ಕನ್ನಡ ಜ್ಯೋತಿ ರಥಯಾತ್ರೆಗೆ ಉಪ್ಪಿನಂಗಡಿಯಲ್ಲಿ ಸ್ವಾಗತ

0

ಉಪ್ಪಿನಂಗಡಿ: “ಕರ್ನಾಟಕ ಸಂಭ್ರಮ-50″ ಇದರ ಅಂಗವಾಗಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನದ ‘ಕನ್ನಡ ಜ್ಯೋತಿ ರಥಯಾತ್ರೆ’ ರಾಜ್ಯಾದ್ಯಂತ ಸಂಚರಿಸಲಿದ್ದು, ಸೆ.30ರಂದು ಉಪ್ಪಿನಂಗಡಿಗೆ ಆಗಮಿಸಿದ ರಥವನ್ನು ಪುತ್ತೂರು ತಾಲೂಕು ಮತ್ತು ಕಡಬ ತಾಲೂಕು ಆಡಳಿತದ ವತಿಯಿಂದ ಸ್ವಾಗತಿಸಿ, ಕಡಬ ತಾಲೂಕಿಗೆ ಬೀಳ್ಕೊಡಲಾಯಿತು.


2023 ನವೆಂಬರ್ 1ರಂದು ಹಂಪೆಯಿಂದ ಹೊರಟ ಕನ್ನಡ ಜ್ಯೋತಿ ರಥ, ಚಿಕ್ಕಮಗಳೂರು ಜಿಲ್ಲೆಯಿಂದ ಮೂಡಿಗೆರೆ ಮೂಲಕ ಬಂದು ಸೆ.29ರಂದು ಬೆಳ್ತಂಗಡಿ ತಾಲ್ಲೂಕು ಪ್ರವೇಶಿಸಿದೆ. ಸೆ.30ರಂದು ಬೆಳಿಗ್ಗೆ ಬೆಳ್ತಂಗಡಿ ತಾಲೂಕಿನ ಗಡಿ ಗ್ರಾಮ ಇಳಂತಿಲದ ಎಚ್.ಎಂ. ಹಾಲ್ ಮುಂಭಾಗದಲ್ಲಿ ರಥವನ್ನು ಬರಮಾಡಿಕೊಂಡು ರಥದಲ್ಲಿದ್ದ ಕನ್ನಡ ತಾಯಿ ಭುವನೇಶ್ವರಿ ಮೂರ್ತಿಗೆ ಕಡಬ ತಹಸೀಲ್ದಾರ್ ಪ್ರಭಾಕರ ಕಜೂರೆ ಮತ್ತು ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೂವಿನ ಹಾರ ಹಾಕಿ ಸ್ವಾಗತಿಸಿದರು.

ಬೆಳ್ತಂಗಡಿ ತಹಶೀಲ್ದಾರ್ ಪಾವಾಡಪ್ಪ ದೊಡ್ಡಮನೆ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಇಳಂತಿಲ ಗ್ರಾಮ ಪಂಚಾಯತ್ ಸದಸ್ಯ ಯೂಸುಫ್ ಪೆದಮಲೆ, ಮಾಜಿ ಸದಸ್ಯ ಫಯಾಝ್ ಯು.ಟಿ. ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here