ಪುತ್ತೂರು: ಅಂತರರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಡಿ ಇದರ ಲಯನ್ಸ್ ಕ್ಲಬ್ ಪುತ್ತೂರು ಕಾವು ವತಿಯಿಂದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆ.2-3ರಂದು ಹದಿಹರೆಯದ ಶಿಕ್ಷಕರಿಗೆ ಕೌಶಲ್ಯ ತರಬೇತಿ ಕಾರ್ಯಾಗಾರ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಜರಗಲಿದೆ.
ಉದ್ಘಾಟನೆ: ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ, ಲಯನ್ಸ್ ಕ್ವೆಸ್ಟ್ ಇದರ ಸೀನಿಯರ್ ತರಬೇತುದಾರೆ ಪಿಡಿಜಿ ಕವಿತಾ ಎಸ್.ಶಾಸ್ತ್ರಿ, ವಿಶೇಷ ಅತಿಥಿಗಳಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಡಾ.ಎಂ.ಶಿವಪ್ರಕಾಶ್, ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈರವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಲಯನ್ಸ್ ಕ್ವೆಸ್ಟ್ ನ ಜಿಲ್ಲಾ ಕೋ.ಆರ್ಡಿನೇಟರ್ ಕೆ.ರತ್ನ ಚೆರ್ಮನ್ನ, ವಲಯ ನಾಲ್ಕರ ರೀಜನ್ ಚೇರ್ಮನ್ ಪಾವನರಾಮ್ ರವರು ವಹಿಸಿಕೊಳ್ಳಲಿದ್ದಾರೆ.
ಸಮಾರೋಪ:
ಅ.3ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಲಯನ್ಸ್ ಜಿಲ್ಲಾ ಗವರ್ನರ್ ಬಿ.ಎಂ.ಭಾರತಿ, ಪ್ರಥಮ ಉಪ ಜಿಲ್ಲಾ ಗವರ್ನರ್ ಅರವಿಂದ ಶೆಣೈ, ದ್ವಿತೀಯ ಉಪ ಜಿಲ್ಲಾ ಗವರ್ನರ್ ಎಚ್.ಎಂ.ತಾರಾನಾಥ್ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಲಯನ್ಸ್ ಕ್ವೆಸ್ಟ್ ಇದರ ಸೀನಿಯರ್ ತರಬೇತುದಾರೆ ಕವಿತಾ ಎಸ್.ಶಾಸ್ತ್ರಿ, ವಿಶೇಷ ಆಹ್ವಾನಿತರಾಗಿ ಜಿಲ್ಲಾ ಜಂಟಿ ಸಾರ್ವಜನಿಕ ಸಂಪರ್ಕಾಧಿಕಾರಿ ಕಾವು ಹೇಮನಾಥ ಶೆಟ್ಟಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ರಮೇಶ್ಚಂದ್ರ ನಾಯಕ್ ರವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಲಯನ್ಸ್ ಕ್ವೆಸ್ಟ್ ಪ್ರಾಯೋಜಕತ್ವ ಇದರ ಜಿಲ್ಲಾ ಕೋ-ಆರ್ಡಿನೇಟರ್ ಕೆ.ರತ್ನ ಚೇರ್ಮನ್ನ ಹಾಗೂ ಲಯನ್ಸ್ ವಲಯ ನಾಲ್ಕರ ಪ್ರಾಂತ್ಯ ಅಧ್ಯಕ್ಷ ಪಾವನರಾಮರವರು ವಹಿಸಿಕೊಳ್ಳಲಿದ್ದಾರೆ ಜೊತೆಗೆ ಸುಮಾರು ಮೂವತ್ತಕ್ಕೂ ಮಿಕ್ಕಿ ಶಿಕ್ಷಕರನ್ನು ಅಭಿನಂದಿಸುವ ಕಾರ್ಯಕ್ರಮ ಜರಗಲಿದೆ ಎಂದು ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಜಗನ್ನಾಥ ರೈ ಗುತ್ತು, ಕಾರ್ಯದರ್ಶಿ ದೇವಿಶ್ ರೈ, ಕೋಶಾಧಿಕಾರಿ ಇಬ್ರಾಹಿಂ ಹಾಜಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.