ಶಾಸಕಿ ಭಾಗೀರಥಿ ಮುರುಳ್ಯ ಅವರ ಮನೆಯಲ್ಲಿ ಪಂಡಿತ್ ದೀನದಯಾಳು ಉಪಾಧ್ಯಾಯರ ಜನ್ಮದಿನಾಚರಣೆ

0

ಕಾಣಿಯೂರು: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಮನೆಯಲ್ಲಿ ಪಂಡಿತ್ ದೀನದಯಾಳು ಉಪಾಧ್ಯಾಯರ ಜನ್ಮದಿನಾಚರಣೆಯನ್ನು ಬಿಜೆಪಿ ಬೆಳ್ಳಾರೆ ಶಕ್ತಿಕೇಂದ್ರದ ವತಿಯಿಂದ ಸೆ.25ರಂದು ಆಚರಿಸಲಾಯಿತು. ಉಪಾಧ್ಯಾಯರ ಆದರ್ಶಗಳನ್ನು, ತತ್ವಸಿದ್ದಂತಗಳನ್ನು ಹಿರಿಯರಾದ, ಮಂಡಲಸಮಿತಿ ಸದಸ್ಯರಾದ ವಸಂತ ನಡುಬೈಲು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಭಾಗೀರಥಿ ಮುರುಳ್ಯ, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಅನೂಪ್ ಬಿಳಿಮಲೆ, ಶಕ್ತಿಕೇಂದ್ರ ಪ್ರಮುಖ್ ವಸಂತ ಹುದೇರಿ, ಬೂತ್ ಸಮಿತಿ ಸಮಿತಿ ಅಧ್ಯಕ್ಷ ಅಶೋಕ್ ರೈ ಊರುಸಾಗು, 84 ಬೂತ್ ಅಧ್ಯಕ್ಷ ನೇಮಿಶ ಕಡಿರ, ಬೂತ್ ಸಮಿತಿ ಕಾರ್ಯದರ್ಶಿ ರಾಜೇಶ್ ನಳಿಯಾರು, ಮುರುಳ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಸದಸ್ಯರಾದ ಮೊನಪ್ಪ ಅಲೆಕ್ಕಿ, ಕರುಣಾಕರ ಹುದೇರಿ, ಸುಂದರ ಪಾಪುತ್ತಡಿ, ಶೀಲಾವತಿ ಗೊಳ್ತಿಲಾ, ಪುಷ್ಪವತಿ ಪುಕ್ಕಟ್ಟೆ,ಪ್ರಮುಖರಾದ ರಾಧಾಕೃಷ್ಣ ನಳಿಯಾರು, ಶೇಖರ ಸಾಲಿಯಾನ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here