ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯಿಂದ ಸಿ.ಎಸ್.ಆರ್. ಫಂಡ್ ನ ಚೆಕ್ ವಿತರಣೆ

0

ಪುತ್ತೂರು: ಇದೊಂದು‌ ಬಹಳ ಉತ್ತಮ ಕೆಲಸವಾಗಿದೆ. ಸದಾ ಸರಕಾರಿ ಶಾಲೆಗಳಿಗೆ ಸಹಕಾರ ನೀಡುತ್ತಾ ಬಂದಿರುವ ಸಂಸ್ಥೆಯ ಯೋಜನೆ ಅಭಿನಂದನೀಯ.
ಗುಣಮಟ್ಟದ ಶಿಕ್ಷಣವನ್ನು ನೀಡಲು ಇಂತಹ ಸಂಸ್ಥೆಗಳ ನಿಧಿಗಳು ಬಹಳಷ್ಟು ಪ್ರಯೋಜನಕಾರಿಯಾಗಿದೆ. ಸಿ.ಎಸ್.ಆರ್.ಫಂಡ್ ಮೂಲಕ ಅತೀ ಹೆಚ್ಚು ಸರಕಾರಿ ಶಾಲೆಗಳಿಗೆ
ಸಹಕಾರ ನೀಡಿದ ಸಂಸ್ಥೆ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆ ಎನ್ನಲು ನಮಗೆ ಹೆಮ್ಮೆಯಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್. ಹೇಳಿದರು.

ಅವರು ಪುತ್ತೂರಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ನ ಸಿ.ಎಸ್.ಆರ್ ಫಂಡ್ ನಿಂದ ಸರಕಾರಿ ಶಾಲೆಗಳಿಗೆ ಅಗತ್ಯ ಸಾಮಾಗ್ರಿ ಖರೀದಿಗಾಗಿ ಕೊಡಲ್ಪಡುವ ಮೊತ್ತದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ನರಿಮೊಗರು ಕ್ಲಸ್ಟರ್ ನ ಸಿ.ಆರ್.ಪಿ. ಪರಮೇಶ್ವರಿ ಪ್ರಸಾದ್ ರವರು ಮಾತನಾಡಿ ಕಳೆದ ಹಲವಾರು ವರುಷಗಳಿಂದ ಸಂಸ್ಥೆ ಸಿ.ಎಸ್.ಆರ್. ಫಂಡ್ ನ ಮುಖಾಂತರ ಹಲವಾರು ಸರಕಾರಿ ಶಾಲೆಗಳಿಗೆ ಕೊಡುಗೆಗಳನ್ನು ನೀಡಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಇಂತಹ ಸಂಸ್ಥೆಯ ಸಹಕಾರ ಬಹಳಷ್ಟು ಅಗತ್ಯ. ಇಂತಹ ಸಂಸ್ಥೆಗಳಿಗೆ ನಾವು ಹೆಚ್ಚು ಹೆಚ್ಚು ಸಹಕಾರ ನೀಡಬೇಕಿದೆ. ಆಗ ಅವರು ಇನ್ನಷ್ಟು ಹೆಚ್ಚಿನ ಸಹಕಾರ ನೀಡಲು ಪ್ರಯೋಜನವಾಗುತ್ತದೆ ಎಂದರು.

