56.76 ಕೋಟಿ ರೂ. ವ್ಯವಹಾರ, ರೂ. 7.97 ಕೋಟಿ ಸಾಲ ವಿತರಣೆ,ಶೇ 84.96 ಸಾಲ ವಸೂಲಾತಿ- ಭಾಸ್ಕರ ಎಸ್.ಗೌಡ ಇಚ್ಲಂಪಾಡಿ
ಪುತ್ತೂರು: ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ(ಪಿಎಲ್‌ಡಿ) ಬ್ಯಾಂಕ್ 2023-24ನೇ ಸಾಲಿನಲ್ಲಿ 56.76 ಕೋಟಿ ರೂ.ಗಳ ವ್ಯವಹಾರವನ್ನು ನಡೆಸಿ, ರೂ. 7.97 ಕೋಟಿ ಸಾಲವನ್ನು ವಿತರಣೆ ಮಾಡಲಾಗಿದ್ದು, ಶೇ 84.96 ಸಾಲ ವಸೂಲಾತಿಯಾಗಿದ್ದು. 39.49 ಲಕ್ಷ ರೂ, ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿರವರು ಹೇಳಿದರು.
ಸೆ. 21 ರಂದು ಪುತ್ತೂರು ಸಹಕಾರಿ ಟೌನ್ ಬ್ಯಾಂಕಿನ ಸಭಾಂಗಣದಲ್ಲಿ ಜರಗಿದ ಬ್ಯಾಂಕ್‌ನ 86 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಲ ವಸೂಲಾತಿಯಲ್ಲಿ ದ.ಕ.ಜಿಲ್ಲೆಯ ಪ್ರಾಥಮಿಕ ಬ್ಯಾಂಕ್‌ಗಳ ಪೈಕಿ ಅತೀ ಹೆಚ್ಚು ಸಾಲ ವಿತರಣೆ ಮಾಡುವ ಬ್ಯಾಂಕ್ ಎಂದು ಗುರುತಿಸಿಕೊಂಡಿರುವುದು ನಮ್ಮ ಸಂಸ್ಥೆಗೆ ಗೌರವವನ್ನು ತಂದಿದೆ ಎಂದು ಹೇಳಿದರು.
ತುಳು ಭಾಷೆಯಲ್ಲಿ 23-24 ನೇ ಸಾಲಿನಲ್ಲಿ ಪ್ರಥಮ ಬಂದವರಿಗೆ ಪ್ರತಿಭಾ ಪುರಸ್ಕಾರ
ಕಡಬ ಮತ್ತು ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ತುಳು ಭಾಷಾ ಪಠ್ಯದಲ್ಲಿ ಪ್ರಥಮ ಸ್ಥಾನಿಯಾದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಿ ಎಂದು ಸದಸ್ಯ ಉಮೇಶ್ ಶೆಟ್ಟಿ ಸಾಯಿರಾಮ್ ಹೇಳಿದಾಗ, ಈ ಬಗ್ಗೆ ಮಾಹಿತಿ ಬಂದಲ್ಲಿ ಈ ವರ್ಷದ ಡಿಸೆಂಬರ್ ತಿಂಗಳ ಒಳಗೆ ಬ್ಯಾಂಕಿನ ಸಾಮನ್ಯ ಸಭೆಯಲ್ಲಿ ಗೌರವಿಸುತ್ತೇವೆ ಎಂದು ಅಧ್ಯಕ್ಷರು ಉತ್ತರ ನೀಡಿದರು.
ಮೂರು ಶೇಕಡಾ ಬಡ್ಡಿಯಲ್ಲಿ ಸಾಲ ಬೇಕು
ಕೃಷಿ ಭೂಮಿ, ವಾಹನ ಖರೀದಿಗೆ ಶೇಕಡಾ ಮೂರರ ಬಡ್ಡಿಯಲ್ಲಿ ಸಾಲ ನೀಡುವ ಬಗ್ಗೆ ಸದಸ್ಯ ಯಶೋಧರ್ ಜೈನ್ ಆಗ್ರಹಿಸಿದಾಗ, ಈ ಬಗ್ಗೆ ನಿರ್ಣಯ ಕೈಗೊಳ್ಳೋಣ ಎಂದು ಅಧ್ಯಕ್ಷರು ಉತ್ತರಿಸಿದರು.
