ಪುತ್ತೂರು: ಭಾರತ ಸರಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲ ಶಕ್ತಿ ಸಚಿವಾಲಯದ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪುತ್ತೂರು ನಗರಸಭೆ ವತಿಯಿಂದ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಪುತ್ತೂರು ನಗರದಲ್ಲಿ ಸ್ವಚ್ಚತೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಸೈಕಲ್ ಜಾಥಾ ಅ.1ರಂದು ಪುತ್ತೂರು ದರ್ಬೆ ಬೈಪಾಸ್ ನಿಂದ ಕಿಲ್ಲೆ ಮೈದಾನದ ತನಕ ನಡೆಯಿತು.
ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಕರುಣಾಕರ್ ವಿ ಅವರು ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ಭಾರತ ಸರಕಾರವು ಸೆ.15ರಿಂದ ಅ.2ರ ತನಕ ಸ್ವಚ್ಚತೆಯ ಕುರಿತು ವಿವಿಧ ರೀತಿಯಲ್ಲಿ ಮಾಹಿತಿ ನೀಡುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದರ ಭಾಗವಾಗಿ ಸೈಕಲ್ ಜಾಥಾ ಹಮ್ಮಿಕೊಂಡಿದ್ದೇವೆ ಎಂದರು. ಸುಮಾರು 20 ಮಂದಿ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳು ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದರು. ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಸ್ಕೌಟ್ಸ್ ಮತ್ತು ಗೈಡ್ ಕಾರ್ಯದರ್ಶಿ ವಿದ್ಯಾ ಗೌರಿ, ಎಲ್ ಟಿ ಗೈಡರ್ ಸುನಿತಾ, ಸಂಘಟನಾ ಕಾರ್ಯದರ್ಶಿ ವೇದಾವತಿ, ನಗರಸಭೆಯ ಅಮಿತ್, ನಾಗೇಶ್, ಐತ್ತಪ್ಪ,ಸಂತ ಪಿಲೋಮಿನಾ ಶಾಲೆಯ ಉಪನ್ಯಾಸಕ ಚಂದ್ರಾಕ್ಷ, ಸ್ಕೌಟ್ ಮಾಸ್ಟರ್ ಬೆನೆಟ್ ಮೊಂತೆರೊ, ಗೈಡ್ ಟೀಚರ್ ಐ ವಿ ಗ್ರೇಟಾ ಪಾಯಸ್, ರಾಮಕೃಷ್ಣ ಶಾಲೆಯ ಹರಿಣಿ, ಬೆಥನಿ ಶಾಲೆಯ ಮೈತ್ರೈಯಿ, ಪಾಪೆಮಜಲು ಶಾಲೆಯ ನೇಬಲ್ ಡಿ ಸೋಜ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.