ಪ್ರಾಮಾಣಿಕವಾಗಿ,ಕಾನೂನಾತ್ಮಕವಾಗಿ ಕೆಲಸ ಮಾಡಿದಾಗ ಭಯವಿಲ್ಲ-ಜುಬಿನ್ ಮೊಹಪಾತ್ರ
ಪುತ್ತೂರು: ಯಾವುದೇ ಕ್ಷೇತ್ರವಿರಲಿ, ವಿದ್ಯಾರ್ಥಿಗಳು ತಾವು ಆರಿಸಿಕೊಂಡ ಕನಸಿನ ಕ್ಷೇತ್ರದಲ್ಲಿ ಪ್ರೀತಿಯಿಂದ, ಗೌರವದಿಂದ ಕೆಲಸ ಮಾಡಿದಾಗ ಯಶಸ್ವಿಯಾಗಬಲ್ಲರು, ಆ ಮೂಲಕ ಸಮಾಜಕ್ಕೆ ದೇಶಕ್ಕೆ ಹೆಸರು ತರುವಂತಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಪ್ರಾಮಾಣಿಕವಾಗಿ, ಕಾನೂನಾತ್ಮಕವಾಗಿ ಕೆಲಸ ಮಾಡುತ್ತಾರೋ ಅವರಿಗೆ ಎಂದಿಗೂ ಭಯವಿಲ್ಲ ಎಂದು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರರವರು ಹೇಳಿದರು.
ಸೆ.22 ರಂದು ಬೆಳಿಗ್ಗೆ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಮಾಯಿದೆ ದೇವುಸ್ ಚರ್ಚ್ ಆವರಣದಲ್ಲಿನ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಡೊನ್ ಬೊಸ್ಕೊ ಕ್ಲಬ್ ಇದರ ಆಶ್ರಯದಲ್ಲಿ ಪುತ್ತೂರಿನ ವಿದ್ಯಾರ್ಥಿ ಸಾಧಕರನ್ನು ಮತ್ತು ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಂಬಲಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ-2024 ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಯಾವುದೇ ಕ್ಷೇತ್ರದಲ್ಲಿರಲಿ, ಪ್ರತಿಭೆಗಳಿಗೆ ಮಿಂಚಲು ಸಾಕಷ್ಟು ಅವಕಾಶವಿದೆ. ಎಲ್ಲರನ್ನು ಗೌರವದಿಂದ ಕಾಣಬೇಕು. ಒಳ್ಳೇದು ಯಾವುದು, ಕೆಟ್ಟದು ಯಾವುದು ಎಂಬುದರ ಅರಿವು ನಮಗಿರಬೇಕು. ಯಾರಿಗೆ ಯಾವ ಕ್ಷೇತ್ರವನ್ನು ಆರಿಸಬೇಕು ಎನ್ನುವ ಕನಸಿದೆಯೋ ಆ ಕ್ಷೇತ್ರವನ್ನು ಆರಿಸಿ ಆ ಕ್ಷೇತ್ರದತ್ತ ಆಸಕ್ತಿ ಬೆಳೆಸಿ ಸಾಧನೆ ಮಾಡುವವರಾಗಿ ಎಂದರು.
ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ಯಾವುದೇ ಧರ್ಮಕ್ಕೆ ಸೀಮಿತವಾಗದೆ ಎಲ್ಲಾ ಧರ್ಮದವರನ್ನು ಗುರುತಿಸಿ ಸಾಧಕರ ಸಾಧನೆಯನ್ನು ಪುರಸ್ಕರಿಸುವ ಕೆಲಸವನ್ನು ಕ್ಲಬ್ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಿದೆ. ದೇವರು ಪ್ರತಿಯೋರ್ವರಿಗೆ ಅವಕಾಶ ಕೊಟ್ಟಿದ್ದಾನೆ. ಆದರೆ ಆ ಅವಕಾಶದ ಸದ್ವಿನಿಯೋಗವಾದಾಗ ದೇವರು ಆಶೀರ್ವಾದ ಮಾಡುತ್ತಾನೆ. ನಾವು ಪರರ ಬಗ್ಗೆ ಒಳಿತ್ತನ್ನು ಆಶಿಸಬೇಕು, ನಕಾರಾತ್ಮಕ ಚಿಂತನೆಗಳನ್ನು ದೂರೀಕರಿಸಿ ಸಕಾರಾತ್ಮಕ ಆಲೋಚನೆಗಳು ನಮ್ಮದಾಗಬೇಕು ಎಂದರು.
