ನೆಲ್ಯಾಡಿ: ಜೇಸಿ ಸಪ್ತಾಹ ’ಪರಿಸರ ಜಾಗೃತಿ’ ಮಾಹಿತಿ ಶಿಬಿರ

0

ನೆಲ್ಯಾಡಿ: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ ಆಶ್ರಯದಲ್ಲಿ ನಡೆಯುತ್ತಿರುವ 41ನೇ ವರ್ಷದ ಜೇಸಿ ಸಪ್ತಾಯ ’ಡೈಮಂಡ್-2024’ ಸಪ್ತ ಸಂಭ್ರಮದ 3ನೇ ದಿನವಾದ ಸೆ.11ರಂದು ಸಂಜೆ ಕೌಕ್ರಾಡಿ ಗ್ರಾಮದ ಬರೆಗುಡ್ಡೆ ವಾತ್ಸಲ್ಯಮನೆಯಲ್ಲಿ ನೀರು ಇಂಗಿಸುವಿಕೆ, ಮಳೆಕೊಯ್ಲು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ಶಿಬಿರ ನಡೆಯಿತು.

ನೆಲ್ಯಾಡಿ ಜೇಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ನಿವೃತ್ತ ಮುಖ್ಯಗುರು, ಸೀನಿಯರ್ ಛೇಂಬರ್‌ನ ನೆಲ್ಯಾಡಿ ಲೀಜನ್ ಅಧ್ಯಕ್ಷ ಶೀನಪ್ಪ ಎಸ್. ಮಾಹಿತಿ ನೀಡಿದರು. ಎಸ್‌ಕೆಡಿಆರ್‌ಪಿ ನೆಲ್ಯಾಡಿ ವಲಯ ಮೇಲ್ವಿಚಾರಕ ಆನಂದ ಡಿ. ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.

ಅತಿಥಿಗಳಾಗಿದ್ದ ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ರಮೇಶ ಬಾಣಜಾಲು, ಹೊಸಮಜಲು ಅಶ್ವತ್ಥ ಗೆಳೆಯರ ಬಳಗದ ಅಧ್ಯಕ್ಷ ವಂದನ್‌ಕುಮಾರ್, ಎಸ್‌ಕೆಡಿಆರ್‌ಡಿಪಿ ಕೌಕ್ರಾಡಿ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.

ಗೌರವಾರ್ಪಣೆ:
ಕೌಕ್ರಾಡಿ ಒಕ್ಕೂಟದ ಸೇವಾಪ್ರತಿನಿಧಿ ನಮಿತಾ ಸದಾನಂದ ಶೆಟ್ಟಿ ಹಾಗೂ ನಿವೃತ್ತ ಮುಖ್ಯಗುರು ಶೀನಪ್ಪ ಎಸ್. ದಂಪತಿಯನ್ನು ಗೌರವಿಸಲಾಯಿತು.

ಜೇಸಿ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಸ್ವಾಗತಿಸಿ, ನಿರೂಪಿಸಿದರು. ಯೋಜನಾ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಪುರಂದರ ಗೌಡ ಡೆಂಜ, ನೆಲ್ಯಾಡಿ ಜೇಸಿಐ ಪೂರ್ವಾಧ್ಯಕ್ಷರಾದ ರವೀಂದ್ರ ಟಿ.,ದಯಾನಂದ ಆದರ್ಶ, ಡಾ.ಸದಾನಂದ ಕುಂದರ್, ಮೋಹನ್‌ಕುಮಾರ್ ದೋಂತಿಲ, ಜಾನ್ ಪಿ.ಎಸ್., ಶಿವಪ್ರಸಾದ್ ಬೀದಿಮಜಲು, ನೆಲ್ಯಾಡಿ ಜೇಸಿಐ ಜೊತೆ ಕಾರ್ಯದರ್ಶಿ ಜಾಹ್ನವಿ ಐ., ಸದಸ್ಯರಾದ ಅಬ್ದುಲ್ ರಹಿಮಾನ್, ವಿನ್ಯಾಸ್ ಬಂಟ್ರಿಯಾಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here