ಸಹಕಾರಿ ಕಾನೂನು ಒಂದೇ ರೀತಿಯಲ್ಲಿ ಇರಲಿ
ಸಹಕಾರಿ ಬ್ಯಾಂಕ್‌ಗಳಿಗೆ ಒಂದೇ ರೀತಿಯ ಕಾನೂನು, ನಿಯಮ, ಜಾರಿ ಮಾಡುವಂತೆ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್ ಒತ್ತಾಯಿಸಿ. ಈ ಬಗ್ಗೆ ಜನಪ್ರತಿನಿಧಿಗಳ ಮೂಲಕ ಒತ್ತಡವನ್ನು ತರುವಂತೆ ಪ್ರಯತ್ನವನ್ನು ಮಾಡುವಂತೆ ಆಗ್ರಹಿಸಿದರು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ಅಧ್ಯಕ್ಷರು ಹೇಳಿದರು.
ಸಾಧಕ ರೈತರಿಗೆ ಸನ್ಮಾನ ಮಾಡಿ
ಪಿಎಲ್‌ಡಿ ಬ್ಯಾಂಕ್ ಮಹಾಸಭೆಯಲ್ಲಿ ಸಾಧಕ ರೈತರನ್ನು ಗುರಿತಿಸಿ, ಅವರಿಗೆ ಸನ್ಮಾನ ಮಾಡಬೇಕೆಂಬ ಸಲಹೆಯನ್ನು ಸದಸ್ಯ ಮೋಹನ್ ಪಕ್ಕಳ ಕುಂಡಾಪುರವರು ಹೇಳಿದಾಗ, ಈ ಬಗ್ಗೆ ಮುಂದೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷರು ಹೇಳಿದರು
ಸಂಘದ ಸದಸ್ಯರಾದ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ, ವಿಕ್ರಂ ರೈ ಸಾಂತ್ಯ, ನಾರಾಯಣ ಪ್ರಕಾಶ್, ಮುರಳೀಧರ್ ಕೆಮ್ಮಾರ, ನಗರ ಸಭಾ ಸದಸ್ಯ ಸುಂದರ ಪೂಜಾರಿ ಬಡಾವು, ನಾಸಿರ್ ಸಮರಗುಂಡಿ, ಜಾನ್ ಮತ್ತಿರರು ವಿವಿಧ ಸಲಹೆ ಸೂಚನೆಯನ್ನು ನೀಡಿದರು.
ಅಭಿನಂದನೆ:
ಸದ್ರಿ ಬ್ಯಾಂಕಿನ ಸದಸ್ಯರ ಮಕ್ಕಳು 2022-23ನೇ ಸಾಲಿನ ವರ್ಷದಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಲಾವಣ್ಯ, ಶೀಫಾಲಿ ರೈ ಹಾಗೂ ಸನ್ನಿಧಿರವರಿಗೆ ಅಭಿನಂದಿಸಲಾಯಿತು.
ಸನ್ಮಾನ
ರಾಷ್ಟ್ರಮಟ್ಟದ ಸಂಸ್ಥೆ ನ್ಯಾಶನಲ್ ಫಿಲ್ಮ್ ಆಂಡ್ ಫೈನ್ ಆರ್ಟ್ಸ್ ಕೋ ಅಪರೇಟಿವ್ ಲಿಮಿಟೆಡ್ ನವದೆಹಲಿ ಇದರ ನಿರ್ದೇಶಕರಾಗಿ ಆಯ್ಕೆಯಾದ ಪುತ್ತೂರು ಪಿಎಲ್‌ಡಿ ಬ್ಯಾಂಕಿನ ನಿರ್ದೆಶಕ ರಾಜಶೇಖರ್ ಜೈನ್‌ರವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಸಮಾರಂಭದಲ್ಲಿ ಸಾವಿರಾರು ಮಂದಿ ಸಂಘದ ಸದಸ್ಯರುಗಳು ಭಾಗವಹಿಸಿದರು.
ಮೊಳಹಳ್ಳಿ ಶಿವರಾಯ ಪ್ರತಿಮೆಗೆ ಹಾರಾರ್ಪಣೆ:
ಮಹಾಸಭೆ ಆರಂಭವಾಗುವ ಮುನ್ನ ಸಹಕಾರ ರಂಗದ ಪಿತಾಮಹ ಮೊಳಹಳ್ಳಿ ಶಿವರಾಯರವರ ಪ್ರತಿಮೆಗೆ ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್. ಗೌಡ ಇಚ್ಲಂಪಾಡಿರವರು ಹಾರಾರ್ಪಣೆಗೈದು, ಗೌರವ ಸೂಚಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಸುಜಾತ ರಂಜನ್ ರೈ, ಕೋಶಾಧಿಕಾರಿ ನಾರಾಯಣ ಪೂಜಾರಿ ಕುರಿಕ್ಕಾರ, ನಿರ್ದೇಶಕರುಗಳಾದ ರಾಜಶೇಖರ್ ಜೈನ್ ಎನ್, ಎ.ಬಿ.ಮನೋಹರ ರೈ, ನಾರಾಯಣ ಕನ್ಯಾನ, ಯುವರಾಜ ಪೆರಿಯತ್ತೋಡಿ, ಪ್ರವೀಣ್ ರೈ ಪಂಜೊಟ್ಟು, ದೇವಯ್ಯ ಗೌಡ, ಉಮೇಶ್ ನಾಕ್, ಧರ್ಣಪ್ಪ ಮೂಲ್ಯ, ಮೀನಾಕ್ಷಿ , ಶೀನ ನಾಯ್ಕ ಉಪಸ್ಥಿತರಿದ್ದರು.
ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್ ಗೌಡ ಇಚ್ಲಂಪಾಡಿ ಸ್ವಾಗತಿಸಿ, ಕೋಶಾಧಿಕಾರಿ ನಾರಾಯಣ ಪೂಜಾರಿ ಕುರಿಕ್ಕಾರ ವಂದಿಸಿದರು, ಬ್ಯಾಂಕಿನ ವ್ಯವಸ್ಥಾಪಕ ಶೇಖರ ಎಂ. ವರದಿ ವಾಚಿಸಿ, ಕಾರ್‍ಯಕ್ರಮ ನಿರೂಪಿಸಿದರು. ಕಡಬ ಶಾಖೆಯ ವ್ಯವಸ್ಥಾಪಕ ಎನ್ ವೇಣು ಭಟ್. ಪ್ರಥಮ ದರ್ಜೆ ಗುಮಸ್ತರಾದ ಸುಮನ ಎಂ, ಲೆಕ್ಕಾಧಿಕಾರಿ ವಿನಯಕುಮಾರ್ ಕೆ,ಸಿಬ್ಬಂದಿಗಳಾದ ಆರತಿ ಟಿ.ಕೆ, ಸುರೇಶ್ ಪಿ, ಭರತ್ ಟಿ, ಹರೀಶ್ ಗೌಡ, ವಿಜಯ ಭಟ್ ಎಚ್, ವಿನಯ ಕುಮಾರ್ ಗೌಡ ಬಿ.ಎಸ್, ಶಿವಪ್ರಸಾದ್ ಯು, ಮನೋಜ್ ಕುಮಾರ್ ಕೆ ಹಾಗೂ ಮನೋಜ್ ಎರವರು ಸಹಕರಿಸಿದರು.
ಮೌನ ಪ್ರಾರ್ಥನೆ- ಸಂತಾಪ
ನಿಧನ ಹೊಂದಿದ ಬ್ಯಾಂಕಿನ ಸದಸ್ಯರುಗಳಿಗೆ ಮತ್ತು ಬ್ಯಾಂಕಿನ ಹಾಲಿ ನಿರ್ದೆಶಕ ಸೋಮಪ್ಪ ನಾಯ್ಕ, ಮಾಜಿ ಅಧ್ಯಕ್ಷ ರಾಮ್ ಭಟ್ ಹಸಂತಡ್ಕ, ಮಾಜಿ ಕಾರ್‍ಯದರ್ಶಿ ಹೊನ್ನಪ್ಪ ಗೌಡ, ಮಾಜಿ ವ್ಯವಸ್ಥಾಪಕ ಧನಕೀರ್ತಿ ಶೆಟ್ಟಿರವರಿಗೆ ಮೌನ ಪ್ರಾರ್ಥನೆ ಮೂಲಕ, ಸಂತಾಪ ಸೂಚಿಸಲಾಯಿತು.
ಹೊಸ ಸಾಲವನ್ನು ನೀಡಲಾಗುವುದು:
ಸುಸ್ತಿದಾರರ ಬಳಿಗೆ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ತೆರಳಿ, ಅವರ ಮನ ಒಲಿಸಿ, ಸಾಲವನ್ನು ಮರುಪಾವತಿಸುವಂತೆ ಮಾಡಿ, ಬಳಿಕ ಅವರಿಗೆ ಹೊಸ ಸಾಲವನ್ನು ನೀಡಲಾಗುವುದು.
ಭಾಸ್ಕರ್ ಎಸ್.ಗೌಡ ಇಚ್ಲಂಪಾಡಿ
ಅಧ್ಯಕ್ಷರು- ಪಿಎಲ್‌ಡಿ ಬ್ಯಾಂಕ್ ಪುತ್ತೂರು.