ಎಸೆಸ್ಸೆಲ್ಸಿ ಟಾಪರ್ಸ್ ಅಭಿನಂದನೆ:
2023-24ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪರ್ ಎನಿಸಿದ ಅಪೂರ್ವ(ಸೈಂಟ್ ವಿಕ್ಟರ್ಸ್), ಬಳಿಕ ಸೋನಿಕಾ ಕುಟಿನ್ಹಾ, ಪಲ್ಲವಿ ಕೆ.ಜಿ, ಚಿತ್ರಾ ಕೆ.ಪಿ(ಫಿಲೋಮಿನಾ), ಶಮನ್ ಸಿಕ್ವೇರಾ(ಸುದಾನ), ಲಿಶಲ್ ಡಿ’ಸೋಜ, ಇಶಾ ಜೋರ್ಜ್, ಸೊಹಾನಿ ಕುಟಿನ್ಹಾ, ಎರೋಲ್ ಶಮನ್ ಡಿ’ಸೋಜ, ಏಂಜಲಿಕಾ ಮೆಲಾನಿ ಪಿಂಟೊ, ವಿನ್ಸಿಟಾ ಡಿ’ಸೋಜ(ಬೆಥನಿ), ಡೀನಾ ಪರ್ಲ್ ಲೋಬೊ, ಅಲ್ವಿಯಾ ಕ್ರಾಸ್ತಾ, ಶಲೋಮ್ ಡಿ’ಸೋಜ(ವಿಕ್ಟರ್ಸ್)ರವರುಗಳನ್ನು ಅಭಿನಂದಿಸಲಾಯಿತು.
ಪಿಯುಸಿ ಟಾಪರ್ಸ್ ಅಭಿನಂದನೆ:
2023-24ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಟಾಪರ್ ಎನಿಸಿದ ಅಶ್ವಿನ್ ಎಂ, ಜೀವನ್ ಬೆವನ್ ಡಿ’ಸೋಜ, ಗ್ಲೆನ್ ಡಿ’ಸೋಜ, ನಾರಾಯಣ ಭಟ್ ಕೆ.ಜಿ, ಶರಲ್ ಲಿಶಾ ಗಲ್ಬಾವೋ, ಡ್ಯಾರಲ್ ಬ್ರಿನ್ಸನ್ ಪಾಯಿಸ್, ಅನ್ವಿಟ ರಿಯಾ ಡಿ’ಸೋಜ, ಶಲೋಮ್ ಜೆ.ಮಸ್ಕರೇನ್ಹಸ್, ಅಲ್ವಿಟಾ ಗ್ಲ್ಯಾನಿ ಸಿಕ್ವೇರಾ, ರೋಶಲ್ ಡಿ’ಸಿಲ್ವ, ಆನ್ಸಿಲ್ಲ ಅನೀಷ ಮೊಂತೇರೊ, ಹಲೀನಾ ವೆಲೆಂಟೀನಾ ರೆಬೆಲ್ಲೋ(ಫಿಲೋಮಿನಾ), ಅನುಶಾ ಜೇನ್ ಪಾಯಿಸ್ (ಅಂಬಿಕಾ), ಮೆಲ್ರಿಯ ಸ್ಮಿತಾ ಗೊನ್ಸಾಲ್ವಿಸ್(ವಿವೇಕಾನಂದ), ಮರೀನಾ ಮೊಂತೇರೊ(ಬೆಳಿಯೂರುಕಟ್ಟೆ ಸರಕಾರಿ ಕಾಲೇಜು)ರವರುಗಳನ್ನು ಅಭಿನಂದಿಸಲಾಯಿತು.
ರಾಜ್ಯ ಮಟ್ಟದ ರ‍್ಯಾಂಕ್ ವಿಜೇತರಿಗೆ ಅಭಿನಂದನೆ:
ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ರ‍್ಯಾಂಕ್ ಗಳಿಸಿದ ಫಿಲೋಮಿನಾ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಹಲೀಮತ್ ಶೈಮಾ ಪಿ(8ನೇ), ಪ್ರವಣ್ ಪೊನ್ನಪ್ಪ ಎಂ.ಎನ್(10ನೇ), ವಾಣಿಜ್ಯ ವಿಭಾಗದಲ್ಲಿ ಪ್ರತೀಕ್ಷಾ ಡಿ.ಎಸ್(10ನೇ)ರವರನ್ನು ಅಭಿನಂದಿಸಲಾಯಿತು.
