ಪಾಣಾಜೆ: ಆರ್ಲಪದವು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 29ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಬ್ರಹ್ಮಶ್ರೀ ಶ್ರೀಕೃಷ್ಣ ಭಟ್ ಬಟ್ಯಮೂಲೆಯವರ ನೇತೃತ್ವದಲ್ಲಿ ಸೆ. ರಂದು ಜರಗಿತು. ಬೆಳಿಗ್ಗೆ ಗಣೇಶನ ವಿಗ್ರಹ ಪ್ರತಿಷ್ಠಾಪನೆ, ಭಜನಾ ಕಾರ್ಯಕ್ರಮ, ಶ್ರೀ ಗಣಪತಿ ಹವನ, ಅಂಗನವಾಡಿ, ಶಾಲಾ ಮಕ್ಕಳಿಂದ ಚಿಣ್ಣರ ಕಲರವ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಭಾ ಕಾರ್ಯಕ್ರಮ
ಉತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಣಾಜೆ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಈಶ್ವರ ಭಟ್ ಕಡಂದೇಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಆರ್.ಸಿ. ನಾರಾಯಣ ರೆಂಜ, ಪಾಣಾಜೆ ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ, ಕೆಯ್ಯೂರು ಸ.ಪ.ಪೂ.ಕಾಲೇಜಿನ ಆಂಗ್ಲ ಉಪನ್ಯಾಸಕ ಬಾಲಕೃಷ್ಣ ಬೇರಿಕೆ , ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ನವೀನ್ ಕುಮಾರ್ ರೈ ಚೆಲ್ಯಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಭೇಟಿ ನೀಡಿದರು.
ಸನ್ಮಾನ
ಕಾರ್ಯಕ್ರಮದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವ ಸಲಹೆಗಾರ ಪಿ.ಜಿ. ಶಂಕರನಾರಾಯಣ ಭಟ್ ಮತ್ತು ಪವರ್ ಮ್ಯಾನ್ ಹಂಝರವರಿಗೆ ಸನ್ಮಾನ ಮಾಡಲಾಯಿತು. ಐಆರ್‌ಎಸ್ ನಿವೃತ್ತ ಅಧಿಕಾರಿ ರಾಮ್‌ಕುಮಾರ್, ಪಾಣಾಜೆ ಗ್ರಾ.ಪಂ. ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ, ಬೆಟ್ಟಂಪಾಡಿ ಮೆಸ್ಕಾಂ ಜೆಎಇ ಪುತ್ತು ಜೆ. ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರಮುಖರು, ಭಕ್ತಾಭಿಮಾನಿಗಳು ಪಾಲ್ಗೊಂಡರು.
ಗೌರವ ಸಲಹೆಗಾರರಾದ ರಮಾನಾಥ ರೈ ಪಡ್ಯಂಬೆಟ್ಟು, ಅಧ್ಯಕ್ಷ ಬಾಬು ರೈ ಕೋಟೆ, ಉಪಾಧ್ಯಕ್ಷರಾದ ಪ್ರಕಾಶ್ ಕುಲಾಲ್ ಆರ್ಲಪದವು, ಪ್ರೇಮ್‌ರಾಜ್ ಆರ್ಲಪದವು, ಕಾರ್ಯದರ್ಶಿ ಹರೀಶ್ ಕುಮಾರ್ ಕಡಮಾಜೆ, ಜೊತೆ ಕಾರ್ಯದರ್ಶಿ ಮೋಹನ್ ಕುಮಾರ್ ಬೊಳ್ಳುಕಲ್ಲು, ಕೋಶಾಧಿಕಾರಿ ಕರುಣಾಕರ ಕುಲಾಲ್ ಆರ್ಲಪದವು ಉಪಸ್ಥಿತರಿದ್ದರು.
ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೋಲ್ವಾಲ್ಕರ್ ವಂದಿಸಿದರು. ಧನ್ವಿ ರೈ ಕೋಟೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಶೋಭಾಯಾತ್ರೆ
ಸಂಜೆ ನಡೆದ ಶೋಭಾಯಾತ್ರೆಯಲ್ಲಿ ರಣಮಂಗಲ ಶ್ರೀ ಸುಬ್ರಹ್ಮಣ್ಯ ಕುಣಿತ ಭಜನಾ ತಂಡ ದೇವಸ್ಯ ಹಾಗೂ ಶ್ರೀದೇವಿ ಭಜನಾ ಮಂಡಳಿ ಬೊಳ್ಳಿಂಬಳ ತಂಡಗಳ ಕುಣಿತ ಭಜನೆಯೊಂದಿಗೆ, ವಾದ್ಯಘೋಷಗಳೊಂದಿಗೆ ಆರ್ಲಪದವು ಮುಖ್ಯರಸ್ಥೆಯಲ್ಲಿ ಸಾಗಿ ಕೊಂದಲ್ಕಾನ ಶ್ರೀ ಶಾರದಾ ನದಿಯಲ್ಲಿ ವಿಗ್ರಹದ ಜಲಸ್ತಂಭನ ಮಹೋತ್ಸವ ಜರಗಿತು. ಬೆಳಿಗ್ಗೆ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಸಂಘ ಮತ್ತು ಕಾರ್ತಿಕೇಯ ಮಹಿಳಾ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಿತು.