ಅಹಲ್ಯ ರೈಯವರ ಆದರ್ಶ ಬದುಕು ಸಮಾಜಕ್ಕೆ ಮಾದರಿ – ಪನ್ನೆಗುತ್ತು ಕೃಷ್ಣ ರೈ
ಪುತ್ತೂರು: ಪನ್ನೆಗುತ್ತು ಮಾೖಲಪ್ಪ ರೈಯವರ ಪತ್ನಿ ಮುಂಡಾಳಗುತ್ತು ಅಹಲ್ಯ ಎಂ. ರೈಯವರ ಉತ್ತರಕ್ರಿಯೆಯು ಅ.1ರಂದು ಪುತ್ತೂರು ಸ್ವಾಮಿ ಕಲಾಮಂದಿರದಲ್ಲಿ ಜರಗಿತು. ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ನುಡಿನಮನ ಕಾರ್ಯಕ್ರಮ ಜರಗಿತು.
ನುಡಿನಮನ ಕಾರ್ಯಕ್ರಮದಲ್ಲಿ ಪನ್ನೆಗುತ್ತು ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆರವರು ಮಾತನಾಡಿ ಅಹಲ್ಯ ಎಂ.ರೈಯವರು ಪನ್ನೆಗುತ್ತು ಮತ್ತು ಮುಂಡಾಳಗುತ್ತು ಕುಟುಂಬಸ್ಥರ ಪ್ರೀತಿ, ವಿಶ್ವಾಸವನ್ನುಗಳಿಸಿ, ಸಮಾಜದಲ್ಲಿ ಆದರ್ಶಯುತ ಬದುಕನ್ನು ಸಾಗಿಸಿ. ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರು ತಮ್ಮ ಜೀವನದಲ್ಲಿ ತನ್ನ ಬಂಧು ಬಳಗ, ಕುಟುಂಬ ಹಾಗೂ ಊರಿನವರೊಂದಿಗೆ ಸರಳತೆ, ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಬದುಕನ್ನು ಸಾಗಿಸಿ, ಹೆಸರನ್ನು ಪಡೆದಿದ್ದರು. ಸಮರ್ಥ ಮಹಿಳೆಯಾಗಿ, ಉದತ್ತಗುಣಗಳ ಮೂಲಕ, ಎಲ್ಲರ ಪಾಲಿಗೆ ಅಹಲ್ಯರವರು ಅಚ್ಚು ಮೆಚ್ಚಿನವರಾಗಿ, ಇಂದು ಅಜರಾಮರಾಗಿದ್ದಾರೆ, ಅವರ ಜೀವನದ ಉನ್ನತವಾದ ಆದರ್ಶಗಳನ್ನು ನಾವೆಲ್ಲ ಅನುಸರಿಸಿಕೊಂಡು ಬಾಳಬೇಕೆಂದು ನುಡಿನಮನ ಸಲ್ಲಿಸಿದ್ದರು.
ಸಮಾರಂಭದಲ್ಲಿ ಮುಂಡಾಳಗುತ್ತು ಯಜಮಾನ ಶಾಂತರಾಮ ರೈ , ಅಹಲ್ಯ ರೈಯವರ ಮಕ್ಕಳಾದ ರಾಜೇಶ್ ರೈ, ರಾಮೇಶ್ವರಿ ಅಡಪ್ಪ, ಅಳಿಯ ಗೀತಾನಂದ ಅಡಪ್ಪ, ಸೊಸೆ ರಶ್ಮಿ ರೈ, ಮೊಮ್ಮಕ್ಕಳಾದ ಧ್ಯಾನ್ ಅಡಪ್ಪ, ರೆಹಾನ್ ರೈ, ರಿಶಾ ರೈ ಹಾಗೂ ಪನ್ನೆಗುತ್ತು ಮತ್ತು ಮುಂಡಾಳಗುತ್ತು ಕುಟುಂಬಸ್ಥರು, ಹಿತೈಷಿಗಳು ಭಾಗವಹಿಸಿದರು.