ಮಿತ್ತೂರು ಹಿ.ಪ್ರಾ ಶಾಲಾ ಅಧ್ಯಾಪಕ ಸಂಜೀವ ರವರು ಮಾತನಾಡಿ ಸರಕಾರಿ ಶಾಲೆಗಳಿಗೆ ಸಹಕಾರ ನೀಡುತ್ತಿರುವ ನಿಮ್ಮ ಗುಣ ಅಭಿನಂದನೀಯ. ಇದೊಂದು ಮಾದರಿ ಕೆಲಸ. ನಮ್ಮ ಅನಿವಾರ್ಯತೆಯನ್ನು ಮನಗಂಡು ನಮಗೆ ಸಹಕಾರ ನೀಡಿದ್ದೀರಿ. ಮುಂದಿನ ದಿನಗಳಲ್ಲಿ ನಮ್ಮಿಂದಾಗುವ ಸಹಕಾರ ನಿಮಗೆ ನೀಡುವ ಕೆಲಸ ಮಾಡುತ್ತೇವೆ‌ ಎಂದರು. ಸಂಸ್ಥೆಯ ವ್ಯವಸ್ಥಾಪಕ ರತೀಶ್ ಸಿ.ಪಿ., ಸಹಾಯಕ ವ್ಯವಸ್ಥಾಪಕ ಪ್ರಜೀಶ್, ಅಕೌಂಟ್ಸ್ ವಿಭಾಗದ ರಾಜೇಶ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಿತ್ತೂರು ಸರಕಾರಿ ಉನ್ನತಿಕರಿಸಿದ ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಸರೋಜ, ಸವಣೂರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ರಘು ಬಿ.ಆರ್., ಭಕ್ತಕೋಡಿ ಹಿ.ಪ್ರಾ.ಶಾಲಾ ಮುಖ್ಯೋಪದ್ಯಾಯಾರಾದ ಗೀತಾ ಕುಮಾರಿ, ಅಳಕೆಮಜಲು ಕಿ.ಪ್ರಾ.ಶಾಲಾ ಮುಖ್ಯೋಪದ್ಯಾಯರಾದ ಇಸ್ಮಾಯಿಲ್ ಮೊದಲಾದವರು ಚಿಕ್ ಪಡೆದುಕೊಂಡರು. ಸಿಬ್ಬಂದಿ ರಮ್ಯ ಸ್ವಾಗತಿಸಿ, ಕಾರ್ಯಕ್ರಮನಿರೂಪಿಸಿ, ವಂದಿಸಿದರು.

ಒಟ್ಟು ರೂ 8,87,055 ಮೊತ್ತದ‌ ಚೆಕ್ ವಿತರಣೆ:

ಕಳೆದ ಹಲವಾರು ವರುಷಗಳಿಂದ ಪುತ್ತೂರಿನ ಜನರ ನೆಚ್ಚಿನ ಸಂಸ್ಥೆಯಾಗಿರುವ ಜೋಸ್ ಆಲುಕ್ಕಾಸ್ ಪ್ರತೀ ವರ್ಷ ತನ್ನ ಸಿ.ಎಸ್.ಆರ್. ಫಂಡ್ ಅನ್ನು ಸಮಾಜದಲ್ಲಿ ಹಿಂದುಳಿದಿರುವವರ ಏಳಿಗೆಗಾಗಿ ಹಾಗೂ ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ವಿನಿಯೋಗಿಸುತ್ತಾ ಬಂದಿದೆ. ಈ ಭಾರಿ ಸುಮಾರು 9 ಸರಕಾರಿ ಶಾಲೆಗಳಿಗೆ ಅಗತ್ಯ ಸಾಮಾಗ್ರಿಗಳನ್ನು ಖರೀದಿಸುವ ಸಲುವಾಗಿ 8,87,055 ರೂಪಾಯಿಯ ಚೆಕ್ ಅನ್ನು ಶಾಲೆಗಳಿಗೆ ಹಸ್ತಾಂತರ ಮಾಡಿದೆ.

ಚೆಕ್ ಪಡೆದುಕೊಂಡ ಶಾಲೆಗಳು:
ಸರಕಾರಿ ಉನ್ನತಿಕರಿಸಿದ ಹಿ.ಪ್ರಾ. ಶಾಲೆ ಮಿತ್ತೂರಿಗೆ ರೂ. 43,300, ಶಾಂತಿಗಿರಿ ವಿದ್ಯಾನಿಕೇತನಕ್ಕೆ ರೂ. 2,33,916, ಸರಕಾರಿ ಹಿ.ಪ್ರಾ. ಶಾಲೆ ಭಕ್ತಕೋಡಿಗೆ ರೂ. 1,15,789, ಸರಕಾರಿ ಸಂಯುಕ್ತ ಪ.ಪೂ.ಕಾಲೇಜು ಸವಣೂರಿಗೆ ರೂ. 1,00,00, ಅಳಕೆಮಜಲು ಕಿ.ಪ್ರಾ. ಶಾಲೆಗೆ 30,000, ಕೇಪು ಕಲ್ಲಂಗದ ಪ್ರೌಡ ಶಾಲೆಗೆ ರೂ. 1,14, 500, ಬೆಳಿಯೂರುಕಟ್ಟೆ ಪಿ.ಯು.ಕಾಲೇಜಿಗೆ ರೂ. 46,000, ನರಿಮೊಗರು ಹಿ.ಪ್ರಾ. ಶಾಲೆಗೆ 1,02,250, ಜಿ.ಹೆಚ್.ಪಿ.ಎಸ್.ಈಶ್ವರಮಂಗಲಕ್ಕೆ ರೂ 1,00,800 ಮೊತ್ತದ ಚೆಕ್ ಅನ್ನು ವಿತರಣೆ ಮಾಡಲಾಗಿದೆ.

