ಮಂಗಳೂರು: ಕಾರಿನ ಬ್ಯಾಟರಿಯಲ್ಲಿ ಉಂಟಾದ ಸಮಸ್ಯೆಗೆ ಸ್ಪಂದಿಸದ ಕಾರು ಮಾರಾಟ ಸಂಸ್ಥೆಯು ಕಾರಿನ ಮಾಲಕರಿಗೆ ಪರಿಹಾರ ನೀಡುವಂತೆ ಮಂಗಳೂರಿನ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.
ಪುತ್ತೂರಿನ ಪಶುವೈದ್ಯೆ ಡಾ| ಉಷಾ ಅವರು ಮಂಗಳೂರಿನ ಬಿಜೈ ಮತ್ತು ಪುತ್ತೂರಿನ ಬೊಳುವಾರಿನಲ್ಲಿರುವ ಕಾರು ಮಾರಾಟ ಸಂಸ್ಥೆಯೊಂದರಿಂದ ಕಾರು ಖರೀದಿಸಿದ್ದರು. ಕಾರಿನ ವಾರಂಟಿಯ ಅವಧಿಯೊಳಗೆಯೇ ಬ್ಯಾಟರಿ ಸಮಸ್ಯೆ ಉಂಟಾಗಿತ್ತು. ಇದನ್ನು ಸಂಸ್ಥೆಯ ಗಮನಕ್ಕೆ ತಂದಿದ್ದರೂ ಸಂಸ್ಥೆಯವರು ಸ್ಪಂದಿಸಿರಲಿಲ್ಲ. ಇದರಿಂದ ಮೈಲೇಜ್, ಪಿಕಪ್ ಮತ್ತು ಇತರ ಸಮಸ್ಯೆಗಳು ಕೂಡ ಕಾಣಿಸಿಕೊಂಡಿದ್ದವು.
ಸಮಸ್ಯೆಗೆ ಸ್ಪಂದಿಸದ ಸಂಸ್ಥೆಯ ವಿರುದ್ಧ ಡಾ| ಉಷಾ ಅವರು ನ್ಯಾಯವಾದಿ ವಿಶ್ವನಾಥ್ ದೇವಸ್ಯ ಅವರ ಮೂಲಕ ಮಂಗಳೂರಿನ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಅರ್ಜಿದಾರೆ ಡಾ| ಉಷಾ ಅವರಿಗೆ ಪರಿಹಾರ ನೀಡುವಂತೆ ಸಂಸ್ಥೆಗೆ ಆದೇಶ ಮಾಡಿದೆ.