ಸೆ.8: ಕಬಕ ಶ್ರೀ ಮಹಾದೇವಿ ಯುವಕ ಮಂಡಲದ ಬೆಳ್ಳಿಹಬ್ಬದ ಪ್ರಯುಕ್ತ ಕೆಸರ್‌ಡ್ ಒಂಜಿದಿನ

0

ಪುತ್ತೂರು: ಕಬಕ ಶ್ರೀ ಮಹಾದೇವಿ ಯುವಕ ಮಂಡಲದ ಬೆಳ್ಳಿಹಬ್ಬದ ಪ್ರಯುಕ್ತ ಕಬಕ ಶ್ರೀ ಮಹಾದೇವಿ ಮಹಿಳಾ ಮಂಡಲದ ಇವರ ಸಹಕಾರದೊಂದಿಗೆ ಕೆಸರ್‌ಡ್ ಒಂಜಿದಿನ ಕಾರ್ಯಕ್ರಮವು ಸೆ.8ರಂದು ಕಬಕ ಸೀಗೆತ್ತಡಿಯಲ್ಲಿ ನಡೆಯಲಿದೆ.


ಬೆಳಗ್ಗೆ ಕಬಕ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ನಡೆದು ಸೀಗೆತ್ತಡಿಗೆ ಕ್ರೀಡಾ ಜ್ಯೋತಿಯೊಂದಿಗೆ ಮೆರವಣಿಗೆ ನಡೆಯಲಿದೆ. ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ
ಶ್ರೀ ಮಹಾದೇವಿ ಉತ್ಸವ ಸಮಿತಿಯ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಲಿದೆ.


ಬಳಿಕ ಆಟೋಟ ಸ್ಪರ್ಧೆಗಳ ಆರಂಭ, ನಿಧಿಶೋಧ ಪ್ರಾರಂಭಗೊಳ್ಳಲಿದೆ. ಮಧ್ಯಾಹ್ನ ಭೋಜನ ನಡೆಯಲಿದೆ. ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭ ದಲ್ಲಿ ಬಹುಮಾನ ವಿತರಣೆ ನಡೆಯಲಿದೆ.

LEAVE A REPLY

Please enter your comment!
Please enter your name here