ಗ್ರಾಹಕರ ಸಹಕಾರಕ್ಕೆ ಆಭಾರಿಯಾಗಿದ್ದೇವೆ – ಸಿ.ಎಸ್.ಆರ್.ಫಂಡ್ ಮೂಲಕ ಇನ್ನಷ್ಟು ಸಹಕಾರ

ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯು‌ ಅರುವತ್ತನೇ ವರ್ಷಾಚರಣೆಯನ್ನು ಬಹಳಷ್ಟು ವಿಜ್ರಂಭಣೆಯಿಂದ ಗ್ರಾಹಕರೊಂದಿಗೆ ಆಚರಿಸಿದೆ. ಪ್ರತೀ ವರ್ಷದಂತೆ ಈ ಭಾರಿಯೂ ಸಂಸ್ಥೆಯು ಸಿ.ಎಸ್.ಆರ್.ಫಂಡ್ ನ ಮುಖಾಂತರ ಒಂಬತ್ತು ಶಾಲೆಗಳಿಗೆ ವಿವಿಧ ಅಗತ್ಯ ಸಾಮಾಗ್ರಿ ಖರೀದಿಗಾಗಿ ಸಹಕಾರ ನೀಡಿದೆ. ಪುತ್ತೂರಿನಲ್ಲಿ ಶಾಖೆ ತೆರೆದ ಬಳಿಕ ಸುಮಾರು 5 ವರ್ಷಗಳಿಂದ ಸಿ.ಎಸ್.ಆರ್. ಫಂಡ ನ ಮುಖಾಂತರ ಸಮಾಜದಲ್ಲಿರುವ ಅಶಕ್ತರ ಚಿಕಿತ್ಸೆಗೆ, ವಿವಿಧ ಸರಕಾರಿ ಶಾಲೆಗಳಿಗೆ ಅಗತ್ಯ ವಸ್ತುಗಳ ಖರೀದಿಗೆ ಸಹಕಾರ ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಸಿ.ಎಸ್.ಆರ್. ಫಂಡ್ ನ ಮುಖಾಂತರ ಇನ್ಮಷ್ಟು ಸಹಕಾರ ನೀಡುವ ಪ್ರಯತ್ನ ನಡೆಸಲಾಗುವುದು. ಸಂಸ್ಥೆಯ ಅರುವತ್ತನೇ ವರ್ಷಾಚರಣೆ ಸಂದರ್ಭದಲ್ಲಿ ಗ್ರಾಹಕರಿಗೆ ಪ್ರತೀ ಖರೀದಿಗೆ ವಿಶೇಷ ರಿಯಾಯಿತಿಯ ಜೊತೆಗೆ ಗ್ರಾಹಕರಿಗೆ ಗಿಫ್ಟ್, ಲಕ್ಕಿ ಕೂಪನ್ ನೀಡಿದೆ. ಅರವತ್ತನೇ ವರ್ಷಾಚರಣೆ ಸಂದರ್ಭದಲ್ಲಿ ಗ್ರಾಹಕರಿಂದ ನಮಗೆ ಉತ್ತಮ ರೀತಿಯ ಸಹಕಾರ ಲಭಿಸಿದೆ. ತಮಗೆಲ್ಲರಿಗೂ ನಾವೂ ಆಭಾರಿಯಾಗಿದ್ದೇವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.
ರತೀಶ್ ಸಿ.ಪಿ., ಶಾಖಾ ವ್ಯವಸ್ಥಾಪಕರು

LEAVE A REPLY

Please enter your comment!
Please enter your name here