ಸೂಪರ್ ಮಾರ್ಕೆಟ್ ನಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಕೈಚಳಕ-ಪೋಷಕರ ಎಂಟ್ರಿ ಬಳಿಕ ಪ್ರಕರಣ ಸುಖಾಂತ್ಯ!

0

ಪುತ್ತೂರು: ಸಿಟಿಯಲ್ಲಿರುವ ಪ್ರಮುಖ ಸೂಪರ್ ಮಾರ್ಕೆಟ್ ನಲ್ಲಿ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳ ತಂಡ ಕಳ್ಳತನ ಮಾಡಿದ್ದು ಈ ದೃಶ್ಯ ಅಲ್ಲಿದ್ದ ಸಿಸಿ ಕೆಮರಾದಲ್ಲಿ ಸೆರೆಯಾದ ಮತ್ತು ಬಳಿಕ ಪ್ರಕರಣವನ್ನು ವಿದ್ಯಾರ್ಥಿಗಳ ಪೋಷಕರ ಉಪಸ್ಥಿತಿಯಲ್ಲಿ ಇತ್ಯರ್ಥಪಡಿಸಿರುವ ಘಟನೆಯೊಂದು ವರದಿಯಾಗಿದೆ.

ಸೆ.24ರಂದು ಇಲ್ಲಿನ ಸೂಪರ್ ಮಾರ್ಕೆಟ್ ಗೆ ಬಂದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ತಂಡವು ಇಲ್ಲಿಂದ ಕೆಲವೊಂದು ವಸ್ತುಗಳನ್ನು ಎಗರಿಸಿದ್ದು, ಇದನ್ನು ಸಿಸಿಕೆಮರಾ ರೆಕಾರ್ಡಿಂಗ್ ನಲ್ಲಿ ಕಂಡ ಇಲ್ಲಿನ ಸಿಬ್ಬಂದಿ ಆ ವಿದ್ಯಾರ್ಥಿಗಳನ್ನು ವಿಚಾರಿಸಿದ್ದಾರೆ. ಬಳಿಕ ಪ್ರಕರಣದ ಗಂಭೀರತೆ ಅರಿತು ಸ್ಥಳಕ್ಕಾಗಮಿಸಿದ ವಿದ್ಯಾರ್ಥಿಗಳ ಪೋಷಕರು ಸದರಿ ವಸ್ತುಗಳ ಹಣವನ್ನು ಪಾವತಿಸುವುದರೊಂದಿಗೆ ಈ ಪ್ರಕರಣ ಸುಖಾಂತ್ಯಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here