ ಶ್ವೇತಾ ಪ್ರಭು ದಂಪತಿ ಪುತ್ರಿ) ,ಕಥೆ ಹೇಳುವುದು-ಸಮನ್ವಿ ಎನ್.ಎಸ್.4ನೇ ತರಗತಿ-ಪ್ರಥಮ (ಬನ್ನೂರು ಶ್ರೀರಾಮ ಎನ್.ಎಸ್.ಹಾಗೂ ಅಶ್ವಿನಿ ಪಿ.ಎಸ್.ದಂಪತಿ ಪುತ್ರಿ).ಭಕ್ತಿಗೀತೆ-ಧನ್ವಿತ್ ಎಚ್.ಭಟ್ ಕೆಕ್ಕಾರ್ 4ನೇ ತರಗತಿ ದ್ವಿತೀಯ. (ನೆಹರೂನಗರ ಶ್ರೀ ಹರಿಹರ ಭಟ್ ಕೆಕ್ಕಾರ್ ಹಾಗೂ ಮಂಜುಳಾ ಭಟ್ ದಂಪತಿ ಪುತ್ರ),ಇಂಗ್ಲೀಷ್ ಕಂಠಪಾಠ-ಅತ್ರೇಯ ಸಚಿನ್ ಅಚಳ್ಳಿ 4ನೇ ತರಗತಿ-ತೃತೀಯ.(  ಬದನಾಜೆ  ಶ್ರೀ ಸಚಿನ್ ಅಚಳ್ಳಿ ಹಾಗೂ ಚೇತನಾ ದಂಪತಿ ಪುತ್ರ)  ಪಡೆದುಕೊಡಿದ್ದಾರೆ.

ಹಿರಿಯರ ವಿಭಾಗದ ಇಂಗ್ಲಿಷ್ ಕಂಠಪಾಠದಲ್ಲಿ ರಚನಾ ಬಾಯಾರ್  ಪ್ರಥಮ (7ನೇ ತರಗತಿ, ರಂಜನ್ ಕುಮಾರ್ ಬಾಯಾರ್ ಹಾಗೂ ಸುಪ್ರಿಯ ದಂಪತಿಗಳ ಪುತ್ರಿ),  ದೇಶಭಕ್ತಿ ಗೀತೆ  ನೇಶಾಕಾವ್ಯ ಮೊಗೇರ್  ಪ್ರಥಮ (7ನೇ ತರಗತಿ,  ರಮೇಶ್ ರಾವ್ ಮುಗೇರ್ ಹಾಗೂ ಕೃಪಾರಾಣಿ .ಎಸ್. ಪಾಲ್ತಾಡಿ  ದಂಪತಿಗಳ ಪುತ್ರಿ) ಕವನವಾಚನ ಸಾನ್ವಿ .ಡಿ ಪ್ರಥಮ (7ನೇ ತರಗತಿ, ದೀಪಕ್ ಹಾಗೂ ಯಶೋಧ .ಕೆ. ದರ್ಬೆ ದಂಪತಿಗಳ ಪುತ್ರಿ,) ಸಂಸ್ಕ್ರತ ಧಾರ್ಮಿಕ ಪಠಣ  ಶ್ರೀ ಸುಮತಿ  ದ್ವಿತೀಯ (6ನೇ ತರಗತಿ, ಶ್ರೀರಾಮ ಶರ್ಮ ಹಾಗೂ ಸವಿತ ಕೆಮ್ಮಾಯಿ ದಂಪತಿಗಳ,ಪುತ್ರಿ),  ಹಿಂದಿ ಕಂಠಪಾಠ ರುದ್ರ ಪ್ರತಾಪ್ ಸಿಂಗ್ , ತೃತೀಯ (5ನೇ ತರಗತಿ, ಉತ್ತಮ್ ಹಾಗೂ ಶಶಿಕಲಾ ಕಾನ್ಪುರ, ಉತ್ತರ ಪ್ರದೇಶ ದಂಪತಿಗಳ ಪುತ್ರ,) ಚಿತ್ರಕಲೆ  ಚಿರಂತ್.ಎ ತೃತೀಯ(7ನೇ ತರಗತಿ, ಚಂದ್ರಶೇಖರ ಪೂಜಾರಿ ಹಾಗೂ ಸತ್ಯವತಿ  ಪಾಪೆಮಜಲು ದಂಪತಿಗಳ ಪುತ್ರ), ಭಕ್ತಿ ಗೀತೆ ವೈಷ್ಣವಿ. ಕೆ ತೃತೀಯ( 6ನೇ ತರಗತಿ ಕೃಷ್ಣಕುಮಾರ್ ಕೆ ಹಾಗೂ ಮಧುರ  ಕೆ ಸಾಲ್ಮರ ದಂಪತಿಗಳ ಪುತ್ರಿ,) ಆಶುಭಾಷಣದಲ್ಲಿ  ಅನಘ ಕೆ. ಆರ್ ತೃತೀಯ (7ನೇ ತರಗತಿ  ಅಕ್ಷತಾ ಕುಮಾರಿ ಪೊಳ್ಯ ಇವರ ಸುಪುತ್ರಿ) ಬಹುಮಾನ ಪಡೆದುಕೊಡಿದ್ದಾರೆ. ಹಿರಿಯರ ಹಾಗೂ ಕಿರಿಯರ ಎರಡೂ ವಿಭಾಗಗಳಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಗಳನ್ನೂ ಪಡೆದುಕೊಂಡು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here