ಪ್ರಜಾಪ್ರಭುತ್ವ ಅಂದರೆ ಪ್ರಜೆಗಳು ಪ್ರಭುಗಳು,ಅವರದ್ದೇ ಆಡಳಿತ ಎಂದರ್ಥ -ಜನಪ್ರತಿನಿಧಿಗಳು, ಅಧಿಕಾರಿಗಳು ಜನಸೇವಕರು -ಅದು ಇಲ್ಲಿ ನಡೆಯುತ್ತಿದೆಯೇ?

0

ಭಾರತಕ್ಕೆ ಸ್ವಾತಂತ್ರ್ಯ ನೀಡಿದರೆ ಅದು ರೌಡಿಗಳ, ರಾಸ್ಕಲ್‌ಗಳ, ಅಕ್ರಮ ವ್ಯವಹಾರ ಮಾಡುವವರ, ಜಗಳ ಗಂಟರ ಕೈಗೆ ಹೋಗುತ್ತದೆ -ಚರ್ಚಿಲ್

ಭಾರತದ ಕಟ್ಟ ಕಡೆಯ ವ್ಯಕ್ತಿಗೆ ಸಮಾನ ಅವಕಾಶ, ಹಕ್ಕು, ಸಾಮರಸ್ಯದ, ಸ್ವಾವಲಂಬಿ ಜೀವನ ದೊರಕಿ ತಲೆಯೆತ್ತಿ ನಿಲ್ಲುವಂತಾಗುವುದೇ ಸ್ವಾತಂತ್ರ್ಯದ ಉದ್ದೇಶ- ಮಹಾತ್ಮಗಾಂಧಿ

ಭಾರತಕ್ಕೆ ಸ್ವಾತಂತ್ರ್ಯ ನೀಡಿದರೆ ಅದು ರೌಡಿಗಳ, ರಾಸ್ಕಲ್‌ಗಳ, ಅಕ್ರಮ ವ್ಯವಹಾರ ಮಾಡುವವರ, ಜಗಳ ಗಂಟರ ಕೈಗೆ ಹೋಗುತ್ತದೆ. ಎಲ್ಲಾ ಭಾರತೀಯ ನಾಯಕರು ಕಡಿಮೆ ಸಾಮರ್ಥ್ಯ ಮತ್ತು ಸತ್ವವಿಲ್ಲದ ಪುರುಷರು. ಅವರು ಸಿಹಿ ನಾಲಿಗೆ ಮತ್ತು ಮೂರ್ಖ ಹೃದಯಗಳನ್ನು ಹೊಂದಿರುತ್ತಾರೆ. ಅವರು ಅಧಿಕಾರಕ್ಕಾಗಿ ತಮ್ಮತಮ್ಮಲ್ಲೇ ಹೋರಾಡುತ್ತಾರೆ ಮತ್ತು ರಾಜಕೀಯ ಜಗಳದಲ್ಲಿ ಭಾರತ ಕಳೆದುಹೋಗುತ್ತದೆ. ಭಾರತದಲ್ಲಿ ಗಾಳಿ ಮತ್ತು ನೀರಿನ ಮೇಲೆ ತೆರಿಗೆ ವಿಧಿಸುವ ದಿನ ಬರಲಿದೆ ಎಂದು ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಹೇಳಿ, ಭಾರತಕ್ಕೆ ಸ್ವಾತಂತ್ರ್ಯ ನೀಡುವುದನ್ನು ವಿರೋಧಿಸಿದ್ದರು.

ಬ್ರಿಟೀಷರನ್ನು ಭಾರತದಿಂದ ಓಡಿಸುವುದು ಸ್ವಾತಂತ್ರ್ಯದ ಪ್ರಥಮ ಹೆಜ್ಜೆ. ದೇಶದ ಕಟ್ಟಕಡೆಯ ದುರ್ಬಲ ವ್ಯಕ್ತಿಗೂ ಸಮಾನ ಅವಕಾಶ, ಹಕ್ಕು, ಸಾಮರಸ್ಯದ ಸ್ವಾವಲಂಬಿ, ಸ್ವತಂತ್ರ ಜೀವನ ದೊರಕಿ ತಲೆಯೆತ್ತಿ ನಿಲ್ಲುವಂತಾಗುವುದು, ಅಲ್ಲದೆ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಎಷ್ಟೇ ಪ್ರಬಲ ವ್ಯಕ್ತಿಯಿಂದ ಅನ್ಯಾಯವಾದರೂ ಅದನ್ನು ಎದುರಿಸಿ ನಿಲ್ಲುವ ಶಕ್ತಿ ದೊರಕುವಂತಾಗುವುದು ಸ್ವಾತಂತ್ರ್ಯದ ಉದ್ದೇಶ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ.


