ಪುತ್ತೂರು: ಸೆ.15ರಂದು ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ 164ನೇ ಜನ್ಮದಿದ ಅಂಗವಾಗಿ ಆಚರಿಸಲಾಗುವ ಇಂಜಿನಿಯರ‍್ಸ್ ಡೇ ಕಾರ್ಯಕ್ರಮದ ಅಂಗವಾಗಿ ಸಾಮಾಜಿಕ ಬದ್ದತೆ, ವೃತ್ತಿಪರ ಒಗ್ಗಟ್ಟಿನ ಅನುಗುಣವಾಗಿ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್ ಪುತ್ತೂರು ಕೇಂದ್ರದ ವತಿಯಿಂದ ಸೆ.16ರಂದು ಸಂಜೆ ಪುತ್ತೂರು ನಗರದಲ್ಲಿ ವಾಕಥಾನ್ ನಡೆಯಿತು.
ಇಂಜಿನಿಯರ‍್ಸ್ ಡೇ ಅಂಗವಾಗಿ ನಡೆಯುವ ವಾಕಥಾನ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಮಹಾತ್ಮಗಾಂಧಿ ಕಟ್ಟೆಯ ಬಳಿಯಿಂದ ಬೊಳುವಾರು ತನಕ ತೆರೆಳಿ ಸಮಾವೇಶಗೊಂಡಿತು.
ಪುತ್ತೂರು ಡಿವೈಎಸ್ಪಿ ಅರುಣ್ ನಾಗೇ ಗೌಡ ಅವರು ವಾಕಥಾನ್‌ಗೆ ಚಾಲನೆ ನೀಡಿದರು. ಮೂರು ನೂರಕ್ಕೂ ಮಿಕ್ಕಿ ಇಂಜಿನಿಯರ‍್ಸ್ ವಾಕಥಾನ್ ನಲ್ಲಿ ಭಾಗವಹಿಸುವ ಮೂಲಕ ಇಂಜಿನಿಯರ್‌ಗಳ ವೃತ್ತಿಪರ ಬದ್ದತೆಯ ಕೆಲಸದ ಕುರಿತು ಜನರಿಗೆ ಸಾಮಾಜಿಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ‍್ಸ್‌ನ ಪುತ್ತೂರು ಕೇಂದ್ರದ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ, ಕೋಶಾಧಿಕಾರಿ ಚೇತನ್, ಸದಸ್ಯರಾದ ಶಿವರಾಮ್, ಪ್ರಸನ್ನ ದರ್ಬೆ, ವ್ಯವಸ್ಥಾಪಕ ಸಮಿತಿ ಸದಸ್ಯ ಚಂದ್ರಶೇಖರ್ ಆಳ್ವ, ಸದಸ್ಯ ಆದರ್ಶ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.