ಕೆದಂಬಾಡಿ ಹಿ.ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘ ರಚನೆ

0

ಅಧ್ಯಕ್ಷ:  ನಿತೇಶ್ ರೈ ಕೋರಂಗ, ಪ್ರಧಾನ ಕಾರ್ಯದರ್ಶಿ: ಪದ್ಮನಾಭ ಗೌಡ  ಮುಂಡಾಲ , ಕೋಶಾಧಿಕಾರಿ:ಮುಸ್ತಫಾ ಗಟ್ಟಮನೆ,

 ಪುತ್ತೂರು: ಕೆದಂಬಾಡಿ ಹಿ, ಪ್ರಾ, ಶಾಲೆ ಹಿರಿಯ ವಿದ್ಯಾರ್ಥಿ ಸಂಘದ ಆಯ್ಕೆ ಪ್ರಕ್ರಿಯೆಯು ಆ.15 ರಂದು ಕೆದಂಬಾಡಿ ಶಾಲಾ ಸಭಾಂಗಣದಲ್ಲಿ ನಡೆದ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆಯಲ್ಲಿ  ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮಯ್ಯ ರೈ ತಿಂಗಳಾಡಿ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರಾಗಿ ರಾಮಯ್ಯ ತಿಂಗಳಾಡಿ, ಅಧ್ಯಕ್ಷ ನಿತೇಶ್ ರೈ ಕೋರಂಗ, ಉಪಾಧ್ಯಕ್ಷರಾಗಿ ಹೈದರ್‌ ಗಟ್ಟಮನೆ ,ಪ್ರಧಾನ ಕಾರ್ಯದರ್ಶಿ ಪದ್ಮನಾಭ ಗೌಡ  ಮುಂಡಾಲ, ಜೊತೆ ಕಾರ್ಯದರ್ಶಿಯಾಗಿ ನಾಸಿರ್ ಗಟ್ಟಮನೆ ಕೋಶಾಧಿಕಾರಿ ಮುಸ್ತಫಾಗಟ್ಟಮನೆ, ಆಯ್ಕೆಯಾದರು. ಸದಸ್ಯರುಗಳಾಗಿ ಕೃಷ್ಣಕುಮಾರ್ ಗೌಡ ಇದ್ಯಪ್ಪೆ, ಸಿರಾಜುಗಟ್ಟಮನೆ, ಕಲಂದರ್ ಷರೀಫ್ ಸಾರೆಪುಣಿ, ಶೇಖರಬಾರಿಕೆ,  ಗೌರವ ಸಲಹೆಗಾರರಾಗಿ ಕಡಮಜಲು ಸುಭಾಶ್ ರೈ, ಚಂದ್ರಹಾಸ ರೈ ಬೋಲೋಡಿ, ವಿಜಯ್ ಕುಮಾರ್ ರೈ ಕೋರಂಗ, ಕರುಣಾಕರ ರೈ ಅತ್ರೆಜಾಲು, ಇಸ್ಮಾಯಿಲ್ ಗಟ್ಟಮನೆ, ನಾಗವೇಣಿ ಕೆ ಆಯ್ಕೆಯಾದರು. ಶಾಲಾ ಮುಖ್ಯ ಗುರುಗಳು, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಎಸ್‌ ಡಿ ಎಂ ಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here