ಪದವಿ ರ‍್ಯಾಂಕ್ ವಿಜೇತರಿಗೆ ಅಭಿನಂದನೆ:
ಪದವಿ ಪರೀಕ್ಷೆಯಲ್ಲಿ ಫಿಲೋಮಿನಾ ಕಾಲೇಜಿನ ಸುಶ್ಮಿತಾ ಡಿ’ಸೋಜ(ಬಿಕಾಂ), ಟ್ರೀಸಾ ಸೆಲೆಸ್ತಿಯಾ ಪಿ.ವಿ(ಬಿಎಸ್ಸಿ), ವಿಶ್ಮಿತಾ ಡಿ’ಸೋಜ(ಬಿಕಾಂ), ಎರೆಲ್ ಪ್ರೀಮಾ ತೋರಸ್(ಬಿಸಿಎ), ಲೀನಾ ಎ.ವಿ(ಬಿಸಿಎ), ರಿತೇಶ್ ರೈ ಎಂ(ಬಿಕಾಂ), ಸುಧನ್ವ ಶ್ಯಾಂ(ಬಿಎಸ್ಸಿ), ಅರ್ಪಿತಾ ಕೆ(ಬಿಸಿಎ), ವಿನ್ಯಾ ರೈ(ಬಿಎ), ಹಾಷಿಣಿ ಸಿಂಗ್ ಪಿ(ಬಿಎ), ಅಲೋಶಿಯಸ್ ಕಾಲೇಜಿನ ಮ್ಯಾಕ್ಲಿನ್ ವ್ಯಾಲ್ಸನ್ ಫೆರ್ನಾಂಡೀಸ್(ಬಿಎಸ್ಸಿ), ಲ್ಯಾರನ್ ವೀತ್ ಡಿ’ಸೋಜ(ಬಿಎಸ್ಸಿ), ಜೇನ್ ಇವಾನ್ ಗೆಲಿನಾ ಕುಟಿನ್ಹಾ(ಬಿಎಸ್ಸಿ), ರೈನಾ ಕುಟಿನ್ಹಾ(ಬಿಕಾಂ), ಧಾರವಾಡ ಬಿ.ಎಂ.ಎಚ್.ಇ.ಸಿ’ಎಸ್ ಸಿ.ಎಸ್.ಐ ಕಾಮರ್ಸ್ ಕಾಲೇಜಿನ ಜೋಶುವಾ ಫ್ರೆಡ್ ಲೋಬೊ(ಬಿಕಾಂ), ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರೀಮಲ್ ರೋಶ್ನಿ ಪಿಂಟೊ(ಬಿಎಸ್ಸಿ)ರವರನ್ನು ಅಭಿನಂದಿಸಲಾಯಿತು.
ಸ್ನಾತಕೋತ್ತರ ಟಾಪರ್ಸ್ ಅಭಿನಂದನೆ:
ಸ್ನಾತಕೋತ್ತರ ವಿಭಾಗದಲ್ಲಿ ಟಾಪರ್ಸ್ ಎನಿಸಿದ ಫಿಲೋಮಿನಾ ಕಾಲೇಜಿನ ಚಂದ್ರಾಕ್ಷ(ಎಂಎಸ್ಸಿ), ಸಿತಾರಾ ಶೆರಿನ್(ಎಂ.ಎಸ್.ಡಬ್ಲ್ಯೂ), ಶಶಾಂಕ್ ಕೆ.ಎಂ(ಎಂ.ಎಸ್.ಡಬ್ಲ್ಯೂ), ರೀನಾ ಎ.ವಿ(ಎಂಕಾಂ), ಅಲೋಶಿಯಸ್ ಕಾಲೇಜಿನ ಕ್ಲಿಯೋನಾ ಜ್ಯೋತ್ಸ್ನಾ ಮೊಂತೇರೊ(ಎಂಎಸ್ಸಿ-ಎಸ್.ಡಬ್ಲ್ಯೂ. ಟಿ), ಡೆಲ್ಮಾ ಲೋರಾ ಡಿ’ಕುನ್ಹಾ(ಎಂಎಸ್ಸಿ-ಫುಡ್ ಸೆಕ್ಷನ್), ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಹೆಲ್ರಿನ್ ರಿಯಾ ರೆಬೆಲ್ಲೋ(ಎಂಎಸ್ಸಿ-ಮೈಕ್ರೋ), ಮೈಸೂರು ಜೆ.ಎಸ್.ಎಸ್ ಕಾಲೇಜಿನ ಜೇನ್ ನೀನಾ ಕುಟಿನ್ಹಾ(ಎಂಎಸ್ಸಿ-ಬಯೋಟೆಕ್), ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ಟೇಲನ್ ಡಿ’ಸೋಜ(ಎಂಬಿಎ), ಮಂಗಳೂರು ಎಸ್.ಡಿ.ಎಂ ಕಾಲೇಜಿನ ರೋವ್ಲಿನ್ ಕ್ಲೀಟಾ ಕ್ರಾಸ್ತಾ(ಎಂಬಿಎ)ರವರುಗಳನ್ನು ಅಭಿನಂದಿಸಲಾಯಿತು.
