ಅಕ್ಷಯ ಕಾಲೇಜಿನಲ್ಲಿ “ಸುಸ್ಥಿರತೆ – ಫ್ಯಾಷನ್ ನ ಭವಿಷ್ಯ”   ಎಂಬ  ಶೀರ್ಷಿಕೆಯಡಿ  ಫ್ಯಾಷನ್ ಡಿಸೈನ್ ವಿಭಾಗದಿಂದ  ಕಾರ್ಯಾಗಾರ

0

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ  ಫೆಸೇರ ಫ್ಯಾಷನ್  ಅಸೋಸಿಯೇಷನ್ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ, “ಸುಸ್ಥಿರತೆ – ಫ್ಯಾಷನ್ ನ ಭವಿಷ್ಯ” ಎಂಬ ಶೀರ್ಷಿಕೆಯಡಿ ಫ್ಯಾಷನ್ ಡಿಸೈನ್ ವಿಭಾಗದಿಂದ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ  ನಡೆಯಿತು.

ಕಾರ್ಯಕ್ರಮ ದ ಸಂಪನ್ಮೂಲ ವ್ಯಕ್ತಿಯಾಗಿ  ಮಂಗಳೂರಿನ  ಪ್ರತಿಷ್ಠಿತ “Li’l ohana”  ಸಂಸ್ಥೆಯ ಸ್ಥಾಪಕರು ಹಾಗೂ ಡಿಸೈನರ್ ಮತ್ತು ಸಹ ಪ್ರಾಧ್ಯಾಪಕಿ ಅಲ್ಕಾ ಮನೋಜ್   ಭಾಗವಹಿಸಿದರು. ತಮ್ಮದೇ ಬ್ರ್ಯಾಂಡ್  “ಓಹನಾ” ದ  ಬಗ್ಗೆ ವಿಸೃತ ಮಾಹಿತಿ ನೀಡಿ , ಪರಿಸರ ಸ್ನೇಹಿ ಬಟ್ಟೆ ಬರೆಗಳ ಬಳಕೆ ಮತ್ತು ಉತ್ಪಾದನೆಯನ್ನು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ನಾವು ಪ್ರೋತ್ಸಾಹಿಸಬೇಕು .ನಾವು ಬಳಸುವ ವೈವಿಧ್ಯಮಯ ಉಡುಪುಗಳಲ್ಲಿ ಕೆಲವೊಂದು ಉಪಯೋಗ ಶೂನ್ಯವಾದ ಮೇಲೆ ನಮ್ಮ ಪರಿಸರದಲ್ಲಿ ವಿಲೇವಾರಿ  ಮಾಡುತ್ತೇವೆ ಆದರೆ ಅದು ಮಣ್ಣಿನೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿ ಪರಿಸರಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ವಿವಿಧ  ಕಾಲಘಟ್ಟದಲ್ಲಿ ಬಟ್ಟೆ ಬರೆಗಳ ಉತ್ಪಾದನಾ  ರೀತಿ ಅವುಗಳ ಬಳಕೆ ಮತ್ತು ಉಪಯೋಗಶೂನ್ಯ ವಸ್ತ್ರಗಳ( ತ್ಯಾಜ್ಯಗಳ) ಅಸಮರ್ಪಕ ವಿಲೇವಾರಿಯ ಸಮಸ್ಯೆಗಳ ಬಗ್ಗೆ ಮಾಹಿತಿ  ನೀಡಿ ,ಸುಸ್ಥಿರ ಅಭಿವೃದ್ಧಿಯ  ದೃಷ್ಟಿಯಲ್ಲಿ ಸಮರ್ಪಕವಾದ  ಬಳಕೆ ಮತ್ತು ನಿರ್ವಹಣೆಯ ಮಹತ್ವದ ಬಗ್ಗೆ ತಿಳಿಸಿದರು. 

ಕಾರ್ಯಕ್ರಮದಲ್ಲಿ  ತೃತೀಯ ಪದವಿ ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿನಿಯರಾದ ದೀಕ್ಷಾ  ಸ್ವಾಗತಿಸಿ, ಧನ್ಯ ಶ್ರೀ  ಸಂಪನ್ಮೂಲ ವ್ಯಕ್ತಿಯ ಕಿರು ಪರಿಚಯ ಮಾಡಿದರು.  ಸುಮಾರು  120  ವಿದ್ಯಾರ್ಥಿಗಳು  ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಫ್ಯಾಷನ್ ಡಿಸೈನ್ ವಿಭಾಗದ ಮುಖ್ಯಸ್ಥೆ ಅನುಷಾ ಪ್ರವೀಣ್ ಕುಮಾರ್, ಫೆಸೇರ  ಅಸೋಸಿಯೇಷನ್  ಸಂಯೋಜಕ ಸಹ ಪ್ರಾಧ್ಯಾಪಕ  ಕಿಶನ್  ಎನ್.  ರಾವ್  ,  ಸಹ  ಪ್ರಾಧ್ಯಾಪಕಿಯರಾದ  ಜನೀತ, ಅನನ್ಯ ಭಟ್  ಮತ್ತು ಧನ್ಯ ಶ್ರೀ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here