ಪುತ್ತೂರು : ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ ಇದರ 16 ನೇಯ ವಾರ್ಷಿಕೋತ್ಸವ ಸಲುವಾಗಿ , ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮತ್ತು ಒಡಿಯೂರು ಗ್ರಾಮ ವಿಕಾಸ ಯೋಜನೆ ಪುತ್ತೂರು ಘಟಕ ಹಾಗೂ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಇವುಗಳ ಆಶ್ರಯದಲ್ಲಿ ನ.15 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ಅದ್ಧೂರಿಯಾಗಿ ನಡೆಯಲಿರುವ ಹನುಮಯಾಗ ಕಾರ್ಯ , ಒಡಿಯೂರು ಶ್ರೀಗಳ ಪಾದಪೂಜಾ ಕಾರ್ಯಕ್ರಮ ಹಾಗೂ ಸಭಾಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ಸಲುವಾಗಿ , ಒಡಿಯೂರು ವಿವಿಧ ಸಂಘಟನೆಯ ಪುತ್ತೂರು ಘಟಕದ ಪದಾಧಿಕಾರಿಗಳು ತಿರ್ಮಾನಿಸಿದ್ದು , ಆ ಪ್ರಯುಕ್ತ ಕಾರ್ಯಕ್ರಮ ಆಯೋಜನೆಯ ರೂಪುರೇಷೆ ಬಗ್ಗೆ ಪೂರ್ವಭಾವಿ ಸಭೆ ಸೆ.25 ರಂದು ಇಲ್ಲಿನ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.
ಒಡಿಯೂರು ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ಮಾತನಾಡಿ , ದೇವರ ಸೇವೆ ,ಗುರುಸೇವೆ ಹಾಗೂ ಸಮಾಜಸೇವೆ ಈ ಮೂರು ಸೇವೆಯೂ ಪ್ರಮುಖ ಸೇವೆಗಳಾಗಿದ್ದು , ಗುರು ಸೇವೆಯ ಮುಖಾಂತರ ಸಮಾಜ ಸೇವೆಯನ್ನು ನೀಡಲು ಒಂದೊಳ್ಳೇಯ ಅವಕಾಶವೂ ನಮಗೆ ಸಿಕ್ಕಿದ್ದು , ಈ ಮುಖೇನ ಸಮಾಜವನ್ನು ಒಗ್ಗೂಡಿಸಲು ಕೂಡ ಸಹಕಾರಿಯೆಂದು ತಿಳಿಸುವ ಮೂಲಕ ಸಲಹೆ ನೀಡಿದರು.
ಒಡಿಯೂರು ಕ್ಷೇತ್ರದ ಪ್ರತಿನಿಧಿ
ದೇವಿಪ್ರಸಾದ್ ಶೆಟ್ಟಿ , ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ನಯನಾ ರೈ , ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ವ್ಯವಸ್ಥಾಪಕಿ ಪವಿತ್ರ ಸಲಹೆ -ಸೂಚನೆ ನೀಡಿದರು.
ತುಳುನಾಡ ರಥೋತ್ಸವ ಇದರ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ , ಅರ್ಥಿಕ ಕ್ರೋಢಿಕರಣಕ್ಕಿಂತಲೂ ಅತೀ ಮುಖ್ಯವಾಗಿ ಸಿಕ್ಕಿರುವಂತಹ ಜವಾಬ್ದಾರಿಯನ್ನು ತುಂಬ ಅಚ್ಚುಕಟ್ಟಾಗಿ ನಿರ್ವಹಿಸಿದರೆ ಈ ಕಾರ್ಯಕ್ರಮವು ಯಶಸ್ಸು ಕಾಣಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುದೇವಾ ಸೇವಾ ಬಳಗದ ಪ್ರಮುಖರಾದ ಮೋನಪ್ಪ ಪೂಜಾರಿ ಕೆರೆಮಾರು ,ಭವಾನಿ ಶಂಕರ ಶೆಟ್ಟಿ ,ಸೀತಾರಾಮ ರೈ ಕಲ್ಲಡ್ಕಗುತ್ತು ,ವಿಶ್ವನಾಥ ಶೆಟ್ಟಿ ,ಅಶೋಕ್ ಕುಮಾರ್ ರೈ ,ತಾರಾನಾಥ ಗೌಡ ,ಭಾರತಿ ರೈ ಅರಿಯಡ್ಕ ,ಶಶಿಧರ ,ವಿಶ್ವನಾಥ ಶೆಟ್ಟಿ ಸಾಗು , ನವೀನ್ ಚಂದ್ರ ಬೆದ್ರಾಳ , ಶಿವಾನಂದ ಮತ್ತು ಗ್ರಾಮ ವಿಕಾಸ ಯೋಜನೆ ಇದರ ಸಂಯೋಜಕಿಯರಾದ ಜಯಂತಿ ಜಿ , ಶಶಿ ಡಿ , ಸೇವಾ ದೀಕ್ಷೆಯರಾದ ಸುನಂದಾ ರೈ ಮತ್ತು ಸುಜಾತಾ ಸಹಿತ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.
ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೊಂಡಾ ಪ್ರಾಸ್ತವಿಕ ಮಾತನಾಡಿ , ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸುವಲ್ಲಿ ಎಲ್ಲಾ ಸಂಘಟನೆಯ ಪದಧಿಕಾರಿಗಳು , ಸದಸ್ಯರು ಹಾಗೂ ಭಕ್ತರು ಕೈ ಜೋಡಿಸುವಂತೆ ಹೇಳಿ , ಸಹಕಾರ ಕೋರಿ ,ವಂದಿಸಿದರು.ಶಾರದ ಕೇಶವ ಪ್ರಾರ್ಥನೆ ನೆರವೇರಿಸಿ , ಗುರುದೇವಾ ಸೇವಾ ಬಳಗದ ಕಾರ್ಯದರ್ಶಿ ಹರಿಣಾಕ್ಷಿ ಶೆಟ್ಟಿ ವಂದಿಸಿದರು.