ಸೆ.29:ಉಷಾ ಪಾಲಿ ಕ್ಲಿನಿಕ್ ನಲ್ಲಿ ಶ್ವಾಸಕೋಶ ರೋಗ ತಜ್ಞ ಡಾ. ಪ್ರೀತಿ ರಾಜ್ ಬಳ್ಳಾಲ್ ಅವರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಜಂಟಿ ಆಶಯದಲ್ಲಿ ದರ್ಬೆಯ ಉಷಾ ಪಾಲಿ ಕ್ಲಿನಿಕ್ಕಿನಲ್ಲಿ ಸೆ.29 ಆದಿತ್ಯವಾರದಂದು ಬೆಳಗ್ಗೆ 10 ರಿಂದ 11 ತನಕ ಉಚಿತ ಶ್ವಾಸಕೋಶ ರೋಗ ತಪಾಸಣಾ ಶಿಬಿರ ಸರಣಿ ಕಾರ್ಯಕ್ರಮ- 4 ನಡೆಯಲಿದೆ. ಖ್ಯಾತ ತಜ್ಞ ವೈದ್ಯ ಡಾ. ಪ್ರೀತಿ ರಾಜ್ ಬಳ್ಳಾಲ್ ಶಿಬಿರವನ್ನು ನಡೆಸಿಕೊಡಲಿದ್ದಾರೆ.

ಉಸಿರಾಟದ ತೊಂದರೆ, ಅಸ್ತಮಾ, ಅಲರ್ಜಿ , ಪದೇ ಪದೇ ಕಾಡುವ ಕೆಮ್ಮು ,ಕಫ ಸಮಸ್ಯೆ, ಇತ್ಯಾದಿ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆ ಇದ್ದವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು.

ರೋಟರಿ ಕ್ಲಬ್ ಪುತ್ತೂರು ಯುವ ದಶಮಾನೋತ್ಸವದ ಹಾಗೂ ಇನ್ನರ್ ವೀಲ್ ಕ್ಲಬ್ ಇದರ 50ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಇನ್ನು ಮುಂದಿನ 7 ತಿಂಗಳು ಉಷಾ ಪಾಲಿ ಕ್ಲಿನಿಕಿನ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಭಾಗವಹಿಸಲು ನೊಂದಣಿ ಕಡ್ಡಾಯವಾಗಿದೆ. ಅಪ್ಪೋಯಿಂಟ್ಮೆಂಟ್ ಗಾಗಿ 9008256005 ಗೆ ಕರೆ ಮಾಡಬಹುದಾಗಿದೆ ಎಂದು ರೋಟರಿ ಯುವ ಅಧ್ಯಕ್ಷ ಅಶ್ವಿನಿ ಕೃಷ್ಣ ಮುಳಿಯ ಹಾಗೂ ಇನ್ನರ್ ವೀಲ್ ಅಧ್ಯಕ್ಷ ರಾಜೇಶ್ವರಿ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here