ಪ್ರೊಫೆಶನಲ್ ಸ್ಟಡೀಸ್ ಅಚೀವರ್ಸ್ ಅಭಿನಂದನೆ:
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ತಲಶ್ಯೇರಿ ಸರಕಾರಿ ಬ್ರೆನ್ನನ್ ಟೀಚರ್ಸ್ ಎಜ್ಯುಕೇಶನ್ ಕಾಲೇಜಿನ ಜೆನಿಫರ್ ಕ್ರಾಸ್ತಾ(ಬಿಎಡ್), ಮಂಗಳೂರು ಸೈಂಟ್ ಆನ್ಸ್ ಹೆಲ್ತ್ ಸೈನ್ಸ್ ಇನ್ಸ್ಟಿಟ್ಯೂಟ್ ನ ನೆಲ್ಸನ್ ಜೆ.ಗೊನ್ಸಾಲ್ವಿಸ್(ಬಿಎಸ್ಸಿ ಅನಸ್ತೇಶಿಯಾ), ಅಕ್ಷಯ ಕಾಲೇಜಿನ ಜೆನಿಫರ್ ಡಿ’ಸೋಜ(ಬಿಎಸ್ಸಿ ಫ್ಯಾಷನ್ ಡಿಸೈನಿಂಗ್), ಮಂಗಳೂರು ಕೋಸ್ಟಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿಂತಿಯಾ ಸೀಮಾ ಡಿ’ಸೋಜ(ಮೊಂಟೆಸ್ಸರಿ), ಪುತ್ತೂರು ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಟಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಅಂಜಲಿ ಮರಿಯಾ ಒಲಿವೆರಾ, ಪಯಣ್ ಕೊಂಕಣಿ ಚಿತ್ರದ ನಾಯಕ ನಟನಾಗಿ ನಟಿಸಿದ ಬ್ರಾಯನ್ ಸಿಕ್ವೇರಾ, ಡಾಕ್ಟರೇಟ್ ಪದವಿ ಪಡೆದ ಜೋಸ್ವಿನ್ ವಿನ್ರೋಯ್ ಡಿ’ಕೋಸ್ಟ, ಕ್ರಿಕೆಟ್‌ನಲ್ಲಿ ಕ್ರಿಸ್ ಏಂಜಲ್ ಪಿಂಟೊ, ಕಬಡ್ಡಿಯಲ್ಲಿ ಜುವಾನ್ನಾ ಕುಟಿನ್ಹಾರವರುಗಳನ್ನು ಅಭಿನಂದಿಸಲಾಯಿತು.
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಅನ್ಸಿಯಾ ಪಾಯಿಸ್ ಮತ್ತು ಬಳಗ ಪ್ರಾರ್ಥಿಸಿದರು. ಕ್ಲಬ್ ಅಧ್ಯಕ್ಷ ಆಂತೋನಿ ಒಲಿವೆರಾ ಸ್ವಾಗತಿಸಿ, ಕಾರ್ಯದರ್ಶಿ ಜ್ಯೋ ಡಿ’ಸೋಜ ವಂದಿಸಿದರು. ಸದಸ್ಯರಾದ ಮೆಲ್ವಿನ್ ಪಾಯಿಸ್, ವಿಜಯ್ ಡಿ’ಸೋಜ, ಅನಿಲ್ ಪಾಯಿಸ್, ಜೇಸನ್ ಗ್ಲೆನ್ ಗೊನ್ಸಾಲ್ವಿಸ್, ರೋಹನ್ ಡಾಯಸ್, ಜೋನ್ ಕುಟಿನ್ಹಾರವರು ಅಭಿನಂದಿತರ ಪಟ್ಟಿಯನ್ನು ಓದಿದರು. ಅಭಿನಂದಿತರ ಪೈಕಿ ಅಪೂರ್ವ ಹಾಗೂ ಸುಧನ್ವ ಶ್ಯಾಂ ಅನಿಸಿಕೆ ವ್ಯಕ್ತಪಡಿಸಿದರು. ಸದಸ್ಯ ಇನಾಸ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.
