ಬಡಗನ್ನೂರು: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನವರಾತ್ರಿ ಮಹೋತ್ಸವ ಅ.3 ರಿಂದ 12ರ ತನಕ ನಡೆಯಲಿದೆ. ವಿಶೇಷ ದೀಪಾಲಂಕಾರಗಳ ಜೊತೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ದೇಯಿ ಬೈದೆತಿಗೆ 9 ದಿವಸಗಳಲ್ಲಿಯೂ ವಿಶೇಷ ಅಲಂಕಾರ ಪೂಜೆ ಜರಗಲಿದೆ.
ಅ.3 ರಂದು ಬೆಳಗ್ಗೆ ಗಣಪತಿ ಹವನ, ತೆನೆ ಕಟ್ಟುವ ಮೂಲಕ ಆರಂಭಗೊಳ್ಳಲಿದೆ.
ಭಜನಾ ಕಾರ್ಯಕ್ರಮ;-
18 ವಿವಿಧ ಭಜನಾ ತಂಡಗಳಿಂದ ಶ್ರೀ ಕ್ಷೇತ್ರದಲ್ಲಿ ನಿರಂತರ ಭಜನಾ ಸಂಕೀರ್ತನೆ ನಡೆಯಲಿರುವುದು.ಮಧ್ಯಾಹ್ನ 12.30 ಕ್ಕೆ ಪುಷ್ಪಲಂಕಾರ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನೆರವೇರಲಿದೆ.
ವಿಶೇಷ ಸೇವೆಗೆ ಅವಕಾಶ
ಭಕ್ತಾಧಿಗಳಿಗೆ ವಿಶೇಷ ಸೇವೆಗಳಿಗೆ ಅವಕಾಶ ಮಾಡಲಾಗಿದ್ದು ಮಹಾ ಮಾತೆ ದೇಯಿ ಬೈದೆತಿಗೆ ಪುಷ್ಪಲಂಕಾರ ಮತ್ತು ಅನ್ನದಾನ ಸೇವೆ ಹಾಗೂ ನವರಾತ್ರಿ ಪೂಜಾ ಸೇವೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಅ.12 ವಿಜಯ ದಶಮಿಯ ಪರ್ವ ದಿನದಂದು ಸರಸ್ವತಿ ಪೂಜೆ ಹಾಗೂ ಪೂರ್ವಾಹ್ನ ಗಂ.8ರಿಂದ ಮಧ್ಯಾಹ್ನದವರೆಗೆ ಪುಟಾಣಿಗಳಿಗೆ ಅಕ್ಷರಾಭ್ಯಾಸ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜರಾಜೇಶ್ವರಿ ಸ್ವರೂಪಿಣಿ ಮಹಾ ಮಾತೆ ದೇಯಿ ಬೈದೆತಿ ಹಾಗೂ ಸರ್ವ ಶಕ್ತಿಗಳ ಕೃಪಾಶೀರ್ವಾದವನ್ನು ಪಡೆಯಬೇಕೆಂದು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಪೀತಾಂಬರ ಹೆರಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.