ಅದರೊಂದಿಗೆ ಯೌವನತ್ಸ ಮಹಿಳೆ ಚಿನ್ನಾಭರಣ ಧರಿಸಿ, ನಡುರಾತ್ರಿಯಲ್ಲಿ ಒಬ್ಬಂಟಿಗಳಾಗಿ ರಸ್ತೆಯಲ್ಲಿ ಹೋಗುವಂತಹ ಸಂದರ್ಭ ಬಂದರೂ ಅವಳಿಗೆ ಸಂಪೂರ್ಣ ರಕ್ಷಣೆ ದೊರಕುವಂತಹ ಸಮಾಜ ಬಂದಾಗ ಅದು ಸ್ವಾತಂತ್ರ್ಯ ಎಂದಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದವು, ಪ್ರಜಾಪ್ರಭುತ್ವದ ಆಡಳಿತ ಬಂದು 73 ವರ್ಷಗಳಾದವು. ಪ್ರಜಾಪ್ರಭುತ್ವ ಅಂದರೆ ಈ ದೇಶ, ಇಲ್ಲಿಯ ಸಂಪತ್ತು ಎಲ್ಲದಕ್ಕೂ ಜನರೇ ಒಡೆಯರು. ಜನರಿಂದ ಜನರಿಗಾಗಿ ಜನರೇ ಆಡಳಿತ ಮಾಡುವುದು. ಇಲ್ಲಿ ಪ್ರಜೆಗಳೇ ಪ್ರಭುಗಳು – ಗುಲಾಮರಲ್ಲ, ಜನಪ್ರತಿನಿಧಿ ಮತ್ತು ಅಧಿಕಾರಿಗಳು-ರಾಜರಲ್ಲ, ಜನಸೇವಕರು ಎಂದು ಅರ್ಥ. ಅದು ಇಲ್ಲಿ ನಡೆಯುತ್ತಿದೆಯೇ?

ಇವತ್ತಿನ ಲೇಖನದಲ್ಲಿ ಬ್ರಿಟನ್‌ನ ಮಾಜಿ ಪ್ರಧಾನಿ ಚರ್ಚಿಲ್ ಭಾರತಕ್ಕೆ ಸ್ವಾತಂತ್ರ್ಯ ನೀಡಿದರೆ ಏನಾಗಬಹುದು ಎಂದು ಹೇಳಿರುವುದನ್ನು, ಮಹಾತ್ಮಗಾಂಧಿ ಸ್ವಾತಂತ್ರ್ಯದ ಉದ್ದೇಶವೇನೆಂದು ಹೇಳಿರುವುದನ್ನು ಉಲ್ಲೇಖಿಸಿದ್ದೇನೆ. ನಿನ್ನೆ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾಗಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮಲ್ಲಿಯೂ ಮಾನವ ಸರಪಳಿ ನಡೆದಿದೆ. ಅದರ ಉದ್ದೇಶವೇನು ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ. ನಾವು ಯಾವ ಕಡೆ ಸಾಗುತ್ತಿದ್ದೇವೆ, ಏನು ಮಾಡಬಹುದು ಎಂಬ ಬಗ್ಗೆ ಚರ್ಚಿಲ್ ಮತ್ತು ಗಾಂಧಿಜಿಯವರ ಚಿಂತನೆಯ ಹಿನ್ನೆಲೆಯಲ್ಲಿ ಜನತೆ ನಮ್ಮ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಚರ್ಚಿಸಲಿ, ಒಳಿತನ್ನು ಸ್ವೀಕರಿಸಿ ಮುಂದುವರಿಯಲಿ ಎಂಬ ಕಾರಣಕ್ಕೆ ಅದನ್ನು ನೀಡಲಾಗಿದೆ. ಈ ಮೇಲಿನ ವಿಷಯಗಳಿಗೆ ಜನಾಭಿಪ್ರಾಯಗಳಿಗೆ ಸ್ವಾಗತ.
ಡಾ.ಯು.ಪಿ.ಶಿವಾನಂದ, ಸುದ್ದಿ ಜನಾಂದೋಲನ ವೇದಿಕೆ, ಮೊ.9986398949. ups@suddimahithi.com

LEAVE A REPLY

Please enter your comment!
Please enter your name here