ಭಾರತೀಯ ನಾಗರಿಕ ಸೇವೆಯಲ್ಲಿ ತೊಡಗಿಸಿಕೊಳ್ಳಿ..
ದ.ಕ ಜಿಲ್ಲೆಯು ಬುದ್ದಿವಂತರ ಜಿಲ್ಲೆಯೆಂದು ಕರೆಯಲ್ಪಡುತ್ತದೆಯಾದರೂ ಯಾವುದೇ ವಿದ್ಯಾರ್ಥಿಗಳು ಭಾರತದ ಅತ್ತ್ಯುನ್ನತ ಹುದ್ದೆಯಾದ ಭಾರತೀಯ ನಾಗರಿಕ ಸೇವೆಗೆ ಬರುತ್ತಿಲ್ಲ. ಈ ಹುದ್ದೆಯಲ್ಲಿ ತೊಡಗಿಸಿಕೊಂಡಾಗ ಸಾಕಷ್ಟು ಜ್ಞಾನ ವಿಕಸಿತವಾಗುತ್ತದೆ ಮಾತ್ರವಲ್ಲ ಎಲ್ಲಾ ಕ್ಷೇತ್ರದ ಜನರನ್ನು ಮಾತನಾಡಿ ಸಾಕಷ್ಟು ವಿಷಯಗಳನ್ನು ಕಲಿಯುವ ಜ್ಞಾನಾಸಕ್ತ ಕ್ಷೇತ್ರವಾಗಿದೆ. ಭಾರತೀಯ ನಾಗರಿಕ ಸೇವೆಯನ್ನು ಅಲಂಕರಿಸಬೇಕಾದರೆ ತುಂಬಾ ಶ್ರಮ ಪಡಬೇಕಾಗುತ್ತದೆ, ತ್ಯಾಗ ಮಾಡಬೇಕಾಗುತ್ತದೆ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ದೊಡ್ಡವರಿಲ್ಲ. ದೇಶವು ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿ ನ್ಯಾಯಕ್ಕನುಗುಣವಾಗಿ ಪ್ರಶ್ನೆ ಮಾಡುವ ಧೈರ್ಯ ಸಾರ್ವಜನಿಕರಲ್ಲಿ ಇರಬೇಕಾಗುತ್ತದೆ. ಇತಿಹಾಸ ಗೊತ್ತಿಲ್ಲದವರು ಭವಿಷ್ಯವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂಬಂತೆ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ದೇಶದ ಆಗು ಹೋಗಿನ ಬಗ್ಗೆ ತಿಳಿಯುವವರಾಗಿ.
-ಜುಬಿನ್ ಮೊಹಪಾತ್ರ, ಸಹಾಯಕ ಆಯುಕ್ತರು, ಪುತ್ತೂರು ಉಪ ವಿಭಾಗ
72 ಮಂದಿಗೆ ಅಭಿನಂದನೆ..
-ಎಸೆಸ್ಸೆಲ್ಸಿ ಟಾಪರ್ಸ್ ಅಭಿನಂದನೆ
-ಪಿಯುಸಿ ಟಾಪರ್ಸ್ ಅಭಿನಂದನೆ
-ರಾಜ್ಯ ಮಟ್ಟದ ರ‍್ಯಾಂಕ್ ವಿಜೇತರಿಗೆ ಅಭಿನಂದನೆ
-ಪದವಿ ರ‍್ಯಾಂಕ್ ವಿಜೇತರಿಗೆ ಅಭಿನಂದನೆ
-ಸ್ನಾತಕೋತ್ತರ ಟಾಪರ್ಸ್ ಅಭಿನಂದನೆ
-ಪ್ರೊಫೆಶನಲ್ ಸ್ಟಡೀಸ್ ಅಚೀವರ್ಸ್ ಅಭಿನಂದನೆ